ಕಾಶ್ಮೀರದಲ್ಲಿ ಮತ್ತೆ ಪ್ರತಿಷ್ಠಾಪನೆಗೊಂಡ ಶೃಂಗೇರಿ ಶಾರದಾಂಬೆ! ಇಲ್ಲಿದೆ ನೋಡಿ ವರದಿ!

KARNATAKA NEWS/ ONLINE / Malenadu today/ Jun 6, 2023 SHIVAMOGGA NEWS

ಕಾಶ್ಮೀರದ   ನೀಲಂ ನದಿಯ ದಡದಲ್ಲಿರುವ  ಪುರಾತನ ಶಾರದಾಂಭ ದೇವಾಲಯ ಮತ್ತೆ ಪ್ರತಿಷ್ಟಾನಗೊಂಡಿದೆ. ಈ ಹಿಂದೆ ಇ ಶೈಕ್ಷಣಿಕ ಕೇಂದ್ರವಾಗಿದ್ದ ತೀತ್ವಾಲ್​ನ ದೇವಸ್ಥಾನ, ವಿಭಜನೆಯ ಸಂದರ್ಭದಲ್ಲಿ ನಾಶಗೊಂಡಿತ್ತು. ಇದೀಗ ಅಲ್ಲಿ ನೂತನವಾಗಿ ದೇವಾಲಯವನ್ನು ನಿರ್ಮಿಸಲಾಗಿದ್ದು,  ಶಾರದಾಂಬೆ ವಿಗ್ರಹದ ಪ್ರಾಣ ಪ್ರತಿಷ್ಠಾ ಕಾರ್ಯವನ್ನು ಶೃಂಗೇರಿ ಶಾರದಾ ಪೀಠದ ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿ  ನೆರೆವೇರಿಸಿದ್ಧಾರೆ. 

ವಿವಿಧ ಪೂಜೆಗಳು!

ಶಾರದಾಂಬೆ ಪ್ರತಿಷ್ಠೆ, ಕುಂಭಾಭಿಷೇಕದ ಅಂಗವಾಗಿ ವಿವಿಧ ಕಾರ್ಯಕ್ರಮ ನಡೆದವಷ್ಟೆ ಅಲ್ಲದೆ, ಸ್ಥಳೀಯರು ಅದ್ದೂರಿ ಸ್ವಾಗತದೊಂದಿಗೆ ಶ್ರೀಗಳನ್ನ ಬರಮಾಡಿಕೊಂಡರು,  ಪಂಚಲೋಹದ ಶಾರದೆಯ ವಿಗ್ರಹಕ್ಕೆ ಕಲೋಕ್ತ ಪೂಜೆ, ಪಂಚಾಮೃತಾಭಿಷೇಕ, ಪುರುಷ ಸೂಕ್ತ ಹಾಗೂ ಶ್ರೀ ಸೂಕ್ತ ರುದ್ರಾಭಿಷೇಕ ನಡೆಯಿತು. ನಂತರ ಅಷ್ಟಾವಧಾನ ಸೇವೆ, ಮಹಾಮಂಗಳಾರತಿ ಜರುಗಿತು. 

Malenadu Today

ಜಗದ್ಗುರು ವಿಧುಶೇಖರ ಭಾರತಿ ಸ್ವಾಮೀಜಿಯವರು   ವಿಶೇಷ ಪೂಜೆ ಸಲ್ಲಿಸಿ ಕಲಶ ಪೂಜೆ ಯೊಂದಿಗೆ ಕುಂಭಾಭಿಷೇಕ ನೆರವೇರಿಸಿದರು. ವಾಸ್ತುಹೋಮ, ಕಲಾಹೋಮ, ರಾಕೋಘ್ನ ಹೋಮಾದಿಗಳು ನಡೆದವು.

Malenadu Today

ಶ್ರೀಮಠದ ಪುರೋಹಿತರಾದ ಡಾ.ಶಿವಕುಮಾರ ಶರ್ಮ, ತಂತ್ರಿ ಸೀತಾರಾಮಶರ್ಮ ನೇತೃತ್ವದ ತಂಡ ಧಾರ್ಮಿಕ ಕಾರ್ಯ ನಡೆಸಿತು. ಜಮ್ಮು ಕಾಶ್ಮೀರದ ಗವರ್ನರ್ ಮನೋಜ್ ಸಿನ್ಹಾ ಭಾನುವಾರ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. 

