ಶಿವಮೊಗ್ಗ | ಮತದಾನ ಹೆಚ್ಚಾಗುವುದಕ್ಕೆ ಕಾರಣ ತಿಳಿಸಿದ ಮಧು ಬಂಗಾರಪ್ಪ | ರಿಸಲ್ಟ್‌ ನ ಸುಳಿವು !

Shimoga | Madhu Bangarappa explained the reason for the increase in voting Minister hinted about the result, in charge Minister of Shimoga, Madhu Bangarappa News, Malnad News,

ಶಿವಮೊಗ್ಗ | ಮತದಾನ ಹೆಚ್ಚಾಗುವುದಕ್ಕೆ ಕಾರಣ ತಿಳಿಸಿದ ಮಧು ಬಂಗಾರಪ್ಪ | ರಿಸಲ್ಟ್‌ ನ ಸುಳಿವು !
Madhu Bangarappa,in charge Minister of Shimoga, Madhu Bangarappa News, Malnad News,

SHIVAMOGGA | MALENADUTODAY NEWS | May 8, 2024  

ಶಿವಮೊಗ್ಗ ಲೋಕಸಭೆ ಚುನಾವಣೆಯಲ್ಲಿ ಮತದಾನ ಜಾಸ್ತಿ ಆಗಲು ಸರ್ಕಾರದ ಮೇಲೆ ಜನರಿಗೆ ವಿಶ್ವಾಸವೇ ಕಾರಣವಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿಂದು ಮಾತನಾಡಿದ ಅವರು ಜಿಲ್ಲೆಯ ಮತದಾರರಿಗೆ ಗೀತಾ ಶಿವರಾಜ್ ಕುಮಾರ್ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದು ಹೇಳಿದರು. 

 

ಗೀತಾ ಶಿವರಾಜ್ ಕುಮಾರ್ ಐದು ದಿನ ಬಿಟ್ಟು ಬರ್ತಾರೆ. ನಮ್ಮ ನಿರೀಕ್ಷೆ ಮೀರಿ ಬೆಂಬಲ ವ್ಯಕ್ತವಾಗಿದೆ. ನಾವು ಅಜೆಂಡಾ ಇಟ್ಟುಕೊಂಡು ಚುನಾವಣೆ ಮಾಡಿದ್ದೇವೆ. ಗ್ಯಾರಂಟಿಯ ವಿಶ್ವಾಸದ ಮೂಲಕ ಜನ ಮತ ನೀಡಿದ್ದಾರೆ ಎಂದು ಮಧು ಹೇಳಿದ್ದಾರೆ. ಗ್ಯಾರಂಟಿ ಕೊಟ್ಟು ಮಾತು ಉಳಿಸಿಕೊಂಡಿದ್ದೇ ನಮ್ಮ ದೊಡ್ಡ ಆಸ್ತಿ ̤ ಅಭಿವೃದ್ಧಿ ಅಂದರೆ ರಸ್ತೆ, ಕಟ್ಟಡಗಳು ಮಾತ್ರ ಅಲ್ಲ. ಜನರನ್ನ ಆರ್ಥಿಕ ಸುಧಾರಣೆ ತರಬೇಕು ಎಂದು ಗ್ಯಾರಂಟಿ ತಂದಿದ್ದೇವೆ. ಸಾಹುಕಾರನ ಬಳಿ ಹಣ ಇರಬಾರದು ಜನ ಸಾಮಾನ್ಯನ ಬಳಿ ಹಣ ಇರಬೇಕು. ಮತದಾನ ಜಾಸ್ತಿ ಆಗಲು ಕಾರಣ, ಸರ್ಕಾರದ ಮೇಲೆ ಜನರಿಗೆ ಹೆಚ್ಚಾಗಿರುವ ವಿಶ್ವಾಸ ಎಂದಿದ್ದಾರೆ. 

 

ಜೈಕಾರ ಹಾಕಿದರೇ ಮತ ಸಿಗಲ್ಲ ಸರ್ಕಾರದ ಋಣದಲ್ಲಿ ಇದ್ದೇವೆ ಎಂದು ಜನ ಮತ ಹಾಕಿದ್ದಾರೆ. ಜಾತಿ,ಭೇದ ಧರ್ಮದ ಮೇಲೆ ಬಿಜೆಪಿ ಚುನಾವಣೆ ಮಾಡಿದೆ. ಕಾಂಗ್ರೆಸ್ ಪರವಾಗಿ ಮತಗಳು ಪರಿವರ್ತನೆ ಆಗಿದೆ. ಬಾರಿ ದೊಡ್ಡ ಮಟ್ಟದಲ್ಲಿ ಗೀತಾ ಶಿವರಾಜ್ ಕುಮಾರ್ ಗೆಲ್ಲುತ್ತಾರೆ ಎಂದು ಮಧು ಬಂಗಾರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜನರ ವಿಶ್ವಾಸ ನೋಡಿದರೆ ಮತ ಹೆಚ್ಚು ಬರುತ್ತೆ. ಆದರೆ ಎಷ್ಟು ಬರುತ್ತೆ ಎಂದು ನಾನು ಬಸ್ ಸ್ಟ್ಯಾಂಡ್ ನಲ್ಲಿ ಭವಿಷ್ಯ ಹೇಳೋಕೆ ಆಗುವುದಿಲ್ಲ ಎಂದರು.  ಹತ್ತು ಜನರಲ್ಲಿ ಏಳು ಜನ ನಮಗೆ ಮತ ನೀಡಿದ್ದಾರೆ. 

 

ಬರಗಾಲ ಹಣ ಬಿಡುಗಡೆ ವಿಚಾರದಲ್ಲಿ ಕೇಂದ್ರ ಜಿಪುಣತನ ತೋರಿದೆ. ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಸರ್ಕಾರದ ಬಳಿ ಹಣ ಇದೆ ಹಾಗಾಗಿ ಸಮಸ್ಯೆ ಆಗಬಾರದು. ನಾಳೆ ಎಸ್ಎಸ್ಎಲ್ಸಿ ಪಲಿತಾಂಶ ಬರುತ್ತೆ. ಕಾಡಾನೆ ಹಾವಳಿ ತಡೆಗಟ್ಟಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸರ್ಕಾರದಿಂದ ಪರಿಹಾರ ಕೊಡಿಸುವ ಪ್ರಯತ್ನ ಮಾಡಬೇಕಿದೆ ಎಂದ ಅವರು ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರ ರಾಜ್ಯದಲ್ಲಿ ಕಾನೂನು ಇದೆ ಕಾನೂನು ನೋಡಿಕೊಳ್ಳುತ್ತೆ. ನಾನು ಈ ಬಗ್ಗೆ ಹೆಚ್ಚು ಹೇಳಲು ಹೋಗುವುದಿಲ್ಲ. ಯಾರಿಗೆ ತೊಂದರೆ ಆಗಿದೆ ಅವರಿಗೆ ನ್ಯಾಯ ಕೊಡಿಸುತ್ತೇವೆ ಎಂದು ಮಧು ಬಂಗಾರಪ್ಪ ಹೇಳಿದ್ದಾರೆ.