ಶಿವಮೊಗ್ಗದಲ್ಲಿ ಇಂದಿನಿಂದ ಮನೆಮನೆ ಮತದಾನ | ಏನಿದು | ಹೇಗೆ ನಡೆಯುತ್ತೆ ಪ್ರಕ್ರಿಯೆ

Door-to-door voting in Shimoga from today

ಶಿವಮೊಗ್ಗದಲ್ಲಿ ಇಂದಿನಿಂದ ಮನೆಮನೆ ಮತದಾನ | ಏನಿದು | ಹೇಗೆ ನಡೆಯುತ್ತೆ ಪ್ರಕ್ರಿಯೆ
Door-to-door voting

 

SHIVAMOGGA | MALENADUTODAY NEWS | Apr 25, 2024    

 

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಇವತ್ತಿನಿಂದ ಎರಡು ದಿನ  (ಏ.25 ಮತ್ತು 26ರಂದು) ಮನೆ ಮನೆ ಮತದಾನ ನಡೆಯಲಿದೆ. ಇದಕ್ಕಾಗಿ ಅಧಿಕಾರಿಗಳು ಸಜ್ಜುಗೊಂಡಿದ್ದು, ಮನೆಯಿಂದಲೇ ಮತದಾನ ಮಾಡುವವರಿಗಾಗಿ ಈ ಸೌಲಭ್ಯ ಕಲ್ಪಿಸಲಾಗಿದೆ.  

 

ಏ.25 ಮತ್ತು 26ರಂದು ಮನೆ ಮನೆ ಮತದಾನ ಪ್ರಕ್ರಿಯೆ ನಡೆಯಲಿದೆ. ಇದಕ್ಕಾಗಿ ನಿಯೋಜನೆಗೊಂಡ ತಂಡದ ಸದಸ್ಯರು ಈ ಮೊದಲೇ ನೊಂದಾಯಿಸಿಕೊಂಡವರ ಮನೆಗಳಿಗೆ ಭೇಟಿ ನೀಡಲಿದೆ. ಅಲ್ಲಿಂದಲೇ ಮತದಾರರಿಂದ ಮತ ಚಲಾಯಿಸಿಕೊಂಡು ಸಿಬ್ಬಂದಿ ವಾಪಸ್‌ ಆಗಲಿದ್ದಾರೆ. 

 

ಚುನಾವಣೆ ಆಯೋಗವು ಮನೆಯಿಂದಲೇ ಮತದಾನ ಮಾಡುವುದಕ್ಕೆ ಅವಕಾಶ ಕಲ್ಪಿಸಿದ್ದರಿಂದ ಈ ಸೌಲಭ್ಯ ಒದಗಿಸಲಾಗಿದೆ. ಇನ್ನೂ ಶಿವಮೊಗ್ಗದಲ್ಲಿ 2515 ಹಿರಿಯ ನಾಗರಿಕರು ಮತ್ತು 1064 ವಿಶೇಷಚೇತನರು ಈ ಸೌಲಭ್ಯದ ಅಡಿಯಲ್ಲಿ ತಮ್ಮ ಹೆಸರನ್ನು  ನೋಂದಾಯಿಸಿಕೊಂಡಿದ್ದಾರೆ. ಮನೆಮನೆ ಮತದಾನಕ್ಕಾಗಿ 161 ಅಬ್‌ರ್ಸ್‌ವರ್‌ರನ್ನ ನಿಯೋಜಿಸಿದ್ದು, 147 ಮಾರ್ಗಗಳನ್ನು ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗೆಡೆ ತಿಳಿಸಿದ್ದಾರೆ.