ಖಾತೆ ಮಾಡಿಸಲು ಸಾಹೇಬ್ರಿರಿಂದ ಹಿಡಿದು ಬಿಲ್ ಕಲೆಕ್ಟರ್​ವರೆಗೂ ಕೊಡಬೇಕು ಎಂದು ಲಂಚ ಕೇಳಿದ ಕೇಸ್​ವರ್ಕರ್​ ಲೋಕಾಯುಕ್ತ ಬಲೆಗೆ !

Lokayukta nabs caseworker for asking for bribe

ಖಾತೆ ಮಾಡಿಸಲು ಸಾಹೇಬ್ರಿರಿಂದ ಹಿಡಿದು ಬಿಲ್ ಕಲೆಕ್ಟರ್​ವರೆಗೂ ಕೊಡಬೇಕು ಎಂದು ಲಂಚ ಕೇಳಿದ ಕೇಸ್​ವರ್ಕರ್​ ಲೋಕಾಯುಕ್ತ ಬಲೆಗೆ !

KARNATAKA NEWS/ ONLINE / Malenadu today/ Jun 27, 2023 SHIVAMOGGA NEWS

ಶಿವಮೊಗ್ಗ ಲೋಕಾಯುಕ್ತ ಪೊಲೀಸರು, ಪ್ರಕರಣವೊಂದರಲ್ಲಿ ಖಾತೆ ಮಾಡಿಸಿಕೊಡಲು 15 ಸಾವಿರ ರೂಪಾಯಿ ಲಂಚ ಕೇಳಿದ್ದ ಸೊರಬ ಪುರಸಭೆಯ ಕೇಸ್​ವರ್ಕರ್​ನ್ನ ಟ್ರ್ಯಾಪ್ ಮಾಡಿದ್ದಾರೆ. ಚಂದ್ರಕಲಾ ಲೋಕಾಯುಕ್ತರ ಬಲೆಗೆ ಬಿದ್ದ ಕೇಸ್​ ವರ್ಕರ್​

ಪ್ರಕರಣವೇನು? 

ಬೆಂಗಳೂರಿನಲ್ಲಿರುವ ಭಾಸ್ಕರ್​ ಎಂಬವರ ಜಾಗ ಹಳೆಸೊರಬದಲ್ಲಿದೆ. ಈ ಜಾಗದ ಅಲಿನೇಷನ್ ಆಗಿದ್ದು, ಹಿಂದೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿತ್ತು. ಇದೀಗ ಪರಸಭೆಯ ವ್ಯಾಪ್ತಿಗೆ ಬಂದಿದೆ. ಹೀಗಾಗಿ ಇದರ ಖಾತೆ ಮಾಡಿಸಿಕೊಡುವಂತೆ ಭಾಸ್ಕರ್​ರವರ ಸಹೋದರ ಮಂಜುನಾಥ್ ಪುರಸಭೆಗೆ ತೆರಳಿ ಸಂಬಂಧ ಅರ್ಜಿ ಸಲ್ಲಿಸಿದ್ದರು. 

ಒಂದರೆಡು ದಿನಗಳ ಬಳಿಕ ಅರ್ಜಿಯ ಬಗ್ಗೆ ವಿಚಾರಿಸಲು  ತೆರಳಿದ್ದಾರೆ. ಈ ವೇಳೆ ಕೇಸ್​ವರ್ಕರ್​ ಚಂದ್ರಕಲಾ ಖಾತೆ ಮಾಡಿಸಲು ಖರ್ಚಾಗುತ್ತದೆ ಎಂದಿದ್ದಾರೆ. ಬಳಿಕ ಇದೇ ವಿಚಾರಕ್ಕೆ ಫೋನ್ ಕಾಲ್​ ಮಾಡಿದಾಗಲೂ ಚಂದ್ರಕಲಾರವರು,  ನಿವೇಶನವನ್ನು ಪುರಸಭೆಗೆ ಸೇರಿಸಿ ಖಾತೆ ಮಾಡಿಕೊಡಲು ಸಾಹೇಬ್ರಿಗೆ, ಆರ್‌ಓ, ಆರ್‌ಐ, ಮ್ಯಾನೇಜರ್, ಬಿಲ್‌ ಕಲೆಕ್ಟರ್ ಇವರಿಗೆ ಕೊಡಲು ಖರ್ಚಾಗುತ್ತದೆ, ನೀವು 15,000/-ಗಳನ್ನು ತೆಗೆದುಕೊಂಡು ಬನ್ನಿ ಎಂದಿದ್ದರಂತೆ. 

ಈ ವಿಚಾರವನ್ನು ಮಂಜುನಾಥ್​ ಲೋಕಾಯುಕ್ತರಿಗೆ ತಿಳಿಸಿ ದೂರುಕೊಟ್ಟಿದ್ದಾರೆ. ದೂರು ಹಿನ್ನೆಲೆಯಲ್ಲಿ ಕಾರ್ಯಾಚರಣೆಗೆ ಇಳಿದ ಲೋಕಾಯುಕ್ತ ಪೊಲೀಸರು ಚಂದ್ರಕಲಾರವರು ದುಡ್ಡುಪಡೆಯುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ. ಪ್ರಕರಣ ಸಂಬಂಧ ಕೇಸ್​ ದಾಖಲಿಸಿರುವ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.