ಸಂಸತ್‌ನಲ್ಲಿ 27 ಸಂಸದರಿಂದ ಕನ್ನಡ ಕಹಳೆ | ಶಿವಮೊಗ್ಗ ಮತದಾರ ದೇವರುಗಳ ಮೇಲೆ ಬಿವೈಆರ್‌ ಪ್ರಮಾಣವಚನ

Most members of parliament from Karnataka took their oath in Kannada during the swearing-in ceremony held in Parliament yesterday. Union Minister HD Kumaraswamy and Shivamogga MP BY Raghavendra took their oaths in Kannada

ಸಂಸತ್‌ನಲ್ಲಿ 27 ಸಂಸದರಿಂದ ಕನ್ನಡ ಕಹಳೆ |  ಶಿವಮೊಗ್ಗ ಮತದಾರ ದೇವರುಗಳ ಮೇಲೆ ಬಿವೈಆರ್‌ ಪ್ರಮಾಣವಚನ

SHIVAMOGGA | MALENADUTODAY NEWS | Jun 25, 2024  ಮಲೆನಾಡು ಟುಡೆ

ನಿನ್ನೆ ಸಂಸತ್‌ ನಲ್ಲಿ ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭ ವಿಶೇಷವಾಗಿ ಕಂಡುಬಂದಿತ್ತು. ಏಕೆಂದರೆ ರಾಜ್ಯದ ಬಹುತೇಕ ಸಂಸದರು ಕನ್ನಡದಲ್ಲಿಯೇ ಪ್ರಮಾಣವಚನ ಸ್ವೀಕರಿಸಿದರು. ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಿದರೆ ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಶಿವಮೊಗ್ಗದ ಮತದಾರರ ಹೆಸರಿನಲ್ಲಿ ಕನ್ನಡದಲ್ಲಿ ಪ್ರಮಾಣ ಸ್ವೀಕರಿಸಿದರು. ಉತ್ತರ ಕನ್ನಡ ಕ್ಷೇತ್ರದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತದಲ್ಲಿ ಪ್ರಮಾಣ ಸ್ವೀಕರಿಸಿದ್ದು ಬಿಟ್ಟರೆ, ಉಳಿದ 27 ಸದಸ್ಯರು ಕನ್ನಡದಲ್ಲೇ ಪ್ರಮಾಣವಚನ ಸ್ವೀಕರಿಸಿದರು.

ಚಿಕ್ಕೋಡಿಯ ಪ್ರಿಯಾಂಕಾ ಜಾರಕಿಹೊಳಿ ಅವರು ಸಂವಿಧಾನದ ಹೆಸರಿನಲ್ಲಿ,   ಬೆಂಗಳೂರು ಗ್ರಾಮಾಂತರದ ಡಾ.ಸಿ.ಎನ್‌.ಮಂಜುನಾಥ್ ಅವರು ಮತದಾರರು ಹಾಗೂ ದೇವರ ಹೆಸರಲ್ಲಿ, ದಕ್ಷಿಣ ಕನ್ನಡದ ಕ್ಯಾಪ್ಟನ್ ಬ್ರಿಜೇಶ್‌ ಚೌಟ ಅವರು ತುಳುನಾಡಿನ ದೈವ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ವಿಶೇಷವಾಗಿ ಮೈಸೂರಿನ ಯದುವೀರ್ ಕೃಷ್ಣದತ್ತ ಒಡೆಯರ್‌ ಪ್ರಮಾಣವಚನ ಸ್ವೀಕರಿಸಲು ಬಂದಾಗ ಬಿಜೆಪಿ ಸದಸ್ಯರು ಮೇಜು ತಟ್ಟಿ ಸ್ವಾಗತಿಸಿದ್ದು ಕಂಡು ಬಂತು. 

ಇನ್ನೂ ಬಿವೈ ರಾಘವೇಂದ್ರರವರು ಶಿವಮೊಗ್ಗ ಲೋಕಸಭೆ ಕ್ಷೇತ್ರದ ‘ಮತದಾರ ದೇವರುಗಳʼ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಎಲ್ಲರ ಗಮನ ಸೆಳೆಯಿತು