ಸೀಟಿನಡಿ ಬಿದ್ದ ಕಾಯಿನ್‌ ಹೆಕ್ಕಿಕೊಟ್ಟ ಮಹಿಳೆಗೆ ಶಾಕ್‌ | ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹೋದ ಮೇಲೆ ಗೊತ್ತಾಯ್ತು ಸತ್ಯ

gold of the woman, who was on her way to Chitradurga in a bus from Shivamogga, were stolen

ಸೀಟಿನಡಿ ಬಿದ್ದ ಕಾಯಿನ್‌ ಹೆಕ್ಕಿಕೊಟ್ಟ ಮಹಿಳೆಗೆ ಶಾಕ್‌ | ಶಿವಮೊಗ್ಗದಿಂದ ಚಿತ್ರದುರ್ಗಕ್ಕೆ ಹೋದ ಮೇಲೆ ಗೊತ್ತಾಯ್ತು ಸತ್ಯ
Chitradurga bus from Shivamogga

SHIVAMOGGA | MALENADUTODAY NEWS | Jun 29, 2024  ಮಲೆನಾಡು ಟುಡೆ   

ಸ್ವಲ್ಪದಿನ ತಣ್ಣಗಾದಂತಿದ್ದ ಶಿವಮೊಗ್ಗ ಬಸ್‌ ನಿಲ್ದಾಣದ ಕಳ್ಳತನ ಪ್ರಕರಣಗಳು ಮತ್ತೆ ಇದೀಗ ಆರಂಭವಾದಂತಿದೆ. ಘಟನೆಯೊಂದಕ್ಕೆ ಸಂಬಂಧಿಸಿದಂತೆ ಗಾಡಿಕೊಪ್ಪ ನಿವಾಸಿಯೊಬ್ಬರು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ನಲ್ಲಿ ಕೇಸ್‌ ದಾಖಲಿಸಿದ್ದಾರೆ. 

ಪ್ರಕರಣವೇನು? 

ಶಿವಮೊಗ್ಗದ ಗಾಡಿಕೊಪ್ಪ ನಿವಾಸಿಯೊಬ್ಬರು ಚಿತ್ರದುರ್ಗಕ್ಕೆ ಹೊರಟಿದ್ದರು. ಈ ಸಂಬಂಧ ಬಸ್‌ ನಿಲ್ದಾಣದಲ್ಲಿ ಬಸ್‌ ಹತ್ತಿಕೊಂಡು ಟಿಕೆಟ್‌ ಪಡೆದಿದ್ದಾರೆ. ಬೆಳಗಿನ ಜಾವ 5.45 ರ ಹೊತ್ತಾಗಿತ್ತು. ವಿನಾಯಕ ಟಾಕೀಸ್‌ ಬಳಿ ಬಸ್‌ ಬರುವಾಗ, ಗಾಡಿಕೊಪ್ಪ ನಿವಾಸಿ ಮಹಿಳೆಯ ಹಿಂದಿನ ಸೀಟ್‌ನಲ್ಲಿದ್ದ ಇಬ್ಬರು ಮಹಿಳೆಯರು ತಮ್ಮ ಲಗೇಜ್‌ನ್ನ ಕಾರಿಯರ್‌ ಮೇಲೆ ಇಡಲು ಹೋಗಿ, ಅದರಲ್ಲಿದ್ದ ಕಾಯಿನ್‌ಗಳನ್ನ ಕೆಳಕ್ಕೆ ಬೀಳಿಸಿದ್ದಾರೆ. ಆ ಬಳಿಕ ಸಂತ್ರಸ್ತ ಮಹಿಳೆಗೆ ಕೆಳಕ್ಕೆ ಕಾಯಿನ್‌ ಬಿತ್ತು ಹೆಕ್ಕಿಕೊಡಿ ಎಂದಿದ್ದಾರೆ. ಏನೋ ಇರಬಹುದು ಎಂದುಕೊಂಡು ಮಹಿಳೆ ಸಹ ಕೆಳಕ್ಕೆ ಬಿದ್ದ ಕಾಯಿನ್‌ ಹೆಕ್ಕಿ ಆರೋಪಿತ ಮಹಿಳೆಯರಿಗೆ ನೀಡಿದ್ದಾರೆ. 

ಆ ಬಳಿಕ ಇನ್ನೊಂದು ಕಾಯಿನ್‌ ಬಿದ್ದಿದೆ ಎಂದು ಹೇಳಿ ತೆಗೆದುಕೊಡಲು ಹೇಳಿದ್ದಾರೆ. ಈ ವೇಳೆ ಸಂತ್ರಸ್ತ ಮಹಿಳೆ ಬ್ಯಾಗ್‌ನಲ್ಲಿದ್ದ ಟಾರ್ಚ್‌ ತೆಗೆದು ಬೆಳಕು ಬಿಟ್ಟು ಸೀಟಿನಡಿಯ ಕಾಯಿನ್‌ ಹುಡಕಲು ಆರಂಭಿಸಿದ್ದಾರೆ. ಈ ವೇಳೆ ಅವರ ಬ್ಯಾಗ್‌ನಲ್ಲಿದ್ದ ಮೂರು ಲಕ್ಷ ಮೌಲ್ಯದ ಚಿನ್ನ, ದಾಖಲೆ, ದುಡ್ಡು ಮಹಿಳೆಯರು ಕದ್ದಿದ್ದಾರೆ ಎಂಬುದು ಸಂತ್ರಸ್ತೆಯವರ ಆರೋಪ. ಸದ್ಯ ಪ್ರಕರಣ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದ್ಧು, ಈ ವಿಚಾರವಾಗಿ ತನಿಖೆ ನಡೆಯುತ್ತಿದೆ.