ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಭಕ್ತರ ಚಿನ್ನ ಕದ್ದಿದ್ದ ತೀರ್ಥಹಳ್ಳಿ ಮೂಲದ ಕಳ್ಳ ಶಿವಮೊಗ್ಗದಲ್ಲಿ ಅರೆಸ್ಟ್!

Thirthahalli-based thief arrested in Shivamogga for stealing gold from devotees at Kollur Mookambika temple

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಭಕ್ತರ ಚಿನ್ನ ಕದ್ದಿದ್ದ ತೀರ್ಥಹಳ್ಳಿ ಮೂಲದ  ಕಳ್ಳ ಶಿವಮೊಗ್ಗದಲ್ಲಿ ಅರೆಸ್ಟ್!

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS 

ಶಿವಮೊಗ್ಗ/ ಕುಂದಾಪುರ / ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ  (kolluru mookambika temple)ಕ್ಕೆ ಬಂದಿದ್ದ ಭಕ್ತರ ಚಿನ್ನಾಭರಣ ಕದ್ದಿದ್ದ ಆರೋಪಿಯನ್ನು ಶಿವಮೊಗ್ಗ ಬಸ್ ನಿಲ್ದಾಣದಲ್ಲಿ  ಕೊಲ್ಲೂರು ಪೊಲೀಸರು ಸೆರೆಹಿಡಿದಿದ್ದಾರೆ. ಆರೋಪಿ ತೀರ್ಥಹಳ್ಳಿ ಮೂಲದ ಬಿ.ಜೆ.ಗಿರೀಶ್ ಎಂದು ಗೊತ್ತಾಗಿದೆ. 

ನಡೆದಿದ್ದೇನು?

ಕಾಸರಗೋಡು ಮೂಲದ ಮಹಿಳೆಯೊಬ್ಬರ ವ್ಯಾನಿಟಿಬ್ಯಾಗ್​ನ್ನಆರೋಪಿ ಕಳವು ಮಾಡಿದ್ದ ಕಳೆದ .ಜೂನ್ 04 ರಂದು ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿನ ಆವರಣದಲ್ಲಿ ಕಳ್ಳತನ ನಡೆದಿತ್ತು.  

ಈ ಪ್ರಕರಣ ಸಂಬಂಧ ಆರೋಪಿಯನ್ನ ಕೊಲ್ಲೂರು ಪೊಲೀಸರು ಸೆರೆಹಿಡಿದಿದ್ಧಾರೆ. ಆರೋಪಿ ತೀರ್ಥಹಳ್ಳಿಯ ಕಂಧಕ ಗ್ರಾಮದ ನಿವಾಸಿಯಾಗಿದ್ಧಾನೆ. ಈತನ  ಬಳಿಯಿಂದ 4,75,000 ರೂ. ಮೌಲ್ಯದ 108 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. 


ನೀರಿಳಿದ ಹೊಳೆಯಲ್ಲಿ ಉದ್ಭವಿಸಿದ ಶಿವ, ನಂದಿ , ಗಣೇಶ! ಏನಿದು ವೈಚಿತ್ರ್ಯ?

ಸದ್ಯ ಮಲೆನಾಡಿನಲ್ಲಿ ಮಳೆಯಾಗುತ್ತಿದೆ. ಆದರೆ ವರ್ಷಧಾರೆಯ ಮುದ ನೋಡುವುದಕ್ಕೂ ಮೊದಲೂ ಹೊಳೆಗಳೆಲ್ಲಾ ಖಾಲಿಯಾಗಿ ಬರದ ಆಹ್ವಾನ ನೀಡುತ್ತಿದ್ದವು. ಈ ಮಧ್ಯೆ ಹೊಳೆಗಳಲ್ಲಿ ಮುಳುಗಿದ್ದ ದೇವಾಲಯಗಳು ಸಹ ಪ್ರತ್ಯಕ್ಷವಾಗಿದ್ದವು. ಆದರೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲ್ಲೂಕಿನ ಕಗ್ಗನಳ್ಳ ಎಂಬಲ್ಲಿ ಮೂರು ಮೂರ್ತಿಗಳು ಹೊಳೆಯಲ್ಲಿ ಘೋಚರಿಸಿದ್ದು ಅಚ್ಚರಿ ಮೂಡಿಸಿದೆ. 

