ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ಮಾಡ್ತಿದ್ದ ಕಾಡಾನೆ ಸೆರೆ

KARNATAKA NEWS/ ONLINE / Malenadu today/ May 20, 2023 SHIVAMOGGA NEWS

ಸಕಲೇಶಪುರ/ ರೇಷನ್​ ಅಂಗಡಿಗಳ ಮೇಲೆಯೇ ಕಣ್ಣಿಟ್ಟು ದಾಳಿ ಮಾಡಿ, ಭತ್ತ, ಅಕ್ಕಿ ಮೂಟೆಗಳನ್ನು ಖಾಲಿ ಮಾಡ್ತಿದ್ದ ಆನೆಯನ್ನ ಅರಣ್ಯ ಇಲಾಖೆ ಹಿಡಿಯುವುದರಲ್ಲಿ ಯಶಸ್ವಿಯಾಗಿದೆ. 

Malenadu Today

ಸಕಲೇಶಪುರದ ಬಾಗೆ ಗ್ರಾಮದ ಸಮೀಪದ ಹೊಸೂರು ಎಸ್ಟೇಟ್‌ನಲ್ಲಿ ಕಾರ್ಯಾಚರಣೆ  ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಕಾಫಿ ತೋಟದಲ್ಲಿ ಬೀಡು ಬಿಟ್ಟಿದ್ದ ಆನೆಯನ್ನ ಅರಿವಳಿಕೆ ಚುಚ್ಚುಮದ್ದು ನೀಡಿ ಹಿಡಿದಿದ್ಧಾರೆ. ಇದಕ್ಕಾಗಿ ಅಭಿಮನ್ಯು, ವಿಕ್ರಂ, ಅಜೇಯ, ಪ್ರಶಾಂತ್ ಸಾಕಾನೆಗಳನ್ನು ಬಳಸಿಕೊಳ್ಳಲಾಗಿತ್ತು. 

Malenadu Today

ಮೇಯಲು ಹೋಗಿದ್ದ ಹಸುವಿನ ಕಾಲು ಕಡಿದ ದುಷ್ಕರ್ಮಿಗಳು!

ಎರಡು ದಿನಗಳ ಹಿಂದಷ್ಟೆ ಹಾನುಬಾಳು ಹೋಬಳಿಯಲ್ಲಿ ಈ ಆನೆ ರೇಷನ್ ಅಂಗಡಿಯೊಂದಕ್ಕೆ ನುಗ್ಗಿ ಅಕ್ಕಿಮೂಟೆಗಳನ್ನ ಎಳೆದಾಡಿ ಹಾಳು ಮಾಡಿತ್ತು. ಅಲ್ಲದೆ ಮನೆಯೊಂದರ ಮೇಲೆ ದಾಳಿ ಮಾಡಿತ್ತು. ಈ ಪ್ರದೇಶಗಳಲ್ಲಿಯೇ ಆನೆ ಹಲವು ಸಲ ಅಂಗಡಿ, ಗೌಡೌನ್, ನ್ಯಾಯಬೆಲೆ ಅಂಗಡಿಗಳ ಮೇಲೆ ದಾಳಿ ಮಾಡಿ ಆಹಾರ ಹುಡುಕುತ್ತಿತ್ತು. ಇದೀಗ ಆನೆಯನ್ನ ಸೆರೆ ಹಿಡಿಯಲಾಗಿದೆ.

 

Malenadu Today

ವಿಶೇಷ ಅಂದರೆ, ಈ ಆನೆಯನ್ನು ಕಳೆದ ಒಂದು ವರ್ಷದ ಹಿಂದೆ ಯಸಳೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಸೆರೆಹಿಡಿದು ಮಲೆಮಹದೇಶ್ವರ ಅರಣ್ಯಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಅಲ್ಲಿಂದ ವಾಪಸ್ ಆಗಿ ಮತ್ತೆ ಉಪಟಳ ನೀಡಲು ಆರಂಭಿಸಿತ್ತು. ಇದನ್ನ ಓಲ್ಡ್ ಮಕ್ನಾ ಆನೆ ಎಂಧು ಕರೆಯಲಾಗಿದ್ದು, ಮತ್ತೆ ಅರಣ್ಯಕ್ಕೆ ಬಿಟ್ಟರೆ,  ಪುನಃ  ಇದರ ಉಪಟಳ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಬಿಡಾರಕ್ಕೆ ಶಿಫ್ಟ್ ಮಾಡಿ ಎಂದು ಸ್ಥಳೀಯರು ಮನವಿ ಮಾಡುತ್ತಿದ್ದಾರೆ.  



Leave a Comment