ಅಂಧ ಶಿಕ್ಷಕನ ಮೇಲೆ ಕಲ್ಲು ಎತ್ತಿಹಾಕಿ ಕೊಲೆ! ಸಿಕ್ಕಿಬಿದ್ದ ಆರೋಪಿ

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರದಲ್ಲಿ ನಡೆದಿದ್ದ ಅಂಧಶಿಕ್ಷಕ ಕೊಲೆಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಅಜ್ಜಂಪುರದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕ  ಮಾಲತೇಶ ಜೋಶಿ ಎಂಬವರನ್ನ,  ಅವರ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿತ್ತು.  ಶೆಟ್ರು ಸಿದ್ದಪ್ಪ ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಘಟನೆ ನಡೆದಿತ್ತು. ಮೂಲತಃ ಮಲೆಬೆನ್ನೂರು ನಿವಾಸಿಯಾಗಿದ್ದ ಮಾಲತೇಶ್​ ರವರ ಪತ್ನಿ ಮಗ ಶಿವಮೊಗ್ಗದಲ್ಲಿ ವಾಸವಿದ್ದರು. 

ಪ್ರಕರಣ ಭೇದಿಸಿದ ಪೊಲೀಸರು! 

ಇನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಜ್ಜಂಪುರ ಪೊಲೀಸರು ಆರೋಪಿಯನ್ನು ನಿನ್ನೆ ಸೋಮವಾರ ಬಂಧಿಸಿದ್ದಾರೆ. ಸೈಯದ್ ಆಸೀಫ್ (27) ಬಂಧಿತ ಆರೋಪಿ.  ಶಿಕ್ಷಕ ಮಾಲತೇಶ ಜೋಷಿ ಮತ್ತು ಹತ್ಯೆ ಆರೋಪಿ ಇಬ್ಬರೂ ಬಿ.ವಿ. ಮದ್ಯ ವ್ಯಸನಿಯಾಗಿದ್ದು ಕಳೆದ ಶುಕ್ರವಾರ ರಾತ್ರಿ ಮದ್ಯ ಸೇವಿಸಿದ್ಧಾರೆ.  ಬಳಿಕ ಇವರಿಬ್ಬರ ನಡುವೆ ಜಗಳವಾಗಿದೆ. ಶಿಕ್ಷಕನ ಬಳಿಯಿಂದ   210 ರೂಪಾಯಿಯನ್ನು ಆಸೀಫ್ ಕಿತ್ತುಕೊಳ್ಳಲು ನೋಡಿದ್ದಾನೆ. ಈ ವಿಚಾರದಲ್ಲಿ ಗಲಾಟೆಯಾಗಿ,  ಆಸೀಫ್ ಕಲ್ಲಿನಿಂದ ಮಾಲತೇಶ್‌ನ ತಲೆ ಹಿಂಭಾಗಕ್ಕೆ ಹೊಡೆದು ಸಾಯಿಸಿದ್ದ. 

ಆರೊಪಿ ಸಿಕ್ಕಿಬಿದ್ದಿದ್ದು ಹೇಗೆ? 

ಈ ಮಧ್ಯೆ ಆರೋಪಿ ಬೀರೂರು ರಸ್ತೆಯಲ್ಲಿ ಅನುಮಾನಸ್ಪದವಾಗಿ ಓಡಾಡುತ್ತಿದ್ದ, ಇದನ್ನ ನೋಡಿದ ವಾಕ್​ ಮಾಡುತ್ತಿದ್ದ ಸ್ಥಳೀಯರೊಬ್ಬರು, ಆರೋಪಿ ಮೇಲೆ ರಕ್ತದ ಕಲೆಗಳಿರುವುದನ್ನ ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಆತನನ್ನು ವಿಚಾರಣೆ ನಡೆಸಿದ ಕೊಲೆ ಘಟನೆಯನ್ನು ಬಾಯ್ಬಿಟ್ಟಿದ್ಧಾನೆ. 

