ಕೋಟೆ ಪೊಲೀಸ್ ಸ್ಟೇಷನ್​ | ಪುಟ್​ಪಾತ್ ಮೇಲೆಯೇ ಪ್ರಾಣಬಿಟ್ಟ ವ್ಯಕ್ತಿ | ಕೈ ಮೇಲಿತ್ತು ಓಂ, MP , SN ಹಚ್ಚೆ !

Kote Police Station has released a notification that a person has died near Hole bus stop in Shimoga.ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿಯಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದು ಗುರುತು ಪತ್ತೆಗೆ ಕೋಟೆ ಪೊಲೀಸ್ ಸ್ಟೇಷನ್​ನಿಂದ ಪ್ರಕಟಣೆ ಹೊರಬಿದ್ದಿದೆ

ಕೋಟೆ ಪೊಲೀಸ್ ಸ್ಟೇಷನ್​ | ಪುಟ್​ಪಾತ್ ಮೇಲೆಯೇ ಪ್ರಾಣಬಿಟ್ಟ ವ್ಯಕ್ತಿ | ಕೈ ಮೇಲಿತ್ತು ಓಂ, MP , SN  ಹಚ್ಚೆ !

KARNATAKA NEWS/ ONLINE / Malenadu today/ Oct 17, 2023 SHIVAMOGGA NEWS



ಸುಮಾರು 50 ರಿಂದ 55 ವಯಸ್ಸಿನ ಅನಾಮಧೇಯ ಪುರುಷ ಹೊಳೆ ಬಸ್ ನಿಲ್ದಾಣದ ಬಳಿ ಇರುವ ಮಾಂಡವಿ ಬಾರ್ ಹತ್ತಿರದ ಮೈತ್ರಿ ಕಾಂಪ್ಲೆಕ್ಸ್​ನ ಮೊದಲ ಮಳಿಗೆಯ ಫುಟ್‍ಪಾತ್ ಮೇಲೆ ಕಳೆದ ಅಕ್ಟೋಬರ್​.12 ರ ಬೆಳಿಗ್ಗೆ ಮಲಗಿದಲ್ಲಿಯೇ ಮೃತಪಟ್ಟಿದ್ದಾರೆ. ಅವರ ವಾರಸುದಾರರ ಪತ್ತೆಗಾಗಿ ಪ್ರಕಟಣೆ ಹೊರಡಿಸಲಾಗಿದೆ. 

ಮೃತರು ಸುಮಾರು 5 ಅಡಿ 4 ಇಂಚು ಎತ್ತರ, ಎಣ್ಣೆಗೆಂಪು ಬಣ್ಣ ಹೊಂದಿದ್ದು, ತಲೆಯಲ್ಲಿ 4 ಇಂಚು ಉದ್ದದ ಕಪ್ಪು ಬಿಳಿ ಮಿಶ್ರಿತ ಕೂದಲು, 3 ಇಂಚು ಉದ್ದದ ಬಿಳಿ ಹಾಗೂ ಕಪ್ಪು ಮಿಶ್ರಿತ ಗಡ್ಡ ಇರುತ್ತದೆ. ಈತಹ ಬಲಗೈ ಮೇಲೆ ಎಂಪಿ ಹಾಗೂ ಓಂ ಮತ್ತು ಎಡಗೈ ಮೇಲೆ ಎಸ್.ಎಂ ಎಂಬ ಹಚ್ಚೆ ಗುರುತು ಇರುತ್ತದೆ. ಬಿಳಿ ಬಣ್ಣದ ನೀಲಿ ಹೂ ಮಿಶ್ರಿತ ತುಂಬು ತೋಳಿನ ಶರ್ಟ್, ಕಾಫಿ ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಮೃತನ ಶವವನ್ನು ಮೆಗ್ಗಾನ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ. ಮೃತನ ವಾರಸುದಾರರು ಯಾರಾದರೂ ಇದ್ದಲ್ಲಿ ಕೋಟೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.


ಇನ್ನಷ್ಟು ಸುದ್ದಿಗಳು 

ಶೇ...ಹಾವು ಕಚ್ಚಿತು | ಮನೆ ಬಳಿ ಬಂದ ನಾಗರವನ್ನು ಹಿಡಿಯಲು ಹೋದವರ ಸ್ಥಿತಿ ಗಂಭೀರ | VIDEO VIRAL

ಪ್ರಯಾಣಿಕರ ಗಮನಕ್ಕೆ: ನೈಋತ್ಯ ರೈಲ್ವೆಯಿಂದ ದಸರಾ ಹಬ್ಬದ ಪ್ರಯುಕ್ತ ವಿಶೇಷ ರೈಲುಗಳ ಸಂಚಾರ | ಪೂರ್ತಿ ವಿವರ ಇಲ್ಲಿದೆ

ಶಿವಮೊಗ್ಗ ದಸರಾಕ್ಕೆ ಚಾಲನೆ | ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಪಾಲಿಕೆ ಸದಸ್ಯರು | ಕುಣಿದು ಸಂಭ್ರಮಿಸಿದ ಶಾಸಕ ಎಸ್​.ಎನ್​. ಚನ್ನಬಸಪ್ಪ