ದೇವರು ನೋಡಿಕೊಳ್ಳುತ್ತಾನೆ ಎಂದಿದ್ದೇಕೆ ಶಿವಣ್ಣ | ಶಿವಮೊಗ್ಗದಲ್ಲಿ BYR ಗೆ ಶುಭಾಶಯ ಹೇಳಿದ ಗೀತಾ

Geetha and Shivarajkumar talk about their defeat in Shivamogga Lok Sabha elections

ದೇವರು ನೋಡಿಕೊಳ್ಳುತ್ತಾನೆ ಎಂದಿದ್ದೇಕೆ ಶಿವಣ್ಣ | ಶಿವಮೊಗ್ಗದಲ್ಲಿ BYR ಗೆ ಶುಭಾಶಯ ಹೇಳಿದ ಗೀತಾ
Geetha Shivarajkumar, Shivanna, Kumar Bangarappa, Shivarajkumar fans, Madhu Bangarappa,

SHIVAMOGGA | MALENADUTODAY NEWS | Jun 10, 2024  ಮಲೆನಾಡು ಟುಡೆʼ

ಶಿವಮೊಗ್ಗದಲ್ಲಿಂದ ಕಾಂಗ್ರೆಸ್‌ ಪಕ್ಷದ ಮುಖಂಡರು ಮತದಾರರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಂಡಿದ್ದಾರೆ. ಈ ಸಮಾವೇಶದಲ್ಲಿ ಪಾಲ್ಗೊಳ್ಳುವ ಸಲುವಾಗಿ ಶಿವಮೊಗ್ಗಕ್ಕೆ ಬಂಧ ನಟ ಶಿವರಾಜ್ ಕುಮಾರ್ ಸುದ್ದಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಚುನಾವಣಾ ಸೋಲಿ‌ನ ಬಗ್ಗೆ ನಾನು ಏನು ಮಾತಾಡಲ್ಲ,  ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ. 

ದೇವರು ನೋಡಿಕೊಳ್ಳುತ್ತಾನೆ

ಗೆಲ್ಲುತ್ತೇವೆ ಅಂದುಕೊಂಡಿದ್ದೇವು, ಯಾರಾದರೂ ಒಬ್ಬರು ಗೆಲ್ಲಬೇಕಿತ್ತು ಗೆದ್ದಿದ್ದಾರೆ, ನಮಗೆ ಯಾರು ಶತ್ತುಗಳಲ್ಲ ಎಂದ ಅವರು ಕುಮಾರ್ ಬಂಗಾರಪ್ಪ ಮನೆ ಮೇಲೆ ದಾಂಧಲೆ ವಿಚಾರಕ್ಕೆ ಪ್ರತಿಕ್ರಿಯಿಸುತ್ತಾ,  ದೇವರು ಇದ್ದಾನೆ ನೋಡಿಕೊಳ್ಳುತ್ತಾನೆ. ದೇವರಿಗಿಂತ ಹೆಚ್ಚಿನ ಶಕ್ತಿ ಯಾರಿಗಿಲ್ಲ, ಅಭಿಮಾನಿ ದೇವರು ಹಾಗೂ ದೇವರಿದ್ದಾನೆ. ನಟರೆಂದ ಮೇಲೆ ಅಭಿಮಾನಿಗಳು ಇರ್ತಾರೆ ಎಲ್ಲವನ್ನೂ  ದೇವರು ನೋಡಿಕೊಳ್ಳುತ್ತಾನೆ ಎಂದರು. 

ಬಿವೈಆರ್‌ಗೆ ಶುಭಾಶಯ

ಇನ್ನೂ  ಗೀತಾ ಶಿವರಾಜ್ ಕುಮಾರ್ ಮಾತನಾಡಿ  ಕೃತಜ್ಞತಾ ಸಭೆಗೆ ಬಂದಿದ್ದೇನೆ ಯಾರಾದರೂ ಒಬ್ಬರು ಗೆಲ್ಲಲೇಬೇಕು ಅವರು ಗೆದ್ದಿದ್ದಾರೆ. ಅವರಿಗೆ ಶುಭಾಶಯಗಳನ್ನು ತಿಳಿಸುತ್ತೇನೆ. ಆದರೆ ನಾನು ಅಂದುಕೊಂಡಂತೆ ಆಗಿಲ್ಲ ಐದು ಲಕ್ಷ ಮತದಾರರು ಮತ ನೀಡಿದ್ದಾರೆ ನಾವು ಚುನಾವಣೆಯಲ್ಲಿ ಮಾಡಬೇಕಾದ ಕೆಲಸ ಮಾಡಿದ್ದೇವೆ ಜನ ಸಪೋರ್ಟ್ ಮಾಡಿದ್ದಾರೆ ಎಂದರು

ಶಿವಮೊಗ್ಗದಲ್ಲಿಯೇ ಮನೆ ಮಾಡುತ್ತೇನೆ 

ಶಿವಮೊಗ್ಗ ಜನರ ಜೊತೆಯಲ್ಲಿ ಇರ್ತೇನೆ ಶಿವಮೊಗ್ಗ ಬಿಟ್ಟು ಹೋಗುವ ಪ್ರಶ್ನೆ ಇಲ್ಲ ಶಿವಮೊಗ್ಗದಲ್ಲಿ ಮನೆ ಮಾಡುತ್ತೇನೆ ಸೋಲಬಾರದಾಗಿತ್ತು ಸೋತಿದ್ದೇವೆ ಕಳೆದ ಬಾರಿಗಿಂತ ಈ ಬಾರೀ ಹೆಚ್ಚಿನ ಮತ ತಗೊಂಡಿದ್ದೇನೆ ಸೋಲಿನ ಹೊಣೆ ಯಾರು ತಗೊಳೊದಿಲ್ಲ ನಾವು ಯಾರು ತಪ್ಪು ಮಾಡಿಲ್ಲ ಗೆಲ್ಲುವ ವಿಶ್ವಾಸ ಇತ್ತು ಆದರೆ ಸೋಲಾಗಿದೆ ಎಂದಿದ್ದಾರೆ.