KARNATAKA NEWS/ ONLINE / Malenadu today/ Oct 15, 2023 SHIVAMOGGA NEWS
ರಣ್ಯ ಇಲಾಖೆಯಿಂದ ನಡೆದ ಕಾರ್ಯಾಗಾರ ಸಭೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಗ್ರಾಮ ಪಂಚಾಯಿತಿ ಸದಸ್ಯೆಯನ್ನು ಆಹ್ವಾನಿಸದೆ ಕಡೆಗಣಿಸಿ ಅವಾಮಾನಿಸಿದ್ದಾರೆ ಎಂದು ಆರೋಪಿಸಿ ತೀರ್ಥಹಳ್ಳಿ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರು ನೀಡಲಾಗಿದೆ.
ಶೇಡ್ಗಾರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ, ತುಬ್ರಮನೆ ಗ್ರಾಮದ, ತುಬ್ರಮನೆಯಲ್ಲಿ ದಿನಾಂಕ:26-01-23 ರಂದು ಅರಣ್ಯ ಇಲಾಖೆಯ ವತಿಯಿಂದ ಸಿದ್ಧವಿನಾಯಕ ಗ್ರಾಮ ಅರಣ್ಯ ಸಮಿತಿಯ ಸರ್ವ ಸದಸ್ಯರ ಮಹಾಮಂಡಳಿ ಸಭೆಯ ಸಮಗ್ರ ಪುನಃಶ್ವೇತನ ತರಬೇತಿ ಕಾಯಾಗಾರದ ಆಹ್ವಾನ ಪತ್ರಿಕೆಯಲ್ಲಿ ಸ್ಥಳೀಯ ಪಂಚಾಯಿತಿ ಸದಸ್ಯೆಯಾದ ಪರಿಶಿಷ್ಟ ಜಾತಿಗೆ ಸೇರಿದ ಹಾಗೂ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷೆಯಾದ ಸವಿತರನ್ನು ಸಭೆಗೆ ಆಹ್ವಾನಿಸಲಿಲ್ಲ ಎಂಬುದು ಆರೋಪ.
ಅರಣ್ಯ ಇಲಾಖೆಯ ಫಾರಸ್ಟರ್ ಆದ ಸಂಜಯ್ ಆಹ್ವಾನ ಪತ್ರಿಕೆಯಲ್ಲಿ ಉದ್ದೇಶ ಪೂರ್ವಕವಾಗಿ ಸವಿತಾರವರ ಹೆಸರನ್ನು ಕೈಬಿಟ್ಟು ಸಭೆಗೆ ಆಹ್ವಾನಿಸದೆ, ಕಾರ್ಯಕ್ರಮ ನೆಡೆಸಿದ್ದು ಅವಮಾನಿಸಿದ್ದಾರೆ ಎಂದು ದಲಿತ ಸಂಘಟನೆ ಸದಸ್ಯರು ಆರೋಪಿಸಿದ್ದಾರೆ.
ಈ ಸಂಬಂಧ ಅಧಿಕಾರಿಯನ್ನು ಇಲಾಖಾ ತನಿಖೆಗೆ ಒಳಪಡಿಸಿ ಕ್ರಮ ಕೈಗೊಳ್ಳುವ ಮೂಲಕ ನೊಂದ ಮಹಿಳಗೆ ಕೂಡಲೇ ನ್ಯಾಯ ಕೊಡಿಸಿಕೊಡಬೇಕು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.
ಇನ್ನಷ್ಟು ಸುದ್ದಿಗಳು