ಸಿಗಂದೂರು ಭಕ್ತರಿಗೂ ಸಿಗದು ಲಾಂಚ್?! ಬಂದ್ ಆಗುತ್ತಾ ಹೊಳೆಬಾಗಿಲು ಕಡವು ಸೇವೆ

ಸಾಗರ/  ಶರಾವತಿ ಹಿನ್ನೀರಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಮುಂಗಾರು ಆರಂಭವೂ ಸಹ ತಡವಾಗುತ್ತಿದ್ದು, ಮುಂಗಾರು ಪೂರ್ವ ಮಳೆಯು ಮಲೆನಾಡಿನಲ್ಲಿ ಸಮರ್ಪಕವಾಗಿ ಆಗಿಲ್ಲ.ಪರಿಣಾಮ ಶರಾವತಿ ಹಿನ್ನೀರಿನಲ್ಲಿ ಓಡಾಡುವ ಎರಡು  ಲಾಂಚ್​ಗಳ ಸಂಚಾರ ಈಗಾಗಲೇ ಸ್ಥಗಿತಗೊಂಡಿದ್ದು, ಸಿಗಂದೂರು ಲಾಂಚ್​  ಸಹ ಕಾರ್ಯ ನಿಲ್ಲಿಸುವ ಸಾಧ್ಯತೆ ಇದೆಯಂತೆ. ಪರಿಣಾಮ ಸ್ಥಳೀಯರಿಗೆ ಹಾಗೂ ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ  ಬರುವ  ಪ್ರವಾಸಿಗರಿಗೆ ತೊಂದರೆಯಾಗುವ ಸಾಧ್ಯತೆ ಇದೆ. .

ಅತ್ತ ಲಿಂಗನಮಕ್ಕಿ ಅಣೆಕಟ್ಟೆ ಬರಿದಾಗಿದೆ. ಈ ಹಿನ್ನೆಲೆಯಲ್ಲಿ  ಸಾಗರ ತಾಲ್ಲೂಕಿನ ಮುಪ್ಪಾನೆಯಲ್ಲಿ ಲಾಂಚ್ ಸೇವೆ ಕಳೇದ ಮೇ 26ರಿಂದಲೇ ನಿಂತಿದೆ. ಇನ್ನೂ ಹೊಸನಗರ ತಾಲ್ಲೂಕಿನ ಹಸಿರುಮಕ್ಕಿ ಲಾಂಚ್ ಸಹ ಕಳೆದ  ಜೂನ್ 4ರಿಂದ ಸ್ಥಗಿತವಾಗಿದೆ. ಇದೀಗ ಸಿಗಂದೂರು ಲಾಂಚ್ ನಿಂತ ಪಕ್ಷದಲ್ಲಿ ಸಾಕಷ್ಟು ಸಮಸ್ಯೆಯಾಗಲಿದೆ.  

ಲಾಂಚ್ ನಿಲ್ಲಿಸುವ ಹೊಳೆಬಾಗಿಲು, ಆಂಬಾರಗೋಡ್ಲು ನಲ್ಲಿ ಬೇಸ್ಮೆಂಟ್​ ನಿಂದ ಮುಂದಕ್ಕೆ ಲಾಂಚ್​ ನಿಲ್ಲಿಸಬೇಕಾದ ಅನಿವಾರ್ಯತೆ ಇದ್ದು, ಅಷ್ಟರಮಟ್ಟಿಗೆ ನೀರು ಇಳಿದಿದೆ. ಇದು ಲಾಂಚ್ ನಿಲುಗಡೆಗೆ ಸಮಸ್ಯೆಯಾಗುತ್ತಿದೆ.

ಹಾಗೊಂದು ವೇಳೆ ಇಲ್ಲಿ ಕಾರ್ಯಾಚರಣೆ ನಿಂತರೆ, ಜನರು ಸಂಪೇಕಟ್ಟೆ, ನಿಟ್ಟೂರು ಮೂಲಕ ಸಿಗಂದೂರಿಗೆ ಬರಬೇಕಾಗುತ್ತದೆ. ಅಲ್ಲದೆ ಈ ಭಾಗದ ಜನರು ಸಹ ಸುತ್ತಿಬಳಸಿಯೆ ಸಾಗರಕ್ಕೆ ಬರಬೇಕಾಗುತ್ತದೆ. ಈ ತಲೆಬಿಸಿಯನ್ನು ತಪ್ಪಿಸಲು ಮಳೆಯ ಆಗಮನವಷ್ಟೆ ಪರಿಹಾರವಾಗಿದೆ. 

