IT ಮತ್ತು GST ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ ಹೋದಲ್ಲಿ ಮತೀಯ ಸಂಘರ್ಷಗಳು ಮತ್ತಷ್ಟು ಹೆಚ್ಚಾಗಲಿದೆ..ಹೇಗಂತಿರಾ... ಜೆಪಿ ಬರೆಯುತ್ತಾರೆ

The authorities have to pay attention to the funding that has crept into Shimogaಶಿವಮೊಗ್ಗದಲ್ಲಿ ಹರಿದಾಡ್ತಿರುವ ಫಂಡಿಂಗ್​ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕಿದೆ

IT ಮತ್ತು GST ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ  ಹೋದಲ್ಲಿ ಮತೀಯ ಸಂಘರ್ಷಗಳು ಮತ್ತಷ್ಟು ಹೆಚ್ಚಾಗಲಿದೆ..ಹೇಗಂತಿರಾ... ಜೆಪಿ ಬರೆಯುತ್ತಾರೆ

KARNATAKA NEWS/ ONLINE / Malenadu today/ Oct 6, 2023 SHIVAMOGGA NEWS

ಶಿವಮೊಗ್ಗದಲ್ಲಿ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳದೆ  ಹೋದಲ್ಲಿ ಮತೀಯ ಸಂಘರ್ಷಗಳು ಮತ್ತಷ್ಟು ಹೆಚ್ಚಾಗಲಿದೆ..ಹೇಗಂತಿರಾ..ಈ ಬಗ್ಗೆ ಜೆಪಿ ಬರೆಯುತ್ತಾರೆ

ಶಿವಮೊಗ್ಗದ ಕೋಮು ಸಂಘರ್ಷಕ್ಕೆ ಎಂಬತ್ತು ವರ್ಷಗಳಿಗೂ ಅಧಿಕ ಇತಿಹಾಸವಿದೆ,.ಇಲ್ಲಿ  ವೈಚಾರಿಕ ಧಾರ್ಮಿಕ ವಿಚಾರಗಳಿಗೆ ಹಲವು ಬಾರಿ ಕೋಮುಸಂಘರ್ಷಗಳಾಗುತ್ತಿವೆ. ವಿವಾದೀತ ಗಣಪನೆಂದೇ ಬಿಂಬಿತವಾಗಿದ್ದ ಶಿವಮೊಗ್ಗದ ಹಿಂದುಮಹಾ ಸಭಾ ಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ವೈಯಕ್ತಿಕ ದ್ವೇಷ ಪ್ರತಿಕಾರಕ್ಕೂ ಈ ಗಣೇಶ ಉತ್ಸವ ಸಾಕ್ಷಿಯಾಗುತ್ತಿದ್ದದ್ದು ದುರಂತವಾಗಿತ್ತು. 

ಆದರೆ ಇತ್ತಿಚ್ಚಿನ ವರ್ಷಗಳಲ್ಲಿ ಹೆಚ್ ಎಂ ಎಸ್ ಗಣಪನ ಮೆರವಣಿಗೆ ಸಂಭ್ರಮದ ವೈಭವದ ಗಣಪನಾಗಿ ಬಿಂಬಿತವಾಗದೆ. ಹೀಗಾಗಿ ಹೆಚ್ ಎಂ ಎಸ್ ಗಣೇಶ್ ಊರ ಹಬ್ಬದ ಜಾತ್ರಾ ಗಣಪನಾಗಿ ಬಿಂಬಿತನಾಗಿದ್ದಾನೆ. ಇದು ಶಿವಮೊಗ್ಗದ ಜನತೆಯ ಪಾಲಿಗೆ ಉತ್ತಮ ಬೆಳವಣಿಗೆಯಾಗಿದೆ.

