KARNATAKA NEWS/ ONLINE / Malenadu today/ May 18, 2023 SHIVAMOGGA NEWS
#Viralvideo/ ಕಾಳಿಂಗ ಸರ್ಪವೊಂದಕ್ಕೆ ಪುಣ್ಯಾತ್ಮನೊಬ್ಬ ಮುತ್ತು ಕೊಡುತ್ತಿರುವ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ nickthewrangler ಹೆಸರಿನ ಇನ್ಸ್ಟಾಗ್ರಾಮ್ ಅಕೌಂಟ್ನಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು ವಿಶೇಷ ಕುತೂಹಲ ಮೂಡಿಸುತ್ತಿದೆ.
Nickthewrangler ಹಂಚಿಕೊಂಡಿರುವ ವಿಡಿಯೋದಲ್ಲಿ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದಿರುವಾತ, ಮಾತನಾಡುತ್ತಲೇ ಅದಕ್ಕೆ ಮುತ್ತಿಕ್ಕುತ್ತಾನೆ. ಹಾವು ಅದರ ಅರಿವಲ್ಲದಂತೆ ಇರುತ್ತದೆ. ಈ ದೃಶ್ಯವನ್ನು ಕ್ಯಾಮರಾ ಮ್ಯಾನ್ ಕೂಡ ಸುಂದರವಾಗಿ ಚಿತ್ರಿಸಿದ್ದು, ವಿಡಿಯೋ ನಾಲ್ಕು ಮಿಲಿಯನ್ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.
ಇದನ್ನು ಸಹ ಓದಿ: charmadi ghat/ ಘಾಟಿಯಲ್ಲಿ ದುತ್ತೆಂದು ಎದುರಾದ ಒಂಟಿ ಸಲಗ! ಸರ್ಕಾರಿ ಬಸ್ ಸ್ವಲ್ಪದರಲ್ಲಿಯೇ ಪಾರು!
Public Nuisance / ತುಂಗಾ ನಗರ ಪೊಲೀಸರಿಂದ ಮುಂದುವರಿದ ಸ್ಪೆಷಲ್ ಕಾರ್ಯಾಚರಣೆ! 11 ಜನರು ಸ್ಟೇಷನ್ಗೆ 8 ಮಂದಿ ವಿರುದ್ಧ ಕೇಸ್
ಶಿವಮೊಗ್ಗ/ ತುಂಗಾನಗರ ಪೊಲೀಸ ಸ್ಟೇಷನ್ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ Area Domination ವಿಶೇಷ ಗಸ್ತನ್ನು ಮುಂದುವರಿಸಿದ್ದಾರೆ.
ನಿನ್ನೆಯು ಸಹ ( ದಿನಾಂಕ: 17-05-2023) ತುಂಗಾನಗರ ಪೊಲೀಸ್ ಠಾಣೆ ಪಿಎಸ್ಐ ಕುಮಾರ್ ಮತ್ತು ಸಿಬ್ಬಂದಿಗಳ ತಂಡವು ಠಾಣಾ ವ್ಯಾಪ್ತಿಯ ಸೂಳೆಬೈಲು, ಮದಾರಿಪಾಳ್ಯ, ಎಂಆರ್. ಎಸ್ ವೃತ್ತ, ಪ್ರಿಯಾಂಕಾ ಲೇಔಟ್ ಮತ್ತು ವಡ್ಡಿನ ಕೊಪ್ಪ ಗ್ರಾಮದ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ನಡೆಸಿದೆ.
11 ಜನರು ಸ್ಟೇಷನ್ಗೆ 8 ಮಂದಿ ವಿರುದ್ಧ ಪಿಟ್ಟಿ ಕೇಸ್
ಇನ್ನೂ ಈ ವೇಳೆ ವಿವಿಧ ಎರಿಯಾಗಳಲ್ಲಿ Public Nuisance ಮಾಡುವ ಮತ್ತು ಅನುಮಾನಸ್ಪಾದ 11 ಜನರನ್ನು ಪೊಲೀಸ್ ಠಾಣೆಗೆ ಕರೆತಂದು ಅವರುಗಳ ಪೂರ್ವಪರಗಳನ್ನು ಪರಿಶೀಲಿಸಿ, Public Nuisance ಮಾಡಿದ ವ್ಯಕ್ತಿಗಳ ವಿರುದ್ದ 08 ಲಘು ಪ್ರಕರಣಗಳನ್ನು ದಾಖಲಿಸಿದ್ಧಾರೆ.
