ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು! ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

Little child dies in Surabhi centre Baby dies after being fed milk

ಸುರಭಿ ಕೇಂದ್ರದಲ್ಲಿದ್ದ ಪುಟ್ಟ ಮಗು ಸಾವು!  ಹಾಲು ಕುಡಿಸಿದ ಬೆನ್ನಲ್ಲೆ ಮೃತಪಟ್ಟ ಹಸುಗೂಸು

KARNATAKA NEWS/ ONLINE / Malenadu today/ May 18, 2023 SHIVAMOGGA NEWS 

ಶಿವಮೊಗ್ಗ ಸುರಭಿ ಉಜ್ವಲ ಕೇಂದ್ರ ಆಶ್ರಯದಲ್ಲಿದ್ದ ಮಗುವೊಂದು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಆಶ್ರಯದಲ್ಲಿದ್ದ ತಾಯಿಯೊಬ್ಬರು ತಮ್ಮ ಮಗುವಿಗೆ ಹಾಲು ಕುಡಿಸಿದ , ಕೆಲ ಹೊತ್ತಿನಲ್ಲಿ ಮಗುವಿನ ಚಲನವಲನ ನಿಂತಿದೆ. 

ತಕ್ಷಣವೇ ಕೇಂದ್ರ ಸಿಬ್ಬಂದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕೇಂದ್ರದ ಅಧಿಕಾರಿಗಳು ಮಗುವನ್ನ ಆಸ್ಪತ್ರಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆಯಲ್ಲಿ ಮಗು ಸಾವನ್ನಪ್ಪಿರುವುದು ದೃಢಪಟ್ಟಿದೆ. 

ಸುಮಾರು 2 ತಿಂಗಳ ಹಸುಗೂಸು ಸಾವನ್ನಪ್ಪಿದ್ದು, ಈ ಬಗ್ಗೆ ಪೋಷಕರಿಗೆ ವಿಷಯ ತಿಳಿಸಿ, ಮಕ್ಕಳ ಕಲ್ಯಾಣ ಸಮಿತಿ ಅಧಿಕಾರಿಗಳು ಹಾಗೂ ಕೇಂದ್ರದ ಅಧಿಕಾರಿಗಳು ಮತ್ತು ಪೊಲೀಸರ ಸಮ್ಮುಖದಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. 

ತನ್ನಿಬ್ಬರು ಮಕ್ಕಳ ಜೊತೆಯಲ್ಲಿ ಮಹಿಳೆ ಕಣ್ಮರೆ! ಇವರ ಸುಳಿವು ಸಿಕ್ಕಲ್ಲಿ ಪೊಲೀಸರಿಗೆ ಮಾಹಿತಿ ನೀಡಿ ! ವಿವರ ಇಲ್ಲಿದೆ

ಶಿವಮೊಗ್ಗ/ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ತಾಯಿಯೊಬ್ಬರು ತನ್ನಿಬ್ಬರು ಮಕ್ಕಳನ್ನು ಕರೆದುಕೊಂಡು ಕಾಣೆಯಾಗಿದ್ದಾರೆ. ಅವರಿಗಾಗಿ ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಅದರ ವಿವರ ಹೀಗಿದೆ. 

ಇದನ್ನು ಸಹ ಓದಿ: ತೀರ್ಥಹಳ್ಳಿ ಜೋಡಿ ಕೊಲೆ! ಎಸ್​ಪಿ ಮಿಥುನ್​ ಕುಮಾರ್ ಸ್ಥಳಕ್ಕೆ ಭೇಟಿ ! ಅಸಲಿಗೆ ನಡೆದಿದ್ದೇನು? ಆರೋಪಿ ಯಾರು!?

ರಮೀಜ ಬಿನ್ ಜಮಾಲ್ ಸಾಬ್ ಎಂಬುವವರ ಮಗಳು 32 ವರ್ಷದ ರಜಿಯಾ ಕೋಂ ಅತಾವುಲ್ಲಾ ಎಂಬುವವರು ತನ್ನ ಮಕ್ಕಳಾದ 12 ವರ್ಷದ ಫಾತಿಮಾ ಬಿನ್ ಅತಾವುಲ್ಲಾ ಹಾಗೂ 10 ವರ್ಷದ ಮಹಮದ್ ಹಾರೂನ್ ಬಿನ್ ಅತಾವುಲ್ಲಾ ಎಂಬುವವರನ್ನು ಕರೆದುಕೊಂಡು ದಿ: 14/05/2023 ರಂದು ಮನೆಯಿಂದ ಹೋದವರು ಈವರೆಗೂ ವಾಪಸ್ಸು ಬಂದಿರುವುದಿಲ್ಲ

ಕಾಣೆಯಾದವರ ಗುರುತು

ರಜಿಯಾ ಎಂಬುವವರ ಚಹರೆ ಕೋಲುಮುಖ, ತೆಳುವಾದ ಮೈಕಟ್ಟು, ಗೋಧಿ ಮೈಬಣ್ಣ, 4.8 ಅಡಿ ಎತ್ತರ, ಹಸಿರು ಬಣ್ಣದ ಚೂಡಿದಾರ್ ಧರಿಸಿರುತ್ತಾರೆ. ಕನ್ನಡ ಮತ್ತು ಉರ್ದು ಭಾಷೆ ಮಾತನಾಡುತ್ತಾರೆ. 

