ಶಿವಮೊಗ್ಗ ಗ್ಯಾಂಗ್‌ ವಾರ್‌ | ಮಾಜಿ ಗೃಹಸಚಿವ, ಶಿವಮೊಗ್ಗ MLA ಹೇಳಿದ್ದೇನು | ಪೊಲೀಸರಿಗೆ ಜೇಡರ ಬಲೆಯಾಯ್ತಾ ಪ್ರಕರಣ

Shimoga Gang War | What former Home Minister, Shimoga MLA said A case of spider traps for the policeSP Mithun Kumar, Araga Gyanendra, SN Channabasappa, Shimoga Gang War Case, Shimoga Crime News

ಶಿವಮೊಗ್ಗ ಗ್ಯಾಂಗ್‌ ವಾರ್‌ | ಮಾಜಿ ಗೃಹಸಚಿವ,  ಶಿವಮೊಗ್ಗ MLA  ಹೇಳಿದ್ದೇನು | ಪೊಲೀಸರಿಗೆ ಜೇಡರ ಬಲೆಯಾಯ್ತಾ ಪ್ರಕರಣ
SP Mithun Kumar, Araga Gyanendra, SN Channabasappa, Shimoga Gang War Case, Shimoga Crime News

SHIVAMOGGA | MALENADUTODAY NEWS | May 10, 2024  

ಶಾಸಕ ಎಸ್.ಎನ್.ಚನ್ನಬಸಪ್ಪ  

ಶಿವಮೊಗ್ಗ ಲಷ್ಕರ್‌ ಮೊಹಲ್ಲಾದಲ್ಲಿ ನಡೆದ ಜೋಡಿ ಕೊಲೆ ಹಾಗೂ ಇನ್ನೊಬ್ಬನ ಹತ್ಯೆ ಪ್ರಕರಣ ಸಂಬಂಧ ಶಿವಮೊಗ್ಗದ ಜನಪ್ರತಿನಿಧಿಗಳು ಸಿಟ್ಟಾಗಿದ್ದಾರೆ. ಈ ಸಂಬಂಧ ಅವರದ್ದೆ ಆದ ಅಭಿಪ್ರಾಯವನ್ನು ನೀಡಿದ್ದಾರೆ. ಇಷ್ಟಕ್ಕೂ ಅವರುಗಳು ಏನು ಹೇಳಿದ್ದಾರೆ ಎನ್ನುವುದನ್ನ ನೋಡುವುದಾದರೆ, ಈ ಸಂಬಂಧ ಸುದ್ದಿಗೋಷ್ಟಿಯನ್ನೆ ನಡೆಸಿದ ಶಾಸಕ ಎಸ್.ಎನ್.ಚನ್ನಬಸಪ್ಪ  ಇಡೀ ಘಟನೆಗೆ ಪೊಲೀಸರ ವೈಫಲ್ಯವೇ ಕಾರಣ  ಎಂದು ದೂರಿದ್ದಾರೆ. 

ಶಿವಮೊಗ್ಗದಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದೆ. ಚುನಾವಣೆಯ ದಿನ ಲಾಂಗು ಮಚ್ಚುಗಳು ಪ್ರದರ್ಶನಗೊಂಡವು. ಅದರ ಬಗ್ಗೆ ಪೊಲೀಸರಿಗೆ ಮಾಹಿತಿ ಇತ್ತು ಆದಾಗ್ಯು ಪೊಲೀಸ್‌ ಇಲಾಖೆ ಕ್ರಮ ಕೈಗೊಂಡಿಲ್ಲ  ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೆ ಕೊಲೆಗಳನ್ನು ತಪ್ಪಿಸಬಹುದಿತ್ತು. 

ಕೋಟೆ ಪೊಲೀಸ್‌ ಸ್ಟೇಷನ್‌

ಕೋಟೆ ಪೊಲೀಸ್‌ ಅಧಿಕಾರಿಯನ್ನ ಅಮಾನತ್ತು ಮಾಡಬೇಕು ಎಂದು ಆಗ್ರಹಿಸಿದ ಚನ್ನಬಸಪ್ಪರವರು ಜಿಲ್ಲೆಯಲ್ಲಿ ಗಾಂಜಾ, ಅಫೀಮು ಕಳ್ಳಸಾಗಾಣಿಕೆ ಜೋರಾಗಿದೆ. ಅದರ ಪರಿಣಾಮವೆ ಇದು ಎಂದಿದ್ಧಾರೆ. ಎಸ್‌ಪಿ ಮಿಥುನ್‌ ಕುಮಾರ್‌ ಇಂತಹ ಘಟನೆ ಬಗ್ಗೆ ಕೇಳಿದರೇ  ಬೇಜವಾಬ್ದಾರಿ ಉತ್ತರ ಕೊಡುತ್ತಾರೆ. ಅವರ ವಿರುದ್ಧವೂ ಕ್ರಮವಾಗಬೇಕು ಎಂದು ಆಗ್ರಹಿಸಿದ್ದಾರೆ. 

