ಹಳೇ ಕಿರಿಕ್​! ಆಯನೂರಿನಲ್ಲಿ ನಿನ್ನೆ ರಾತ್ರಿ, ಬಾರ್ ಕ್ಯಾಶಿಯರ್​ಗೆ ಚುಚ್ಚಿ​ ಕೊಲೆ! ಪೊಲೀಸರೇ ಸಾಕ್ಷಿಯಾದರಾ ಭೀಕರ ಘಟನೆಗೆ?

Last night in Ayanur, a bar cashier was stabbed to death! Did the police witness the horrific incident?

ಹಳೇ ಕಿರಿಕ್​!  ಆಯನೂರಿನಲ್ಲಿ  ನಿನ್ನೆ ರಾತ್ರಿ, ಬಾರ್ ಕ್ಯಾಶಿಯರ್​ಗೆ ಚುಚ್ಚಿ​ ಕೊಲೆ!  ಪೊಲೀಸರೇ ಸಾಕ್ಷಿಯಾದರಾ ಭೀಕರ ಘಟನೆಗೆ?

KARNATAKA NEWS/ ONLINE / Malenadu today/ Jun 5, 2023 SHIVAMOGGA NEWS

ಶಿವಮೊಗ್ಗ, ಇಲ್ಲಿನ ಆಯನೂರು ಬಳಿಯಲ್ಲಿ ಬಾರ್​ವೊಂದರ ಕ್ಯಾಶಿಯರ್​ನ ಕೊಲೆಯಾಗಿದೆ.ಇಲ್ಲಿನ ನವರತ್ನ ಬಾರ್​ನಲ್ಲಿ ಈ ಘಟನೆ ಸಂಭವಿಸಿದೆ. 27 ವರ್ಷದ ಸಚಿನ್ ಕುಮಾರ್ ಕೊಲೆಯಾದ ಯುವಕ .ಈತ ಸೊರಬ ಮೂಲದ ನಿವಾಸಿಯಾಗಿದ್ದಾನೆ.

ನಡೆದಿದ್ಧೇನು? 

 ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಆಯನೂರು ಕೋಟೆ ತಾಂಡದ ಮೂವರು ಇಲ್ಲಿನ ನವರತ್ನ ಬಾರ್​ನಲ್ಲಿ ಕುಡಿದು ಗಲಾಟೆ ಮಾಡಿದ್ದಾರೆ. ಬಾರ್​ ಮುಚ್ಚುವ ಸಮಯವಾಗಿದ್ದರೂ ಮದ್ಯಪಾನ ಮಾಡುತ್ತಾ ಕುಳಿತಿದ್ದರಿಂದ ಬಾರ್ ಸಿಬ್ಬಂದಿ 112 ಸಿಬ್ಬಂದಿಗೆ ತಿಳಿಸಿದ್ದಾರೆ. ಈ ವೇಳೆ ಅಲ್ಲಿಗೆ ಪೊಲೀಸರು ಬಂದಿದ್ಧಾರೆ. ಪೊಲೀಸರನ್ನ ಏಕೆ ಕರೆಸಿದ್ದಿಯಾ ಎಂದು ಬಾರ್ ಸಿಬ್ಬಂದಿ ಜೊತೆ ಗಲಾಟೆ ತೆಗೆದಿದ್ಧಾರಷ್ಟೆ ಅಲ್ಲದೆ ಬಾರ್​ ಶಿವಕುಮಾರ್, ಸಚಿನ್​ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆಗೆ ಮುಂದಾಗಿದ್ಧಾರೆ. ಖಾಲಿ ಬಿಯರ್​ ಬಾಟಲಿಯನ್ನ ತನ್ನ ತಲೆಗೆ ಹೊಡೆದುಕೊಂಡು ಸತೀಶ್ ಎಂಬಾತ ಅಲ್ಲಿದ್ದವರಿಗೆ ಅದರಿಂದ ಚುಚ್ಚಲು ಮುಂದಾಗಿದ್ಧಾನೆ. ಈ ವೇಳೆ ಪೊಲೀಸರು ಅದನ್ನು ತಪ್ಪಿಸಿದಿದ್ಧಾರೆ. ಇದೇ ಸಂದರ್ಭದಲ್ಲಿ ನಿರಂಜನ ತನ್ನ  ಸೊಂಟದಲ್ಲಿದ್ದ ಚಾಕುವನ್ನ ತೆಗೆದು ಸಚಿನ್​ಗೆ ಚುಚ್ಚಿರುವುದಾಗಿ ದೂರು ದಾಖಲಾಗಿದೆ. 

