ಹಾವೇರಿ ದುರಂತ | IAS ಗೆ ತಯಾರಿ ನಡೆಸ್ತಿದ್ದ ಮೃತ ಮಾನಸ | ಭಾರತ ಪುಟ್ಬಾಲ್‌ ತಂಡದ ಕ್ಯಾಪ್ಟನ್‌ ಸಾಧನೆಗೆ ಅಡ್ಡಿಯಾದ ವಿಧಿ

Report on Manasa who died in TT tragedy in Haveri

ಹಾವೇರಿ ದುರಂತ | IAS  ಗೆ ತಯಾರಿ ನಡೆಸ್ತಿದ್ದ ಮೃತ ಮಾನಸ | ಭಾರತ ಪುಟ್ಬಾಲ್‌ ತಂಡದ ಕ್ಯಾಪ್ಟನ್‌ ಸಾಧನೆಗೆ ಅಡ್ಡಿಯಾದ ವಿಧಿ
haveri accident news

SHIVAMOGGA | MALENADUTODAY NEWS | Jun 28, 2024  ಮಲೆನಾಡು ಟುಡೆ 

ಹಾವೇರಿಯಲ್ಲಿ ನಡೆದ ಅಪಘಾತದಲ್ಲಿ ಮೃತರಾದವರನ್ನ ನೆನೆದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಎಮ್ಮೆಹಟ್ಟಿ ಗ್ರಾಮದಲ್ಲಿ ನೀರವ ಮೌನ ಮನೆ ಮಾಡಿದೆ.  ಎಮ್ಮೆಹಟ್ಟಿ ಗ್ರಾಮದ ಶಾಲಾ ಆವರಣದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದ್ದು,  ಹಿಂದೂ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸಂಬಂಧಿಕರನ್ನ ನೆನೆದು ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. 

ಇನ್ನೂ ಮೃತರ ಪೈಕಿ ಮಾನಸ ಎಂಬ ಯುವತಿ ಐಎಎಸ್‌ ಅಧಿಕಾರಿಯಾಗುವ ಕನಸು ಕಂಡಿದ್ದರು. ಅದಕ್ಕಾಗಿ ಇನ್ನಿಲ್ಲದ ಶ್ರಮವಹಿಸುತ್ತಿದ್ದ ಅವರು ಬೆಂಗಳೂರಿನಲ್ಲಿ ಐಎಎಸ್‌ಗಾಗಿ ತರಭೇತಿ ಪಡೆಯುತ್ತಿದ್ದರು.  ಅಂಧತ್ವವನ್ನು ಮೀರಿ ಸಾಧನೆ ಮಾಡುತ್ತಿದ್ದರು. ಭಾರತದ ಅಂಧರ ಪುಟ್ ಬಾಲ್ ತಂಡ ಕ್ಯಾಪ್ಟನ್ ಆಗಿದ್ದ ಮಾನಸ ಈಗಾಗಲೇ ಹಲವು ಪ್ರಶಸ್ತಿಗಳನ್ನ ಪಡೆದಿದ್ದರು. ದೇವಸ್ಥಾನಕ್ಕೆ ಹೋಗುವ ಕಾರಣಕ್ಕಾಗಿ ಅವರು ಎಮ್ಮೆಹಟ್ಟಿ ಗ್ರಾಮಕ್ಕೆ ಕಳೆದ ಭಾನುವಾರ ಬಂದಿದ್ದರು. ಆ ಬಳಿಕ ಟಿಟಿಯಲ್ಲಿ ದೇವರ  ದರ್ಶನಕ್ಕೆ ತೆರಳಿದ್ದರು.