ಚುನಾವಣೆ ದಿನವೇ ಕೇರಿಯೊಂದರಲ್ಲಿ ತಲವಾರ್‌ ಹಿಡಿದು ಓಡಾಡುತ್ತಾ ಕೆಲವರು ಆತಂಕ ಸೃಷ್ಟಿಸಿದ್ದರು, ಅದರ ಬಗ್ಗೆ ವಿಷಯ ಗೊತ್ತಾಗಿಯು ಪೊಲೀಸ್‌ ಅಧಿಕಾರಿಗಳು ತಲೆಕೆಡಿಸಿಕೊಂಡಿರಲಿಲ್ಲ. ಅಲ್ಲದೆ ಕೇರಿವೊಂದರಲ್ಲಿ ಕೆಲವರು ಅಕ್ರಮವಾಗಿ ಮನೆ ಮಾಡಿಕೊಂಡಿದ್ದಾರೆ. ಅಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಅನುಮಾನ ದಟ್ಟವಾಗಿದೆ. ಇದರ ಬಗ್ಗೆ ಪೊಲೀಸರಿಗೆ ‍ ತಿಳಿಸಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದಿದ್ದಾರೆ. 

ಆರಗ ಜ್ಞಾನೇಂದ್ರ 

ಇನ್ನು ಇದೇ ವಿಚಾರದಲ್ಲಿ ಪ್ರತಿಕ್ರಿಯಿಸಿ ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರವರು, ಶಿವಮೊಗ್ಗ ಜಿಲ್ಲೆಯಲ್ಲಿ ಪೊಲೀಸ್‌ ಇಲಾಖೆ ವೈಫಲ್ಯ ಕಂಡಿದೆ. ಕೋಣೆ ಪೊಲೀಸ್‌ ಸ್ಟೇಷನ್‌ನಗೆ ಸಮರ್ಪಕ ಅಧಿಕಾರಿಯನ್ನು ಹಾಕಬೇಕಿದೆ. ಅಲ್ಲಿನ ಪೊಲೀಸರೇ ಕೆಲವು ಪ್ರದೇಶಗಳಿಗೆ ಹೋಗಲು ಭಯ  ಪಡುತ್ತಿದ್ಧಾರೆ ಎಂದಿದ್ದಾರೆ. ಶಿವಮೊಗ್ಗದ ವಾತಾವರಣ ಹಾಳಾಗುತ್ತಿರುವುದಕ್ಕೆ ಪೊಲೀಸ್‌ ಇಲಾಖೆಯೇ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. 

ಜೇಡರ ಬಲೆ

ಶಿವಮೊಗ್ಗದಲ್ಲಿ ಯಾವುದೇ ಮೇಜರ್‌ ಘಟನೆಗಳು ನಡೆದರು ಅದು ರಾಜಕಾರಣದ ಪ್ರತಿಕ್ರಿಯೆಗಳನ್ನು ಪಡೆದುಕೊಳ್ಳುವುದು ಸಹಜ. ಪೂರಕವೆಂಬಂತೆ ಲಷ್ಕರ್‌ ಮೊಹಲ್ಲಾದ ಘಟನೆಯು ರಾಜಕಾರಣದ ಗಂಭೀರ ರಿಯಾಕ್ಷನ್‌ಗೆ ಕಾರಣವಾಗಿದೆ. ಜನಪ್ರತಿನಿಧಿಗಳು ನೇರವಾಗಿ ಪೊಲೀಸ್‌ ಇಲಾಖೆಯ ಮೇಲೆ ಮಾತಿನ ಬಾಣವನ್ನು ಎಸೆಯುತ್ತಿದ್ದಾರೆ. ಹಾಗಾಗಿ ಘಟನೆ ಪೊಲೀಸ್‌ ಇಲಾಖೆಯನ್ನ ಸುತ್ತಿಕೊಳ್ಳುತ್ತಿದೆ. ಮತ್ತೊಂದೆಡೆ ರಾಜ್ಯ ಸರ್ಕಾರ ಕೂಡ ಇಡೀ ಪ್ರಕರಣವನ್ನು ಸೈಲೆಂಟ್‌ ಆಗಿ, ಅಷ್ಟೆ ಗಂಭೀರವಾಗಿ ವಾಚ್‌ಗಾರ್ಡ್‌ ಮಾಡುತ್ತಿವೆ. ಶಿವಮೊಗ್ಗದ ಶಾಂತಿ ಸುವ್ಯವಸ್ಥೆಯ ತಿಳಿನೀರು ಕದಡುವುದು ಆಡಳಿತ ವ್ಯವಸ್ಥೆಗೆ ಇಷ್ಟವಿಲ್ಲ ಅಂತಹ ಪ್ರಯತ್ನಗಳು ನಡೆದಾಗ ಅಧಿಕಾರಸ್ಥ ಸಂಸ್ಥೆಗಳು ಮುಲಾಜಿಲ್ಲದೇ ಕ್ರಮಕೈಗೊಂಡಿವೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಪೊಲೀಸ್‌ ಇಲಾಖೆಯಲ್ಲಿ ತಲೆದಂಡಗಳು ಸಂಭವಿಸುವ ಸಾಧ್ಯತೆ ಇದೆ.