ಪೊಲೀಸರ ಎದುರಲ್ಲೆ ನಡೆದು ಹೋಯ್ತು ಘಟನೆ!

ಘಟನೆಯಲ್ಲಿ ತಕ್ಷಣವೇ ಪೊಲೀಸರು ಹಾಗೂ ಬಾರ್ ಸಿಬ್ಬಂದಿ ಸಚಿನ್​​ನನ್ನು ಆಯನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ನಂಜಪ್ಪ ಆಸ್ಪತ್ರೆಗೆ ರವಾನಿಸಿದ್ಧಾರೆ. ಅಷ್ಟೊತ್ತಿಗೆ ಆತ ಸಾವನ್ನಪ್ಪಿರುವುದಾಗಿ ವಿಷಯ ತಿಳಿದುಬಂದಿದೆ.   

ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಸಂಭವಿಸಿದ ಲಾರಿ ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿದ್ದು, ಈ ಪೈಕಿ ಓರ್ವನು ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಜಿಲ್ಲೆ ಹೊಸನಗರ ತಾಲ್ಲೂಕಿನ  ನೆವಟೂರು ಗ್ರಾಮದ ಯುವಕ,  ಶಿವಮೊಗ್ಗ ಜಿಲ್ಲಾ ಡಿಸಿಸಿ ಬ್ಯಾಂಕ್ ನ ಜನರಲ್ ಮ್ಯಾನೇಜರ್ ಮಂಜಪ್ಪ ರವರ ಪುತ್ರ ಧೀರಜ್(24) ಸಾವನ್ನಪ್ಪಿದ್ದಾರೆ. 

ಉಳಿದವರನ್ನ  ಮಾಗಡಿ ತಾಲ್ಲೂಕು ಲಕ್ಕೇನಹಳ್ಳಿ ಗ್ರಾಮದ ಹೇಮಂತ್‌ (24), ಶರತ್‌ (28) ನವೀನ್ (25) ಎಂದು ಗುರುತಿಸಲಾಗಿದೆ. 

ಎಂ ಸ್ಯಾಂಡ್‌ ಸಾಗಿಸುತ್ತಿದ್ದ ಲಾರಿಗೆ ಹಿಂದಿನಿಂದ ಕಾರು ಡಿಕ್ಕಿಯಾದ ಪರಿಣಾಮ ಈ ಭೀಕರ ಅಪಘಾತ ಸಂಭವಿಸಿದೆ.  ಬೆಂಗಳೂರು– ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಿರುಮಲಾಪುರ ಗ್ರಾಮದ ಬಳಿಈ ಘಟನೆ ಸಂಭವಿಸಿದೆ. 

ಮುಪ್ಪಾನೆ ಆಯ್ತು ಈಗ ಹಸಿರುಮಕ್ಕಿ ಸರದಿ! ಲಾಂಚ್​ ಸ್ಥಗಿತ ! ಕೊಲ್ಲೂರು ಮಾರ್ಗ ಬಂದ್!

ಸಾಗರ/ ಇತ್ತೀಚೆಗಷ್ಟೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಶರಾವತಿ ಹಿನ್ನೀರಿನಲ್ಲಿ ಸಂಚರಿಸುತ್ತಿದ್ದ ಮುಪ್ಪಾನೆ ಲಾಂಚ್ ಸೇವೆ ಸ್ಥಗಿತಗೊಂಡಿತ್ತು. ನೀರಿಲ್ಲದೇ ಇರುವುದು ಇದಕ್ಕೆ ಕಾರಣವಾಗಿತ್ತು. ಇದೀಗ ಇದೇ ಕಾರಣಕ್ಕೆ  ಹಸಿರುಮಕ್ಕಿ ಲಾಂಚಿನ ಸಂಚಾರ ತಾತ್ಕಾಲಿಕ ಸ್ಥಗಿತಗೊಳಿಸಲು ಕರ್ನಾಟಕ ಜಲಸಾರಿಗೆ ಮಂಡಳಿ ತೀರ್ಮಾನಿಸಿದೆ.ಇದರಿಂದಾಗಿ, ಮಳೆಗಾಲ ಆರಂಭದವರೆಗೂ ಲಾಂಚ್​ ಈ ಭಾಗದಿಂದ ಆಭಾಗಕ್ಕೆ  ಓಡಾಡುವುದಿಲ್ಲ. 

