Shivamogga Mar 19, 2024 ಮನೆಯಲ್ಲಿನ ವಸ್ತುಗಳನ್ನ ಕಳ್ಳತನ ಮಾಡಿದ್ದಷ್ಟೆ ಅಲ್ಲದೆ ಮನೆಗೆ ಬೆಂಕಿ ಇಟ್ಟು ಹೋದ ಘಟನೆ ಬಗ್ಗೆ ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್‌ನಲ್ಲಿ ಎಫ್‌ಐಆರ್ ದಾಖಲಾಗಿದೆ. : IPC 1860 (U/s-454,457,380,436) ಅಡಿಯಲ್ಲಿ ಕೇಸ್ ದಾಖಲಾಗಿದ್ದು, 17 ರಂದು ಈ ಘಟನೆ ನಡೆದಿದೆ.
ನಡೆದ ಘಟನೆಯನ್ನು ನೋಡುವುದಾದರೆ,ಈ ಸ್ಟೇಷನ್ ಲಿಮಿಟ್ಸ್‌ನಲ್ಲಿರುವ ನಿವಾಸಿಯೊಬ್ಬರು ದೂರದ ಚನ್ನರಾಯಪಟ್ಟಣ್ಣಕ್ಕೆ ಹೋಗಿದ್ದರು. ಈ ವೇಳೆ ಅವರಿಗೆ ಕರೆಯೊಂದು ಬಂದಿದೆ. ನಿಮ್ಮ ಮನೆಯಿಂದ ತುಂಬಾ ಹೊಗೆ ಬರುತ್ತಿದೆ ಎಂದು ಕರೆ ಮಾಡಿದವರು ತಿಳಿಸಿದ್ದಾರೆ. ವಿಷಯ ತಿಳಿದು ತಕ್ಷಣವೇ ಶಿವಮೊಗ್ಗಕ್ಕೆ ಕುಟುಂಬಸ್ಥರು ವಾಪಸ್ ಆಗಿದ್ದಾರೆ. ಶಿವಮೊಗ್ಗದ ಮನೆಗೆ ಬಂದು ನೋಡುವಷ್ಟರಲ್ಲಿ ಫೈರ್ ಇಂಜಿನ್ ಮನೆಯಲ್ಲಿ ಹತ್ತಿಕೊಂಡಿದ್ದ ಬೆಂಕಿ ನಂದಿಸಿತ್ತು.
ಆನಂತರ ಕೂಲಂಕುಶವಾಗಿ ನೋಡಿದಾಗ ಮನೆಯ ಲಾಕರ್ ಮುರಿದಿದ್ದು ಗೊತ್ತಾಗಿದೆ. ಅಲ್ಲದೆ ಲಾಕರ್ ನ ಲಾಕ್ ನ್ನು ಮುರಿದಿದ್ದು, ಅದರ ಒಳಗೆ ಇಟ್ಟಿದ್ದ ಸುಮಾರು ಒಟ್ಟು 146 ಗ್ರಾಂ ತೂಕದ ಬಂಗಾರದ ವಡವೆಗಳು, ಸುಮಾರು ಒಟ್ಟು 3 ಕೆ.ಜಿ.800 ಗ್ರಾಂ ತೂಕದ ಬೆಳ್ಳಿಯ ವಡವೆಗಳು, ಹಾಗೂ 19.50.000/ -ರೂ ನಗದು ಹಣವನ್ನ ಕದ್ದಿರುವುದು ಗೊತ್ತಾಗಿದೆ. ಅಲ್ಲದೆ ಕಳ್ಳರು ಸಿಸಿಟಿವಿ ಡಿವಿಆರ್‌ಗಳನ್ನ ಸಹ ಕದ್ದೊಯ್ದಿದ್ದಾರೆ ಎಂಬುದು ತಿಳಿದು ಬಂದಿದೆ.