ಇದರ ಬೆನ್ನಲ್ಲೆ  ಹೆಚ್ ಎಂ ಎಸ್ ಗಣೇಶ್ ವಿಸರ್ಜನಾ ಮೆರವಣಿಗೆಗೆ ಪರ್ಯಾಯ ಎಂಬಂತೆ ಬಂಬಿತವಾಯ್ತಾ ಈದ್ ಮಿಲಾದ್ ಮೆರವಣಿಗೆ ಕೂಡ ಅದ್ದೂರಿಯಾಗಿ ನಡೆಯುತ್ತಿದೆ. ಬಹಳಷ್ಟು ವರ್ಷಗಳಿಂದ ಸಾಂಪ್ರದಾಯಿಕವಾಗಿ ನಡೆಯುತ್ತಿದ್ದ ಈದ್ ಮಿಲಾದ್ ಮೆರವಣಿಗೆ ಇತ್ತಿಚ್ಚಿನ ವರ್ಷಗಳಲ್ಲಿ ಹೈಟೆಕ್​ ಸ್ಪರ್ಶ ಪಡೆದಿದೆ. ಸಾಂಪ್ರದಾಯಿಕ ಗಡಿದಾಟಿ ಡಿಜೆ ಹಾಡು ಕುಣಿತ ಘೋಷಣೆ ಹರ್ಷೋದ್ಗಾರಗಳು ಈದ್ ಮೆರವಣಿಗೆಯ ವೈಭವದ ದೃಶ್ಯಕ್ಕೆ ಸಾಕ್ಷಿಯಾಗಿದೆ.

ಎರಡು ಮೆರವಣಿಗೆಗಳಲ್ಲಿ ಶಿವಮೊಗ್ಗ ನಗರ ಸಂಪೂರ್ಣ ಕೇಸರಿ ಹಾಗು ಹಾಗು ಸಂಪೂರ್ಣ ಹಸಿರುಮಯವಾಗಿ ಮಾರ್ಪಾಡಾಗುತ್ತದೆ. ಕೋಟಿಗಟ್ಟಲೆ ಬಂಡವಾಳ ಕೇವಲ ನಗರದ ಅಲಂಕಾರಕ್ಕೆ ಹರಿದು ಬರುತ್ತದೆ ಎಂದರೆ...ಇದರ ಹಿಂದಿನ ಮೂಲ ಯಾವುದು..ಫಂಡಿಂಗ್ ಎಲ್ಲಿಂದ ಬರುತ್ತೆ.

ಬಿಲ್ ರಹಿತ ವಹಿವಾಟು ನಡೆಸುವ  ತೆರಿಗೆ ವಂಚಿಸುವ ವರ್ತಕರು ವ್ಯಾಪರಸ್ಥರು ಶಿವಮೊಗ್ಗದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಇವರು ಸರ್ಕಾರಕ್ಕೆ ಮೊದಲಿನಿಂದಲೂ ತೆರಿಗೆ ವಂಚಿಸಿಕೊಂಡು ಕೋಟಿಗಟ್ಟಲೆ ಹಣ ಮಾಡಿದವರೇ ಆಗಿದ್ದಾರೆ. 

ತೆರಿಗೆ ವಂಚಿತರಿಗೆ ಜಾತಿ ಧರ್ಮದ ಹಂಗಿಲ್ಲ. ಇವರ ವ್ಯಾಪಾರ ವಹಿವಾಟಿನ ಜಿದ್ದಾಜಿದ್ದಿಗಳು ತೆರೆಮರೆಯಲ್ಲಿ ನಡೆಯುತ್ತಿರುತ್ತವೆ. ಶಿವಮೊಗ್ಗ ನಗರದಲ್ಲಿ ತಲೆ ಎತ್ತಿರುವ ಕೋಟಿಗಟ್ಟಲೇ  ಬಂಡವಾಳದ ಬಂಗಲೆ ಮನೆಗಳು ಸಾಕಷ್ಟಿವೆ. ಇವರ ವ್ಯಾಪರ ವಹಿವಾಟು ಏನು..ಇವರಿಗೆ ಎಲ್ಲಿಂದ ಆದಾಯ ಬರುತ್ತದೆ ಎಂದು ಆದಾಯ ತೆರಿಗೆ ಅಧಿಕಾರಿಗಳು ಎಂದಾದರೂ ಕೇಳಿದ್ದಾರಾ..ವ್ಯಾಪಾರದಲ್ಲಿ ತೆರಿಗೆ ವಂಚಿಸುತ್ತಿರುವ ಗ್ರಾಹಕರನ್ನು ವಾಣಿಜ್ಯ ಇಲಾಖೆ ಅಧಿಕಾರಿಗಳು ಎಂದಾದ್ರೂ ರೈಡ್ ಮಾಡಿದ್ದಾರಾ