ಹಸಿರು ಮಕ್ಕಿ ಲಾಂಚ್​ ನಿಂದಾಗಿ ಕೊಲ್ಲೂರಿಗೆ ಹೋಗುವುದಕ್ಕೂ ಕೂಡ ಅನುಕೂಲವಾಗುತ್ತಿತ್ತು. ಅಲ್ಲದೆ ಸಂಪೆಕಟ್ಟೆ, ನಿಟ್ಟೂರು, ಸಂಪರ್ಕವೂ ಲಾಂಚ್​ ಸ್ಥಗಿತದಿಂದ ಬಂದ್ ಆಗಿದೆ. ಈ ಮಾರ್ಗದಲ್ಲಿ ಓಡಾಡುವವರು ಹೊಸನಗರ, ನಗರ ಮಾರ್ಗ ಬಳಸಬೇಕಾಗಿದೆ. 

ಶರಾವತಿ ಹಿನ್ನೀರು ಇಳಿಯುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ದೊಡ್ಡ ಕಲ್ಲುಗಳು, ಮಣ್ಣಿನ ದಿಬ್ಬ, ಮರದ ದಿಮ್ಮಿಗಳು ಲಾಂಚ್​ಗೆ ಅಡ್ಡೆ ಹೊಡೆಯುತ್ತಿವೆ. ಹೀಗಾಗಿ ಲಾಂಚ್​ ಸಂಚಾರ ಅಪಾಯಕಾರಿಯಾಗುವ ಸಾಧ್ಯತೆ ಇದೆ.  ಈ ಕಾರಣಕ್ಕೆ ಲಾಂಚ್ ಸ್ಥಗಿತಗೊಳಿಸಲಾಗಿದೆ. 

ಶಿವಮೊಗ್ಗದ ಕ್ರೈಂ ಪೊಲೀಸರಿಗೆ ವಿಶೇಷ ಟ್ರೈನಿಂಗ್! ವಿವರ ಓದಿ

ಶಿವಮೊಗ್ಗ ಜಿಲ್ಲೆಯ ಪೊಲೀಸರಿಗೆ ವಿಶೇಷ ತರಭೇತಿಯನ್ನ ನೀಡಲಾಗುತ್ತಿದೆ.ಇದಕ್ಕೆ ಪೂರಕವಾಗಿ ದಿನಾಂಕಃ 03-06-2023 ಮತ್ತು 04-06-2023 ರಂದು ಜಿಲ್ಲೆಯ ವಿವಿಧ ಠಾಣೆಗಳ ಅಪರಾಧ ವಿಭಾಗದ ಪೊಲೀಸರಿಗೆ ಫಿಂಗರ್​ ಪ್ರಿಂಟ್​ನ ವಿಚಾರವಾಗಿ ತರಭೇತಿ ನೀಡಲಾಗಿದೆ. 

ಶಿವಮೊಗ್ಗ ನಗರದ ಡಿಎಆರ್ ಪೊಲೀಸ್ ಸಭಾಂಗಣದಲ್ಲಿ, ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ಕ್ರೈಂ ವಿಭಾಗದ ಅಧಿಕಾರಿ ಮತ್ತು ಸಿಬ್ಬಂಧಿಗಳಿಗೆ ಫಿಂಗರ್ ಪ್ರಿಂಟ್, ಲೈವ್ ಸ್ಕ್ಯಾನರ್ ಮತ್ತು ಎಂಸಿಸಿಟಿಎನ್ಎಸ್ ಅಪ್ಲಿಕೇಷನ್ ಗಳ ಕುರಿತಂತೆ ತರಬೇತಿ ಕಾರ್ಯಾಗಾರವನ್ನು ನಡೆಸಿ, ಅವುಗಳ ಬಳಕೆ ಮತ್ತು ಉಪಯೋಗಗಳ ಬಗ್ಗೆ ಮಾಹಿತಿ ನೀಡಲಾಗಿದೆ.  

ರುದ್ರೇಶ್, ಪೊಲೀಸ್ ಉಪಾಧೀಕ್ಷಕರು, ಬೆಳರುಮುದ್ರೆ ಘಟಕ, ಪೂರ್ವ ವಲಯ ದಾವಣಗೆರೆ ಮತ್ತು ಕೆಂಚಪ್ಪ, ಪೊಲೀಸ್ ಉಪ ನಿರೀಕ್ಷಕರು, ಬೆರಳು ಮುದ್ರೆ ಘಟಕ ಮತ್ತು ಇಲ್ಲಿನ ಅಧಿಕಾರಿಗಳು ಸಿಬ್ಬಂದಿಗೆ ಟ್ರೈನಿಂಗ್ ನೀಡಿದರು.