ಕೆಇ ಕಾಂತೇಶ್​ಗೆ ಟಿಕೆಟ್​! ಕೊಲ್ಲೂರು ಮೂಕಾಂಬಿಕೆ ಮೊರೆಹೋದ ಕೆ.ಎಸ್​.ಈಶ್ವರಪ್ಪ ! ವೀರಭದ್ರ ದೇವರಿಗೆ ಕಾಯಿ ಅರ್ಪಿಸಿ ಹೇಳಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram
ಕೆಇ ಕಾಂತೇಶ್​ಗೆ ಟಿಕೆಟ್​!  ಕೊಲ್ಲೂರು ಮೂಕಾಂಬಿಕೆ ಮೊರೆಹೋದ ಕೆ.ಎಸ್​.ಈಶ್ವರಪ್ಪ ! ವೀರಭದ್ರ ದೇವರಿಗೆ ಕಾಯಿ ಅರ್ಪಿಸಿ ಹೇಳಿದ್ದೇನು?

shivamogga Mar 13, 2024Kollur Mookambika  ಬಿಜೆಪಿ ಟಿಕೆಟ್ ಗೊಂದಲದ ನಡುವೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ  ಕೊಲ್ಲೂರು ಮೂಕಾಂಬಿಕಾ ದೇವರ ಮೊರೆಹೋಗಿದ್ದಾರೆ. ದೇವಸ್ಥಾನಕ್ಕೆ ನಿನ್ನೆ ಭೇಟಿಕೊಟ್ಟ ಅವರು ವಿಶೇಷ ಪೂಜೆ ಸಲ್ಲಿಸಿ ಹರಕೆ ಕಟ್ಟಿದ್ದಾರೆ. 

ತಮ್ಮ ಮಗ ಕೆ.ಇ.ಕಾಂತೇಶ್​ರಿಗೆ ಲೋಕಸಭೆ ಟಿಕೆಟ್ ಸಿಗುವಂತೆ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಿದ ಅವರು ಕುಟುಂಬ ಸಮೇತರಾಗಿ ಕೊಲ್ಲೂರು ಮೂಕಾಂಬಿಕೆ ದರ್ಶನ ಪಡೆದಿದ್ದಾರೆ. ಅಲ್ಲದೆ ಅಲ್ಲಿಯೇ ಇರುವ ವೀರಭದ್ರ ದೇವರಿಗೆ ಕಾಯಿ ಸಮರ್ಪಿಸಿದರು.

ಈ ವೇಳೆ, ಮಾತನಾಡಿದ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಮಗ ಕಾಂತೇಶ್ ಹಾವೇರಿಯಿಂದ ಸ್ಪರ್ಧೆ ಮಾಡಬೇಕು ಎಂದು ಬಯಸಿದ್ದಾನೆ. 

ಈ ಬಗ್ಗೆ ಮೂಕಾಂಬಿಕೆಯ ಬಳಿ ಪೂಜೆ ಮಾಡಿ ಬೇಡಿಕೊಂಡಿದ್ದೇನೆ. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲಲಿ ಎಂದು ಪ್ರಾರ್ಥಿಸಿದ್ದೇನೆ. ಕಾಂತೇಶ್​ಗೆ ಟಿಕೆಟ್ ಸಿಗುತ್ತದೆ ಎಂಬ ನಂಬಿಕೆ ಇದೆ. ಅಲ್ಲದೆ  ಆತ ಗೆಲ್ಲುತ್ತಾನೆ ಎಂಬ ವಿಶ್ವಾಸವಿದೆ ಎಂದರು. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಕೂಡ ಪ್ರಾರ್ಥನೆ ಮಾಡಿದ್ದೇನೆ ಎಂದಿದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor