ನೀಟ್ ಮರು ಪರೀಕ್ಷೆ | ಬೀದಿಗಿಳಿದಿ ಎನ್‌ಎಸ್‌ಯುಐ ಹೇಳೋದೇನು?

NSUI city president Charan has stated that the NEET re-examination for 1563 grace-marked students on June 23 is a victory for the NSUI struggle.

ನೀಟ್ ಮರು ಪರೀಕ್ಷೆ  | ಬೀದಿಗಿಳಿದಿ ಎನ್‌ಎಸ್‌ಯುಐ ಹೇಳೋದೇನು?
NEET re-examination

SHIVAMOGGA | MALENADUTODAY NEWS | Jun 15, 2024  ಮಲೆನಾಡು ಟುಡೆ

ಕೃಪಾಂಕ ನೀಡಲಾಗಿದ್ದ 1563 ವಿದ್ಯಾರ್ಥಿಗಳಿಗೆ ಜೂನ್ 23 ರಂದು ನೀಟ್ ಮರು ಪರೀಕ್ಷೆ ನಡೆಸುತ್ತಿರುವುದು ಎನ್‌ಎಸ್‌ಯುಐ ಹೋರಾಟಕ್ಕೆ ಸಂದ ಜಯವಾಗಿದೆ ಎಂದು ಎನ್‌ಎಸ್‌ಯುಐ ನಗರಾಧ್ಯಕ್ಷ ಚರಣ್ ತಿಳಿಸಿದ್ದಾರೆ. ನೀಟ್ ಅಕ್ರಮ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವಂತೆ ಹಾಗೂ ಮರು ಪರೀಕ್ಷೆ ನಡೆಸುವಂತೆ ಎನ್‌ಎಸ್‌ಯುಐ ವಿದ್ಯಾರ್ಥಿಗಳ ಪರವಾಗಿ ರಾಜ್ಯಾದ್ಯಂತ ಹಾಗೂ ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿತ್ತು. 

 

ಕೃಪಾಂಕ ನೀಡಿರುವುದು ಹಾಗೂ ಒಂದೇ ಕೋಚಿಂಗ್ ಸೆಂಟರ್ ವಿದ್ಯಾರ್ಥಿಗಳು ಮೊದಲ ರ‍್ಯಾಂಕ್ ಬಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿತ್ತು. ಎನ್‌ಎಸ್‌ಯುಐ ವತಿಯಿಂದ ಪರೀಕ್ಷಾ ಅಕ್ರಮದ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಕೃಪಾಂಕವನ್ನು ರದ್ದುಪಡಿಸಿದ್ದು, 1563 ವಿದ್ಯಾರ್ಥಿಗಳಿಗೆ ಮರು ಪರೀಕ್ಷೆ ನಡೆಸಲು ಕ್ರಮ ವಹಿಸಲಾಗಿದೆ. ಎನ್‌ಎಸ್‌ಯುಐ ಸಂಘಟನೆಯಿಂದ ಹೋರಾಟ ನಡೆಸಿದ ಪರಿಣಾಮವಾಗಿ ಜಯ ಸಿಕ್ಕಿದೆ ಎಂದು ಎನ್‌ಎಸ್‌ಯುಐ ನಗರಾಧ್ಯಕ್ಷ ಚರಣ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ ದೆಹಲಿಯಲ್ಲಿ ನೀಟ್ ಪರೀಕ್ಷೆ ಅಕ್ರಮದ ಕುರಿತು ಪ್ರತಿಭಟಿಸುತ್ತಿದ್ದ ಎನ್‌ಎಸ್‌ಯುಐ ಕಾರ್ಯಕರ್ತರ ಮೇಲೆ ಹಾಕಿರುವ ಎಫ್‌ಐಆರ್ ಹಿಂಪಡೆಯಬೇಕು ಎಂದು ಕೂಡ ಆಗ್ರಹಿಸಿದ್ದಾರೆ.

 

NSUI city president Charan has stated that the NEET re-examination for 1563 grace-marked students on June 23 is a victory for the NSUI struggle.