ಹೃದಯ ಗಟ್ಟಿಮಾಡಿಕೊಳ್ಳಿ | ಮೂರು ಘಟನೆ, ಮೂರು ವಿಡಿಯೋ | ಸಾವಿಗೆ ಸಾವಿರ ದಾರಿ | VIRAL TODAY

article describes three recent incidents of sudden deaths due to heart attacks.

ಹೃದಯ ಗಟ್ಟಿಮಾಡಿಕೊಳ್ಳಿ | ಮೂರು ಘಟನೆ, ಮೂರು ವಿಡಿಯೋ | ಸಾವಿಗೆ ಸಾವಿರ ದಾರಿ  | VIRAL TODAY
sudden deaths due to heart attacks

SHIVAMOGGA | MALENADUTODAY NEWS | Jun 7, 2024  ಮಲೆನಾಡು ಟುಡೆʼ 

ಸಾವು ಹೇಗೆ ಬರುತ್ತೆ? ಯಾವಾಗ ಬರುತ್ತೆ ಎಂಬುದನ್ನ ಹೇಳಲಾಗುವುದಿಲ್ಲ. ಈಗೀಗ ವೈರಲ್‌ ಆಗುತ್ತಿರುವ ಸಾವಿನ ದೃಶ್ಯಗಳು ನಿಜಕ್ಕೂ ಆಘಾತ ಹುಟ್ಟಿಸುತ್ತದೆ. ಅದರಲ್ಲಿಯೂ ಹೃದಯಾಘಾತದಿಂದ ಆಗುತ್ತಿರುವ ಸಾವುಗಳು ಇನ್ನೊಬ್ಬರ ಜೀವಕ್ಕೂ ಮುಳುವಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತಹ ಮೂರು ಘಟನೆಗಳು ಕಳೆದ ಹದಿನೈದು ದಿನಗಳಲ್ಲಿ ಸಂಭವಿಸಿದೆ. 

ರಾಷ್ಟ್ರಧ್ವಜ ಹಿಡಿದು ಕುಣಿಯುತ್ತಲೇ ಸಾವನ್ನಪ್ಪಿದ ನಿವೃತ್ತ ಯೋಧ 

ಇಂದೋರ್‌ನಲ್ಲಿ ನಡೆದ ಯೋಗ ಕಾರ್ಯಕ್ರಮವೊಂದು ನಡೆಯುತ್ತಿತ್ತು ದೇಶಭಕ್ತಿ ಗೀತೆಯೊಂದಕ್ಕೆ ನಿವೃತ್ತ ಯೋಧ ಹಾಡುತ್ತಾ ಕುಣಿಯುತ್ತಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದ.  ಹಾಗೆ ಕುಣಿಯುತ್ತಲೇ ಆತ ನೆಲಕ್ಕುರಳಿದ್ದ. ಆದರೆ ಅಲ್ಲಿದ್ದವರು ಅದನ್ನು ಕಾರ್ಯಕ್ರಮದ ಭಾಗವೆಂದೇ ಭಾವಿಸಿದ್ದರು. ನಿವೃತ್ತ ಯೋಧ ಬಲ್ವಿಂದರ್ ಸಿಂಗ್ ಛಾಬ್ರಾ ಅವರಿಗೆ ಹೃದಯಾಘಾತವಾಗಿತ್ತು. ಅವರು ನೆಲಕ್ಕುರುಳಿದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.  

