ಮಾರ್ಚ್​ 17 ಕ್ಕೆ ಶಿವಮೊಗ್ಗಕ್ಕೆ ನರೇಂದ್ರ ಮೋದಿ! ವಿಶೇಷ ಏನಿದೆ ಗೊತ್ತಾ? ಇಲ್ಲಿದೆ ವಿವರ ಓದಿ

Shivamogga Mar 11, 2024  Narendra Modi to visit Shimoga   ಶಿವಮೊಗ್ಗ ಲೋಕಸಭಾ ಚುನಾವಣಾ ಕಣ ರಂಗೇರಲು ಆರಂಭಿಸಿದೆ. ಕಾಂಗ್ರೆಸ್​ನಿಂದ ಅರ್ಭರ್ಥಿ ಫಿಕ್ಸ್ ಆದರೂ ಇದುವರೆಗೂ ಗೀತಾ ಶಿವರಾಜ್ ಕುಮಾರ್ ಶಿವಮೊಗ್ಗಕ್ಕೆ ಬಂದಿಲ್ಲ. ಇನ್ನೊಂದೆಡೆ ಬಿಜೆಪಿ ಮೇಲಿಂದ ಮೇಲೆ ಸಮಾವೇಶಗಳನ್ನ ನಡೆಸ್ತಿದೆ. ಈಡಿಗ ಸಮಾವೇಶ, ವಿಪ್ರ ಸಮಾವೇಶಗಳ ಬಳಿಕ ಇದೀಗ ಫ್ರೀಡಂ ಪಾರ್ಕ್​ ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸಮಾವೇಶಕ್ಕೆ ದಿನಾಂಕ ನಿಕ್ಕಿಯಾಗಿದೆ. 

ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಇದೇ 17 ತಾರೀಖಿನಂದು ರಂದು ಮಲೆನಾಡು ಶಿವಮೊಗ್ಗಕ್ಕೆ ನರೇಂದ್ರ ಮೋದಿ  ಆಗಮಿಸಲಿದ್ದಾರೆ.  ಇದಕ್ಕಾಗಿ ಫ್ರೀಡಂ ಪಾರ್ಕ್​​ನಲ್ಲಿ ಸಿದ್ದತೆ ನಡೆಸಲು ಆರಂಭಿಸಲಾಗಿದೆ. ಕೇರಳದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಅವರು ಅಲ್ಲಿಂದ ವಿಶೇಷ ವಿಮಾನದಲ್ಲಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಇಲ್ಲಿ ಸಾರ್ವಜನಿಕ ಬೃಹತ್ ಸಭೆಯಲ್ಲಿ ಭಾಗವಹಿಸಲಿದ್ದಾರೆ  ಮಾ. 17 ರಂದು ಮಧ್ಯಾಹ್ನ 2 ಗಂಟೆಗೆ ಆಗಮಿಸಲಿರುವ ಮೋದಿ ಲೋಕಸಭಾ ಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ 

Leave a Comment