ಮೆಹಂದಿ ಯಲ್ಲಿ ಮತದಾನ | ಶಿವಮೊಗ್ಗ ಮಹಾನಗರ ಪಾಲಿಕೆಯ ಹೊಸ ಪ್ರಯತ್ನ

Voting in Mehndi | Shimoga Mahanagara Palike Office A new initiative

ಮೆಹಂದಿ ಯಲ್ಲಿ ಮತದಾನ | ಶಿವಮೊಗ್ಗ ಮಹಾನಗರ ಪಾಲಿಕೆಯ ಹೊಸ ಪ್ರಯತ್ನ
Shimoga Mahanagara Palike Office

SHIVAMOGGA | MALENADUTODAY NEWS |  Apr 20, 2024  

 

ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಇದರ ನಡುವೆ ಅಧಿಕಾರಿಗಳು ಮತಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಮೆಹಂದಿಯಲ್ಲಿ ಮತದಾನ ಅಭಿಯಾನ ಕೈಗೊಳ್ಳಲಾಗಿದೆ. 

ಲೋಕಸಭಾ ಚುನಾವಣೆ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಟಿಪ್ಪು ನಗರದಲ್ಲಿ ಈ ದಿನ ಅಲ್ಪಸಂಖ್ಯಾತ ಮಹಿಳೆಯರಿಗೆ ಮತದಾನ ಜಾಗೃತಿಯನ್ನು ಮೆಹಂದಿಯಲ್ಲಿ ಮತದಾನ ಘೋಷಣೆಯನ್ನು ಬರೆಸುವುದರ ಮೂಲಕ ಮಾಡಿಸಲಾಯ್ತು ಹಾಗೂ ಪ್ರತಿಜ್ಞಾ ವಿಧಿ ಭೋದಿಸಲಾಯ್ತು ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮಹಿಳೆಯರು ಪಾಲಿಕೆಯ ಸ್ವೀಪ್ ಅಧಿಕಾರಿ ಸಿಬ್ಬಂದಿಗಳು ಆ ಭಾಗದ ಬಿ ಎಲ್ ಓ ಪಾಲ್ಗೊಂಡಿದ್ದರು.