ಆಯನೂರು ಬಾರ್ ಕ್ಯಾಶಿಯರ್ ಕೊಲೆ ಪ್ರಕರಣ/ ಆರೋಪಿ ಕಾಲಿಗೆ ಗುಂಡು! ಎಸ್​ಪಿ ಮಿಥುನ್ ಕುಮಾರ್ ಹೇಳಿದ್ದೇನು?

ಶಿವಮೊಗ್ಗ/ ಆಯನೂರಲ್ಲಿ ಬಾರ್ ಕ್ಯಾಶಿಯರ್​ ಕೊಲೆ ಪ್ರಕರಣ ಸಂಬಂಧ ಕುಂಸಿ ಪೊಲೀಸರು ಮೂವರನ್ನ ಬಂಧಿಸಿದ್ದಾರೆ. ನಿರಂಜನ, ಅಶೋಕ್​ ಹಾಗೂ ಸತೀಶ್ ಬಂಧಿತರು .  ಈ ಪೈಕಿ ಇಬ್ಬರನ್ನು ಮೊದಲೇ ಬಂಧಿಸಿದ್ದ ಪೊಲೀಸರು, ಸತೀಶ್ ನನ್ನು ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಆತ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಎಸ್​ಐ ರಾಜುರೆಡ್ಡಿಯವರು ಆರೋಪಿ ಕಾಲಿಗೆ ಗುಂಡು ಹೊಡೆದು ಆತನನ್ನ ಬಂಧಿಸಿದ್ದಾರೆ.

ಹಳೇ ಕಿರಿಕ್​! ಆಯನೂರಿನಲ್ಲಿ ನಿನ್ನೆ ರಾತ್ರಿ, ಬಾರ್ ಕ್ಯಾಶಿಯರ್​ಗೆ ಚುಚ್ಚಿ​ ಕೊಲೆ! ಪೊಲೀಸರೇ ಸಾಕ್ಷಿಯಾದರಾ ಭೀಕರ ಘಟನೆಗೆ?

ನಿನ್ನೆ ಮಧ್ಯರಾತ್ರಿ ನಡೆದಿದ್ದ ಕೊಲೆ ಸಂಬಂಧ ಆರೋಪಿ ಸತೀಶ್​ನನ್ನ ಬಂಧಿಸಲು ಪಿಎಸ್​ಐ ರಾಜುರೆಡ್ಡಿ ಹಾಗೂ ಪ್ರವೀಣ್ ಹಾಗೂ ಶಿವರಾಜ್​ ಎಂಬಿಬ್ಬರು ಸಿಬ್ಬಂದಿ ತೆರಳಿದ್ದರು. ಈ ವೇಳೆ ಆರೋಪಿ ಸತೀಶ್​ ಪೊಲೀಸರ ಮೇಲೆ ಚಾಕುವಿನಿಂದ ಅಟ್ಯಾಕ್ ಮಾಡಲು ಪ್ರಯತ್ನಿಸಿದ್ದಾನೆ. ಎಚ್ಚರಿಕೆ ನೀಡಿ ಗಾಳಿಯಲ್ಲಿ ಗುಂಡು ಹೊಡೆದ ಹೊರತಾಗಿಯು ಸತೀಶ್ ದಾಳಿಗೆ ಮುಂದಾದಾಗ ಪಿಎಸ್​ಐ ರವರು ಆತನ ಕಾಲಿಗೆ ಗುಂಡು ಹಾರಿಸಿದ್ಧಾರೆ. ಘಟನೆಯಲ್ಲಿ ಓರ್ವ ಸಿಬ್ಬಂದಿಗೆ ಗಾಯವಾಗಿದ್ದು, ಅವರನ್ನ ಹಾಗೂ ಆರೋಪಿ ಸತೀಶ್​ನನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.  

 

Leave a Comment