ಕೋಟೆ ಪೊಲೀಸ್​ ಸ್ಟೇಷನ್​ ಲಿಮಿಟ್ಸ್​ ನಲ್ಲಿ ನಡೀತು ಮೂಟೆ ಚಿನ್ನದ ಕಥೆ ! ಈ ಸ್ಕೀಂ ಬಗ್ಗೆ ಓದಿ ನೋಡಿ

Malenadu Today

Shivamogga Feb 15, 2024 |   ಹೊಲದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ರಾಶಿಗಟ್ಲೆ ಚಿನ್ನದ ಸರಗಳು ಸಿಕ್ಕಿವೆ. ಅದನ್ನ ಹೊರಗಡೆ ಮಾರಾಟ ಮಾಡಿದರೆ ಅನಾಹುತ ಆಗುತ್ತದೆ. ಎಷ್ಟು ಕೊಡುವುದಕ್ಕೆ ಸಾಧ್ಯವೋ ಅಷ್ಟಕ್ಕೆ ಕೊಡುತ್ತೇನೆ. ಚಿನ್ನ ತೆಗೆದುಕೊಂಡು ದುಡ್ಡುಕೊಡಿ ಎಂದು ಚೂರು ಪೀಸು ಅಸಲಿ ಚಿನ್ನ ಕೊಟ್ಟು ಆನಂತರ ನಕಲಿ ಬಂಗಾರ ನೀಡಿ ಮೋಸದ ಮಾಡಿದ ಬಗ್ಗೆ ಶಿವಮೊಗ್ಗದ  ಕೋಟೆ ಪೊಲೀಸ್ ಸ್ಟೇಷನ್  ವಂಚನೆ ಪ್ರಕರಣ ದಾಖಲಾಗಿದೆ. 

ಕೋಟೆ ಪೊಲೀಸ್ ಸ್ಟೇಷನ್​

ನಿವಾಸಿಯೊಬ್ಬರಿಗೆ ಎನ್ ಆರ್ ಪುರದ ಶೆಟ್ಟಿಕೊಪ್ಪ ಗ್ರಾಮಕ್ಕೆ ರಸ್ತೆ ಕೆಲಸಕ್ಕೆ  ಬಂದ್ದಿದ್ದೇನೆ. ತಾನೂ ಮೂಲತಃ ಒಡಿಶಾದವನು  ಎಂದು ವ್ಯಕ್ತಿಯೊಬ್ಬ ಪರಿಚಯವಾಗಿದ್ದಾನೆ. ಆ ಬಳಿಕ  ಭೂಮಿಯಲ್ಲಿ ಕೆಲಸ ಮಾಡುವಾಗ ಸುಮಾರು ಬಂಗಾರದ ಸರಗಳು ಸಿಕ್ಕಿದೆ. ಈ ಊರಿನಲ್ಲಿ ನನಗೆ ಮಾರಲು ಯಾರೂ ಪರಿಚಯವಿಲ್ಲ. ಸಿಕ್ಕ ಚಿನ್ನ ಅಸಲಿಯೋ ನಕಲಿಯೋ ಅಂತಾ ತಿಳಿದು ಹೇಳಿ ಎಂದು ಚೂರು ಪೀಸು ಚಿನ್ನ ಕೊಟ್ಟಿದ್ದಾನೆ. ಆ ಬಳಿಕ ಅಸಲಿಯತ್ತಿನ ಪರೀಕ್ಷೆ ನಡೆದ ಬಳಿಕ, ಇನ್ನೂ ಚಿನ್ನವಿದೆ ಎಂದು ಹೇಳಿ ಅದನ್ನು ತೆಗೆದುಕೊಳ್ಳುವಂತೆ ಹೇಳಿದ್ದಾನೆ.  

ಆರಂಭದಲ್ಲಿ ಮೂವತ್ತು ಲಕ್ಷಕ್ಕೆ ಡಿಮ್ಹಾಂಡ್ ಮಾಡಿದ್ದ ಆರೋಪಿ ಆ ಬಳಿಕ 15 ಲಕ್ಷಕ್ಕೆ ಡೀಲ್ ಕುದುರಿಸಿದ್ದ. ಹೇಳಿದ ಪ್ಲೇಸ್​ಗೆ ಚೀಲದಲ್ಲಿ ತುಂಬಿಕೊಂಡು ಬಂದ ಚಿನ್ನವನ್ನ ಆಸಾಮಿಗೆ ಕೊಟ್ಟು ಅವರಿಂದ 15 ಲಕ್ಷ ರೂಪಾಯಿ ಪಡೆದು ಅಲ್ಲಿಂದ ಪರಾರಿಯಾಗಿದ್ದ. ಚಿನ್ನ ಪಡೆದವರು ಅದನ್ನ ಒರೆ ಹಚ್ಚಿ ನೋಡಿದಾಗ ಅದು ರೋಲ್ಡ್​ ಗೋಲ್ಡ್​ ಅಂತಾ ಗೊತ್ತಾಗಿದೆ. ಈ ಸಂಬಂಧ ಕೋಟೆ ಪೊಲೀಸ್ ಸ್ಟೇಷನ್​ಗೆ ಬಂದು ಕಂಪ್ಲೆಂಟ್ ದಾಖಲಿಸಿದ್ದಾರೆ. 

Share This Article