ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?

Here is the sight of a rare snake found in Chikkamagaluru kalasa ಚಿಕ್ಕಮಗಳೂರಿನ ಕಳಸದಲ್ಲಿ ಕಾಣಿಸಿಕೊಂಡ ಅಪರೂಪದ ಹಾವಿನ ದೃಶ್ಯ ಇಲ್ಲಿದೆ

ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?

KARNATAKA NEWS/ ONLINE / Malenadu today/ Oct 9, 2023 SHIVAMOGGA NEWS



ಚಿಕ್ಕಮಗಳೂರಿನಲ್ಲಿ ಸಿಕ್ಕಹಾವೊಂದು ಇದೀಗ ಸಖತ್ ಸುದ್ದಿಯಾಗುತ್ತಿದೆ ಅಪರೂಪ ಎಂಬಂತೆ ಕಾಣಿಸಿಕೊಳ್ಳುವ ಈ ಹಾವು ಹೀಗೂ ಇರುತ್ತಾ ಎಂಬ ಅನುಮಾನ ಮೂಡಿಸುತ್ತಿದೆ. 

 

ಮಲೆನಾಡ  ಆಡು ಬಾಷೆಯಲ್ಲಿ ಹಸಿರು ಕಂದಡಿ ಎಂದು ಕರೆಯಲ್ಪಡುವ ಹಾವೊಂದು ಕಳಸ ತಾಲೂಕಿನ ಕಳಸೇಶ್ವರ ದೇವಸ್ಥಾನದ ಬಳಿ ಕಾಣಸಿಕ್ಕಿದೆ. ಬಳಿಕ ಹಾವನ್ನ ರಕ್ಷಿಸಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲಾಗಿದೆ. 

ಇದನ್ನ ಇಂಗ್ಲೀಷ್ ನಲ್ಲಿ  ಬ್ಯಾಂಬೋ ಪಿಟ್ ವೈಫರ್ ಎಂದು ಕರೆಯಲಾಗುತ್ತದೆ. ವಿಶೇಷ ಅಂದರೆ, ಈ ಹಾವು ತನ್ನ ಮೈಮೇಲೆ ಬಿದ್ದ ನೀರಿನ ಹನಿಯನ್ನು ಹಾಗೆ ಹೀರಿಕೊಳ್ಳುತ್ತದೆಯಂತೆ. ಬಿದಿರಿನ ನಡುವೆ ವಾಸ ಮಾಡುವ ಈ ಹಾವು, ಅಕ್ಟೋಬರ್​ ತಿಂಗಳ ಹೊತ್ತಿಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದು ಹಾವಿನ ಸಂತಾನೋತ್ಪತ್ತಿಯ ಸಮಯ ಎಂಬುದು ತಜ್ಞರ ಅಭಿಪ್ರಾಯ. 

 

ಅಪರೂಪಕ್ಕೆ  ಕಳಸೇಶ್ವರ ದೇವಸ್ಥಾನದ ಹತ್ತಿರ ಕಾಣಿಸಿಕೊಂಡ ಹಾವನ್ನ ಕಂಡು ಸ್ಥಳೀಯರು ಫೋಟೋ ವಿಡಿಯೋಗಳನ್ನು ತೆಗೆದುಕೊಂಡು, ಆನಂತರ ತಜ್ಞರ ಮೂಲಕ ಹಿಡಿಸಿ ಅರಣ್ಯ ತಲುಪಿಸಿದ್ದಾರೆ.  


 

ಇನ್ನಷ್ಟು ಸುದ್ದಿಗಳು 

 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