ಸಿಮ್ಸ್‌ ಕಾಲೇಜಿನ ಪುಟ್‌ಪಾತ್‌ನಲ್ಲಿ ಹೋಗ್ತಿದ್ದ ವ್ಯಕ್ತಿಗೆ ಬಳಿಯ ಚರಂಡಿ ಪಕ್ಕದಲ್ಲಿ ಕಂಡಿತ್ತು ಶಾಕಿಂಗ್‌ ಸೀನ್‌! ನವಜಾತ ಶಿಶು ಶವ ಪತ್ತೆ!

The body of the newborn was found next to a drain near Sims College

ಸಿಮ್ಸ್‌ ಕಾಲೇಜಿನ ಪುಟ್‌ಪಾತ್‌ನಲ್ಲಿ ಹೋಗ್ತಿದ್ದ ವ್ಯಕ್ತಿಗೆ ಬಳಿಯ ಚರಂಡಿ ಪಕ್ಕದಲ್ಲಿ ಕಂಡಿತ್ತು ಶಾಕಿಂಗ್‌ ಸೀನ್‌! ನವಜಾತ ಶಿಶು ಶವ ಪತ್ತೆ!
Sims College

Shivamogga  Apr 3, 2024  ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಿಂದ ಬಸ್‌ ನಿಲ್ದಾಣಕ್ಕೆ ಹೋಗುವ ದಾರಿಯಲ್ಲಿ ಸಿಗುವ ಸಿಮ್ಸ್‌ ಕಾಲೇಜಿನ ಗಾರ್ಡನ್‌ ಸಮೀಪ ನವಜಾತ ಶಿಶುವೊಂದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ನಿನ್ನೆ ಅಂದರೆ ಏಪ್ರಿಲ್‌ 2 ರಂದು ಬೆಳಗ್ಗೆ 11 ಗಂಟೆಗೆ ಈ ಘಟನೆ ಬೆಳಕಿಗೆ ಬಂದಿದೆ. ಸಿಮ್ಸ್‌ ಕಾಲೇಜಿನ ಗಾರ್ಡನ್‌ ಸಮೀಪದ ಚರಂಡಿಯೊಂದರ ಬಗ್ಗೆ ಸ್ಥಳೀಯರೊಬ್ಬರು ಜನರು ಗುಂಪು ಗೂಡಿರುವುದನ್ನ ನೋಡಿದ್ದಾರೆ. ಅಲ್ಲಿಗೆ ಹೋಗಿ ನೋಡಿದ ಅವರಿಗೆ ಆಘಾತವಾಗಿತ್ತು. ಮೆಗ್ಗಾನ್‌ ಆಸ್ಪತ್ರೆಯ ಬೆಡ್‌ಶೀಟ್‌ ನಲ್ಲಿ ಸುತ್ತಿದ್ದ ಮಗುವೊಂದು ಅಲ್ಲಿ ಬಿದ್ದಿತ್ತು. ಪರಿಶೀಲಿಸಿ ನೋಡುವಾಗ ಮಗು ಅದಾಗಲೇ ಸತ್ತು ಹೋಗಿತ್ತು. ಈ ಸಂಬಂಧ ದೊಡ್ಡಪೇಟೆ ಪೊಲೀಸರಿಗೆ ನೆರವಾದ ಸ್ಥಳೀಯರೊಬ್ಬರು ಖುದ್ದು ಕಂಪ್ಲೆಂಟ್‌ ಕೊಟ್ಟು ಕೇಸ್‌ ದಾಖಲಿಸಿದ್ದಾರೆ. ಈ ಸಂಬಂಧ ಐಪಿಸಿ 318 ರ ಅಡಿಯಲ್ಲಿ ಶಿಶು ಹುಟ್ಟಿದ್ದನ್ನ ಮರೆಮಾಚುವ ಮತ್ತು ಅದೇ ಉದ್ದೇಶದೊಂದಿಗೆ ಮಗುವನ್ನ ಸಾಯಿಸಿದ ಆರೋಪ ಸಂಬಂಧ ಕೇಸ್‌ ದಾಖಲಿಸಿದ್ದಾರೆ.