ಮತೀಯವಾಗಿ ಗುರುತಿಸಿಕೊಂಡಿರುವ ವರ್ತಕರುಗಳು ವ್ಯಾಪಾರಿಗಳು ಉದ್ಯಮಿಗಳು ಶಿವಮೊಗ್ಗದಲ್ಲಿ ಬಹಳಷ್ಟು ಮಂದಿ ಇದ್ದಾರೆ...ಹಬ್ಬ ಹಿಂಗೇ ಆಗಬೇಕು ಅದೆಷ್ಟು ಬೇಕಾದ್ರೂ ಖರ್ಚಾಗಲಿ ಎಂದು ಹಣ ಸುರಿಯುವ ಒಂದು ವರ್ಗವಾದರೆ..ಮತ್ತೊಂದು ವರ್ಷ ಅವರ ಹಬ್ಬಕ್ಕಿಂತಲೂ ನಮ್ಮ ಹಬ್ಬ ಜೋರಾಗಿ ನಡೆಯಬೇಕು ಎಂದು ಹಣ ಸುರಿಯುವವರಿದ್ದಾರೆ. ಇನ್ನು ಮತೀಯವಾಗಿ  ಅಹಿತಕರ ಘಟನೆಗಳು ನಡೆದಾಗ ಆರೋಪಿಗಳು ಜೈಲು ಸೇರಿದ್ರೆ,, ಅವರಿಗೆ ಪೊಲೀಸ್ ಲಾಯರ್ ಕೋರ್ಟ್ ಜೈಲು ಅಂತಾ..ಖರ್ಚಾಗುವ ಹಣವನ್ನು  ಕೆಲವು ಮತೀಯ ಮನಸ್ಥಿತಿಯ ಉದ್ಯಮಿಗಳೇ ಪೂರೈಸುತ್ತಾರೆ.

ಶಿವಮೊಗ್ಗದಲ್ಲಿ ಕೇವಲ ಹಣ್ಣಿನ ವ್ಯಾಪಾರದ ವಹಿವಾಟು ವಾರ್ಷಿಕವಾಗಿ 200 ಕೋಟಿ ಗಡಿ ದಾಟುತ್ತೆ...ಗುಜರಿ ವ್ಯಾಪರದ ವಹಿವಾಟು 300 ಕೂಟಿ ದಾಟುತ್ತೆ. ಗಾಂಧಿ ಬಜಾರ್ ನ ವ್ಯಾಪರ ವಹಿವಾಟು ಒಂದು ದಿನಕ್ಕೆ ಕನಿಷ್ಠವೆಂದರೂ ಹತ್ತು ಕೋಟಿ ದಾಟುತ್ತದೆ.ಈ ಪೈಕಿ ಪ್ರಾಮಾಣಿಕ ವ್ಯಾಪಾರಸ್ಥರದ್ದು ದೊಡ್ಡ ತೂಕ, ಅವರಿಂದಲೇ ಜನಸಾಮಾನ್ಯರು ಇದುವರೆಗೂ ಶಿವಮೊಗ್ಗ ಸಿಟಿ ಹುಡುಕಿಕೊಂಡು ಬರುತ್ತಾರೆ. 