ಮಗಳು ಪಾತಿಮಾ ಚಹರೆ  4.5ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು,  6ನೇ ತರಗತಿ ಓದುತ್ತಿದ್ದು, ಉರ್ದು ಭಾಷೆ ಮಾತನಾಡುತ್ತಾಳೆ.   ಪಿಂಕ್ ಕಲರ್ ಚೂಡಿದಾರ ಧರಿಸಿರುತ್ತಾಳೆ.

ಇದನ್ನು ಸಹ ಓದಿ: charmadi ghat/ ಘಾಟಿಯಲ್ಲಿ ದುತ್ತೆಂದು ಎದುರಾದ ಒಂಟಿ ಸಲಗ! ಸರ್ಕಾರಿ ಬಸ್​ ಸ್ವಲ್ಪದರಲ್ಲಿಯೇ ಪಾರು!

ಮಗ ಮಹಮದ್ ಹಾರೂನ್ 4 ಅಡಿ ಎತ್ತರ, ದುಂಡುಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, 4 ನೇ ತರಗತಿ ಓದುತ್ತಿದ್ದು,ಉರ್ದು ಮತ್ತು ಕನ್ನಡ ಭಾಷೆ ಮಾತನಾಡುತ್ತಾನೆ. ಬಿಳಿ ಶರ್ಟ್ ಮತ್ತು ಚಡ್ಡಿ ಧರಿಸಿರುತ್ತಾನೆ. 

ಈ ತಾಯಿ ಮಕ್ಕಳ ಸುಳಿವು ದೊರತಲ್ಲಿ ಕೂಡಲೇ ಗ್ರಾಮಾಂತರ ಪೊಲೀಸ್ ಠಾಣೆಗೆ  ದೂ.ಸಂ.: 08182-261418/ 261410 /261422/ 9480803350 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.  (ಫೋಟೋಗಳನ್ನು ಲಗತ್ತಿಸಿದೆ)

Public Nuisance / ತುಂಗಾ ನಗರ ಪೊಲೀಸರಿಂದ ಮುಂದುವರಿದ ಸ್ಪೆಷಲ್ ಕಾರ್ಯಾಚರಣೆ! 11 ಜನರು ಸ್ಟೇಷನ್​ಗೆ 8 ಮಂದಿ ವಿರುದ್ಧ ಕೇಸ್

 ಶಿವಮೊಗ್ಗ/ ತುಂಗಾನಗರ ಪೊಲೀಸ ಸ್ಟೇಷನ್  ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ Area Domination    ವಿಶೇಷ ಗಸ್ತನ್ನು ಮುಂದುವರಿಸಿದ್ದಾರೆ. 

ನಿನ್ನೆಯು ಸಹ ( ದಿನಾಂಕ: 17-05-2023)  ತುಂಗಾನಗರ ಪೊಲೀಸ್ ಠಾಣೆ ಪಿಎಸ್​ಐ ಕುಮಾರ್​  ಮತ್ತು ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಸೂಳೆಬೈಲು, ಮದಾರಿಪಾಳ್ಯ, ಎಂಆರ್. ಎಸ್ ವೃತ್ತ, ಪ್ರಿಯಾಂಕಾ ಲೇಔಟ್ ಮತ್ತು ವಡ್ಡಿನ ಕೊಪ್ಪ ಗ್ರಾಮದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ನಡೆಸಿದೆ. 

11 ಜನರು ಸ್ಟೇಷನ್​ಗೆ 8 ಮಂದಿ ವಿರುದ್ಧ ಪಿಟ್ಟಿ ಕೇಸ್​

ಇನ್ನೂ ಈ ವೇಳೆ ವಿವಿಧ ಎರಿಯಾಗಳಲ್ಲಿ Public Nuisance ಮಾಡುವ ಮತ್ತು ಅನುಮಾನಸ್ಪಾದ 11 ಜನರನ್ನು  ಪೊಲೀಸ್ ಠಾಣೆಗೆ ಕರೆತಂದು ಅವರುಗಳ ಪೂರ್ವಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ 08 ಲಘು ಪ್ರಕರಣಗಳನ್ನು ದಾಖಲಿಸಿದ್ಧಾರೆ.