KARNATAKA NEWS/ ONLINE / Malenadu today/ Jun 27, 2023 SHIVAMOGGA NEWS
ಶಿವಮೊಗ್ಗ ಜಿಲ್ಲಾ ಮಟ್ಟದಲ್ಲಿ ಅಸ್ಥಿತ್ವಕ್ಕೆ ಬಂದಿರುವ ಶ್ರೀ ಭಗೀರಥ ಸಹಕಾರ ಸಂಘ ನಿಯಮಿತ ಇದರ ನೂತನ ಅಧ್ಯಕ್ಷರಾಗಿ ಎನ್.ಮಂಜುನಾಥ್ ಮತ್ತು ಉಪಾಧ್ಯಕ್ಷರಾಗಿ ವಸಂತ್ ಹೋಬಳಿದಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಹಕಾರ ಸಂಘಗಳ ನಿಬಂಧಕರ ಕಛೇರಿ ಶಿವಮೊಗ ಉಪವಿಭಾಗದ ಅಧೀಕ್ಷರಾದ ಪ್ರಕಾಶ್ ಟಿ.ವಿ ಅವರು ಚುನಾವಣಾಧಿಕಾರಿಯಾಗಿ ಸಹಕಾರ ಸಂಘದ ಕಛೇರಿಯಲ್ಲಿ ಸೋಮವಾರ ಮಧ್ಯಾಹ್ನ ಚುನಾವಣಾ ಪ್ರಕ್ರಿಯೆ ನಡೆಸಿದರು.
ನಿರ್ದೇಶಕರುಗಳಾಗಿ
೧)ಎಲ್.ಮಂಜುನಾಥ್ (ಬೊಮ್ಮನಕಟ್ಟೆ)
೨)ಚಿದಾನಂದ ಜಿ(ಅತ್ತಿಗುಂದ)
೩)ಎಂ.ಜಿ.ಕೆ.ಹನುಮಂತಪ್ಪ (ಶಿವಮೊಗ್ಗ)
೪)ಶ್ರೀಮತಿ ಶಾಂತಮ್ಮ( ಶಿವಮೊಗ್ಗ)
೫)ಹೆಚ್.ರವಿ(ಶಿವಮೊಗ್ಗ)
೬)ಎಲ್.ಚಂದ್ರುಶೇಖರ್(ಶಿವಮೊಗ್ಗ)
೭)ಕೆ.ಶ್ರೀನಿವಾಸ್ (ಮಾರಶೆಟ್ಟಿಹಳ್ಳಿ)
೮)ವೆಂಕಟೇಶ್.ಯು.ಕೆ (ಹೊಳೆಹೊನ್ನೂರು)
೯)ಸುಧಾಕರ್.ಎಸ್.ಪಿ (ಶಿವಮೊಗ್ಗ)
೧೦)ರಮೇಶ್.ಯು.ಕೆ (ಹೊಳೆಹೊನ್ನೂರು)
೧೧)ಕೆ.ಟಿ.ಶ್ರೀನಿವಾಸ್(ಭದ್ರಾವತಿ)
೧೨)ವೈ.ಬಿ.ಲೋಕೇಶ್ (ಶಿಕಾರಿಪುರ)
೧೩)ಅರ್ಚನಾ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಘೋಷಿಸಿ ಎಲ್ಲರನ್ನು ಅಭಿನಂದಿಸಿದರು.
ಖಾತೆ ಮಾಡಿಸಲು ಸಾಹೇಬ್ರಿರಿಂದ ಹಿಡಿದು ಬಿಲ್ ಕಲೆಕ್ಟರ್ವರೆಗೂ ಕೊಡಬೇಕು ಎಂದು ಲಂಚ ಕೇಳಿದ ಕೇಸ್ವರ್ಕರ್ ಲೋಕಾಯುಕ್ತ ಬಲೆಗೆ
ಶಿವಮೊಗ್ಗ ಲೋಕಾಯುಕ್ತ ಪೊಲೀಸರು, ಪ್ರಕರಣವೊಂದರಲ್ಲಿ ಖಾತೆ ಮಾಡಿಸಿಕೊಡಲು 15 ಸಾವಿರ ರೂಪಾಯಿ ಲಂಚ ಕೇಳಿದ್ದ ಸೊರಬ ಪುರಸಭೆಯ ಕೇಸ್ವರ್ಕರ್ನ್ನ ಟ್ರ್ಯಾಪ್ ಮಾಡಿದ್ದಾರೆ. ಚಂದ್ರಕಲಾ ಲೋಕಾಯುಕ್ತರ ಬಲೆಗೆ ಬಿದ್ದ ಕೇಸ್ ವರ್ಕರ್
ಪ್ರಕರಣವೇನು?
ಬೆಂಗಳೂರಿನಲ್ಲಿರುವ ಭಾಸ್ಕರ್ ಎಂಬವರ ಜಾಗ ಹಳೆಸೊರಬದಲ್ಲಿದೆ. ಈ ಜಾಗದ ಅಲಿನೇಷನ್ ಆಗಿದ್ದು, ಹಿಂದೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿತ್ತು. ಇದೀಗ ಪರಸಭೆಯ ವ್ಯಾಪ್ತಿಗೆ ಬಂದಿದೆ. ಹೀಗಾಗಿ ಇದರ ಖಾತೆ ಮಾಡಿಸಿಕೊಡುವಂತೆ ಭಾಸ್ಕರ್ರವರ ಸಹೋದರ ಮಂಜುನಾಥ್ ಪುರಸಭೆಗೆ ತೆರಳಿ ಸಂಬಂಧ ಅರ್ಜಿ ಸಲ್ಲಿಸಿದ್ದರು.
ಒಂದರೆಡು ದಿನಗಳ ಬಳಿಕ ಅರ್ಜಿಯ ಬಗ್ಗೆ ವಿಚಾರಿಸಲು ತೆರಳಿದ್ದಾರೆ. ಈ ವೇಳೆ ಕೇಸ್ವರ್ಕರ್ ಚಂದ್ರಕಲಾ ಖಾತೆ ಮಾಡಿಸಲು ಖರ್ಚಾಗುತ್ತದೆ ಎಂದಿದ್ದಾರೆ. ಬಳಿಕ ಇದೇ ವಿಚಾರಕ್ಕೆ ಫೋನ್ ಕಾಲ್ ಮಾಡಿದಾಗಲೂ ಚಂದ್ರಕಲಾರವರು, ನಿವೇಶನವನ್ನು ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡಲು ಸಾಹೇಬ್ರಿಗೆ, ಆರ್‌ಓ, ಆರ್‌ಐ, ಮ್ಯಾನೇಜರ್, ಬಿಲ್ ಕಲೆಕ್ಟರ್ ಇವರಿಗೆ ಕೊಡಲು ಖರ್ಚಾಗುತ್ತದೆ, ನೀವು 15,000/-ಗಳನ್ನು ತೆಗೆದುಕೊಂಡು ಬನ್ನಿ ಎಂದಿದ್ದರಂತೆ.
ಈ ವಿಚಾರವನ್ನು ಮಂಜುನಾಥ್ ಲೋಕಾಯುಕ್ತರಿಗೆ ತಿಳಿಸಿ ದೂರುಕೊಟ್ಟಿದ್ದಾರೆ. ದೂರು ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಲೋಕಾಯುಕ್ತ ಪೊಲೀಸರು ಚಂದ್ರಕಲಾರವರು ದುಡ್ಡುಪಡೆಯುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ಸಂಬಂಧ ಕೇಸ್ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