ಭದ್ರಾ ನದಿಯಲ್ಲಿ ಶಿವ, ನಂದಿ ಹಾಗೂ ಗಣೇಶನ ಮೂರ್ತಿಗಳು ಘೋಚರಿಸಿವೆ. ನೀರಿನಲ್ಲಿ ಮೂರ್ತಿಗಳು ಕೊಚ್ಚಿಕೊಂಡು ಬಂದಿರುವಂತೆ ಕಾಣುತ್ತಿವೆ. ಅಲ್ಲದೆ ಮೂರು ಮೂರ್ತಿಗಳು ಒಂದೆ ಕಡೆಯಲ್ಲಿದ್ದು ಎದುರುಬದುರು ಇಟ್ಟಂತಿವೆ. ಇನ್ನೂ ಸುತ್ತಮುತ್ತ ಯಾವುದೇ ಶಿವನ ದೇವಾಲಯಗಳು ಇಲ್ಲ ಎಂದು ಸ್ಥಳೀಯರು ಹೇಳುತ್ತಾರೆ. ಕಾಡಿನಲ್ಲಿರುವ ಯಾವುದೋ ದೇವಾಲಯದ ಭದ್ರೆಯ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿರಬಹುದು ಎಂದು ಊಹಿಸಿದ್ಧಾರೆ.  


ಪೆಟ್ರೋಲ್ ಬಂಕ್ ಸಿಬ್ಬಂದಿಗೆ ಹಲ್ಲೆ ಮಾಡ್ತಿರುವುದನ್ನ ಪ್ರಶ್ನಿಸಿದ್ದಕ್ಕೆ ಯುವಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್!

ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದ ಹಲ್ಲೆ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಮೂವತ್ತನೇ ತಾರೀಖು ನಡೆದ ಘಟನೆಯಲ್ಲಿ ಪೆಟ್ರೋಲ್ ಬಂಕ್ ವೊಂದರ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವುದನ್ನ ತಪ್ಪಿಸಲು ಹೋದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಸಂಬಂಧ ತುಂಗಾ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 

ನಡೆದಿದ್ದೇನು? 

ಗೋಪಾಳದಲ್ಲಿರುವ ಪೆಟ್ರೋಲ್​ ಬಂಕ್​ವೊಂದರ ಸಮೀಪ ಇರುವ ಜಿಮ್​ವೊಂದರಲ್ಲಿ ದೂರುದಾರ ಯುವಕ ಕೋಚ್ ಆಗಿ ಕೆಲಸ ಮಾಡುತ್ತಿದ್ಧಾನೆ. ಘಟನೆ ದಿನ ಕೆಲಸ ಮುಗಿಸಿ ಮನೆಗೆ ಹೊರಟ ಸಂದರ್ಭದಲ್ಲಿ ಪೆಟ್ರೋಲ್​ ಬಂಕ್​ನಲ್ಲಿರುವ ಸಿಬ್ಬಂದಿಗೆ ಕೆಲವರು ಹಲ್ಲೆ ಮಾಡುತ್ತಿರುವುದನ್ನ ನೋಡಿದ್ದಾರೆ. ತಕ್ಷಣವೇ ಅಲ್ಲಿಗೆ ಹೋಗಿ ಯಾಕೆ ಹಲ್ಲೆ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಅಲ್ಲಿ ದಾಂಧಲೆ ನಡೆಸ್ತಿದ್ದ ದುಷ್ಕರ್ಮಿಗಳ ಗುಂಪು, ದೂರುದಾರ ಯುವಕನ ಮೇಲೂ ಹಲ್ಲೆ ಮಾಡಿ, ಕೈಯಲ್ಲಿದ್ದ ಮಾರಕಾಸ್ತ್ರದಿಂದ ತಲೆಗೆ ಹೊಡೆದಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಇನ್ನೂ ಘಟನೆ ಸಂಬಂಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ನಡೆಸ್ತಿದ್ಧಾರೆ.