Shivamogga today | ಅನಾಥ ಮಹಿಳೆ ನಾಪತ್ತೆ | ರೈಲ್ವೆ ಪುಟ್‌ ಓವರ್‌ ಬ್ರಿಡ್ಜ್‌ನಲ್ಲಿ ಪುರುಷನ ಶವ ಪತ್ತೆ |

Details of government announcements in Shivamogga today

Shivamogga today | ಅನಾಥ ಮಹಿಳೆ ನಾಪತ್ತೆ | ರೈಲ್ವೆ ಪುಟ್‌ ಓವರ್‌ ಬ್ರಿಡ್ಜ್‌ನಲ್ಲಿ ಪುರುಷನ ಶವ ಪತ್ತೆ  |
Shivamogga today

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ 

ಮಹಿಳೆಯ ನಾಪತ್ತೆ ಪ್ರಕರಣ

ಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸವಳಂಗ ರಸ್ತೆಯ ಕರ್ನಾಟಕ ಬ್ಯಾಂಕ್ ಎದುರು ರಕ್ಷ ನಿಲಯದಲ್ಲಿರುವ ಸ್ನೇಹಾಶ್ರಯ ಅರ್ಬನ್ ಆಂಡ್ ರೂರಲ್ ಡೆವಲಪ್‍ಮೆಂಟ್ ಸೊಸೈಟಿಗೆ 3 ವರ್ಷಗಳ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ಅನುಸೂಯ 38 ವರ್ಷ ಅನಾಥ ಮಹಿಳೆ ದಾಖಲಾಗಿದ್ದರು. ಈ ಬಳಿಕ ಕಳೆದ ಜೂನ್‌ 11 ರಂದು ಕಾಣೆಯಾಗಿರುತ್ತಾರೆ.  ಈಕೆ ಸುಮಾರು 4.5 ಅಡಿ ಎತ್ತರ, ದುಂಡುಮುಖ, ಗೋಧಿ ಮೈಬಣ್ಣ, ಮುಖದಲ್ಲಿ ಬಲಗಡೆ ಹುಬ್ಬಿನ ಹತ್ತಿರ ಕಪ್ಪು ಮಚ್ಚೆ ಇರುತ್ತದೆ.  ಕಾಣೆಯಾದಂದು ಪಿಂಕ್ ಕಲತ್ ಟಾಪ್ ಹಾಗೂ ಕಪ್ಪು ಕಲರ್ ಲೆಗ್ಗಿನ್ಸ್ ಧರಿಸಿರುತ್ತಾರೆ.  ಈಕೆಯು ಎಲ್ಲಿಯಾದರೂ ಕಂಡುಬಂದಲ್ಲಿ ಜಯನಗರ ಪೊಲೀಸ್ ಠಾಣೆ ದೂ.ಸಂ.: 08182-261400/ 261413/ 261416 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಅಪರಿಚಿತ ಗಂಡಸ್ಸಿನ ಶವ ಪತ್ತೆ

ಜೂನ್‌ 14 ರಂದು ತರೀಕೆರೆ ರೈಲುನಿಲ್ದಾಣದ ಪ್ಲಾಟ್‍ಫಾರಂ 1ರ ಫುಟ್‍ಓವರ್ ಬ್ರಿಡ್ಜ್‌ನ ಪಿಲ್ಲರ್‍ಗೆ ಸುಮಾರು 30-35 ವರ್ಷದ ಗಂಡಸ್ಸಿನ ಶವ ನೇಣುಬಿಗಿದಿರುವ ಸ್ಥಿತಿಯಲ್ಲಿ ಕಂಡುಬಂದಿದ್ದು, ತರೀಕೆರೆ ರೈಲ್ವೇ ಪೊಲೀಸ್‍ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಈ ವ್ಯಕ್ತಿಯ ಚಹರೆ ಸುಮಾರು 5.8 ಅಡಿ ಎತ್ತರವಿದ್ದು, ದೃಢಕಾಯ ಶರೀರ, ಗೋಧಿ ಮೈಬಣ್ಣ, ದುಂಡುಮುಖ, ಅಗಲವಾದ ಹಣೆ, ತಲೆಯಲ್ಲಿ 3 ಇಂಚು ಉದ್ದದ ಕಪ್ಪು ಕೂದಲು ಬಿಟ್ಟಿದ್ದು, ಕುರುಚಲು ಗಡ್ಡ, ಮೀಸೆ ಬಿಟ್ಟಿರುತ್ತಾನೆ.  ಮೈಮೇಲೆ ಹಳದಿ ಮತ್ತು ಕೆಂಪು ಗೆರೆಗಳುಳ್ಳ ನೇರಳೆ ಬಣ್ಣದ ಚೆಕ್ಸ್ ಶರ್ಟ್, ಕಾಫಿ ಕಲ್ ಬರ್ಮುಡಾ ಚೆಡ್ಡಿ, ನೀಲಿ ಬಣ್ಣದ ಕಪ್ಪು ಮತ್ತು ಬಿಳಿ ಗೆರೆಗಳುಳ್ಳ ಲುಂಗಿ ಉಟ್ಟಿರುತ್ತಾನೆ. ಈ ವ್ಯಕ್ತಿಯ ವಾರಸ್ಸುದಾರರು ಯಾರಾದರೂ ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಸಬ್ ಇನ್ಸ್‍ಪೆಕ್ಟರ್‍ನ್ನು ಖುದ್ದಾಗಿ ಅಥವಾ ದೂ.ಸಂ.: 08182-222974 / 9480802124 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ರೈಲ್ವೆ ಪೊಲೀಸ್ ಪ್ರಕಟಣೆ ತಿಳಿಸಿದೆ. 

missing woman named Anusuya, aged 38, from Chikkamagaluru district.  Jayanagara Police Station. The second story is about an unidentified man found hanging on the footbridge pillar at Tarikere railway station on June 14th. Shivamogga Railway Police.