ಆದರೆ,  ಇವರ ನಡುವೆ ಟ್ಯಾಕ್ಸ್ ಇಲ್ಲದೇ ಲಾರಿಗಟ್ಟಲೇ ಲೋಡ್​ಗಳನ್ನು ತರಿಸಿಕೊಂಡು, ಟ್ಯಾಕ್ಸ್ ದುಡ್ಡನ್ನು ಸೇರಿಸಿ ಗ್ರಾಹಕರಿಂದ ವಸೂಲಿ ಮಾಡುವ ವ್ಯಾಪಾರಸ್ಥರದ್ದು ಒಂದು ತೂಕ.. ವ್ಯಾಪಾರ ಎಂಬುದೇ ಮೋಸ ಎನ್ನುವ ನಾಣ್ಣುಡಿಯಿದೆ. ಆದರೆ ಶಿವಮೊಗ್ಗದಲ್ಲಿ ಒಂದು ವಿಮಲ್ ಚೀಟಿಯ ಹಿಂದೆ ಕೋಟಿಗಟ್ಟಲೇ ಲಾಭದ ದುಡಿಮೆ ನಡೆಯುತ್ತದೆ ಎಂದರೆ ನಂಬುತ್ತೀರಾ! ಖಂಡಿತ ನಡೆಯುತ್ತದೆ. ಗೊತ್ತಿರುವವರಿಗೆ ಗೊತ್ತಿರುತ್ತದೆ. ಗೊತ್ತಿಲ್ಲದವರಿಗೆ ಇಲ್ಲ .

ಇನ್ನೂ ಮತೀಯವಾಗಿ ಗುರುತಿಸಿಕೊಂಡಿರುವ ವ್ಯಾಪಾರಸ್ಥರು ಹಾಗು ಉದ್ಯಮಿಗಳ ಮೇಲೆ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳು ಹದ್ದಿನ ಕಣ್ಣಿಡಬೇಕಿದೆ. ಕೇವಲ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆಗಾಗಿ ಇಪ್ಪತ್ತು ಲಕ್ಷಕ್ಕೂ ಅಧಿಕ ಹಣ ವ್ಯಯಿಸಲಾಗಿತ್ತು ಎಂದರೆ ಊಹಿಸಲು ಸಾಧ್ಯವೇ..ಕೇವಲ ಶ್ರಮಿಕ ವರ್ಗ ಇರುವ ಈ ವಾರ್ಡ್ ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಫೈನಾನ್ಸ್ ಹೇಗೆ ಫೀಡ್ ಆಯ್ತು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ. 

ಮತೀಯ ಸಂಘಟನೆಗಳಿಗೆ ಮತೀಯವಾಗಿ ಗುರುತಿಸಿಕೊಂಡಿರುವ ಶ್ರೀಮಂತ ವರ್ಗ ಅಕ್ರಮ ಹಣ ಪೂರೈಕೆ ಮಾಡುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇನ್ನಾದರೂ ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಅಧಿಕಾರಿಗಳು ಮೈ ಚಳಿ ಬಿಟ್ಟು ಫೀಲ್ಡ್ ಗೆ ಇಳಿಯದಿದ್ದರೆ..ಶಿವಮೊಗ್ಗದಲ್ಲಿ ಸಾಕಷ್ಟು ಗಂಡಾಂತರಗಳು ನಡೆಯುವ ಸಾಧ್ಯತೆಗಳು ಹೆಚ್ಚಿದೆ.


ಇನ್ನಷ್ಟು ಸುದ್ದಿಗಳು 

  1.  R M MANJUNATH GOWDA ರವರ ಮನೆಗಳ ಮೇಲೆ ED ದಾಳಿಗೆ ಕಾರಣವೇನು? ಏನಿದು ಪ್ರಕರಣ?

  2. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರು ಮಹತ್ವದ ಪ್ರಕಟಣೆ! ಶಿವಮೊಗ್ಗದಲ್ಲಿಯೇ ನೋಂದಣಿ ಮಾಡಿಕೊಳ್ಳಿ

  3. ಶಿವಮೊಗ್ಗ ಮತ್ತೆ ಆಗುತ್ತಾ ಪವರ್ ಸೆಂಟರ್! ನವರಾತ್ರಿ ನಂತರ ಏನಾಗುತ್ತೆ? ರಾಜ್ಯ ರಾಜಕಾರಣದ ಕುತೂಹಲದ ಸುದ್ದಿ