ಬ್ಯುಸಿ ಸರ್ಕಲ್‌ನಲ್ಲಿ ಹಾರ್ಟ್‌ ಅಟ್ಯಾಕ್‌ 

ಇನ್ನೊಂದು ಘಟನೆಯಿದು, ಕೊಲ್ಹಾಪುರದ ಸೈಬರ್ ಚೌಕ್‌ನಲ್ಲಿ ಕಾರೊಂದು ನಾಲ್ಕು ಬೈಕ್‌ಗಳಿಗೆ ಡಿಕ್ಕಿ ಹೊಡೆದು ನಿಂತಿದ್ದ ವಾಹನಕ್ಕೆ ಅಪ್ಪಳಿಸಿತ್ತು. ಈ ಘಟನೆ ನೋಡಿದವರು ನಿಜಕ್ಕೂ ಭಯಬಿದ್ದಿದ್ದರು. ಆನಂತರ ಗೊತ್ತಾದ ವಿಷಯ ಅಂದರೆ ಕಾರು ಚಲಾಯಿಸುತ್ತಿದ್ದ  72 ವರ್ಷದ ವ್ಯಕ್ತಿಗೆ ಹೃದಯಾಘಾತವಾಗಿತ್ತು. ಆತ ಬ್ರೇಕ್‌ ಬದಲು ಎಕ್ಸ್‌ಲೇಟರ್‌ ಮೇಲೆ ಕಾಲು ಒತ್ತಿದ್ದ. ಪರಿಣಾಮ ಈ  ಭೀಕರ ಅಪಘಾತ ಸಂಭವಿಸಿತ್ತು.  ಘಟನೆಯಲ್ಲಿ ಆತನೂ ಸಾವನ್ನಪ್ಪಿದ್ದ. ಇನ್ನೊಂದೆಡೆ ಅಪಘಾತದ ಪರಿಣಾಮವಾಗಿ ಇಬ್ಬರು ಸಾವನ್ನಪ್ಪಿದ್ದರು.  

ಶಾಪ್‌ನಲ್ಲಿ ಬಿಲ್ಲಿಂಗ್‌ ಮಾಡುವಾಗ ನಡೀತು ಈ ಘಟನೆ ಹೈದರಾಬಾದ್‌ನಲ್ಲಿ ನಡೆದ ಘಟನೆಯೊಂದರಲ್ಲಿ ಫಾರ್ಮಸಿಯೊಂದರಲ್ಲಿ ಬಿಲ್ಲಿಂಗ್‌ ಮಾಡುತ್ತಿದ್ದ ಯುವಕ ಇದ್ದಕ್ಕಿದ್ದಂತೆ ಎದೆಹಿಡಿದು ನೆಲಕ್ಕೆ ಬೀಳುತ್ತಾನೆ. ಅದನ್ನ ನೋಡುತ್ತಲೇ ಅಲ್ಲಿದ್ದವನೊಬ್ಬ ಆತನಿಗೆ ಫಿಡ್ಸ್‌ ಬಂದಿರಬೇಕು ಎಂದು ಕಬ್ಬಿಣ ಕೊಡುತ್ತಾನೆ. ಆದರೆ ಆತ ಹೃದಯಾಘಾತದಿಂದ ಅಲ್ಲಿಯೇ ಸಾವನ್ನಪ್ಪಿದ್ದಕಳೆದ ಹದಿನೈದು ದಿನಗಳ ಅಂತರದಲ್ಲಿ ನಡೆದ ಈ ಮೂರು ಘಟನೆಗಳು ಎಲ್ಲೆಡೆ ಹರಿದಾಡುತ್ತಿದೆ. ಅಲ್ಲದೆ ಹೃದಯದ ಆರೋಗ್ಯದ ಬಗ್ಗೆ ಜಾಗೃತೆ ವಹಿಸಿ ಎಂಬ ಸಂದೇಶ ರವಾನೆಯಾಗುತ್ತಿದೆ. ಜೊತೆಯಲ್ಲಿ ಜೀವ ತೆಗೆಯುವ ವಿಧಿ ಇನ್ನೊಬ್ಬರ ಜೀವಕ್ಕೂ ಮುಳುವಾಗುತ್ತದೆ ಎಂಬುದಕ್ಕೆ ಮೂರು ಘಟನೆಯ ಪೈಕಿ ಒಂದು ದೃಶ್ಯ ಸಾಕ್ಷ್ಯಿಯಾಗುತ್ತಿದೆ. 

This article describes three recent incidents of sudden deaths due to heart attacks.