ಸಿಮ್​ ಬ್ಲ್ಯಾಕ್​ ಮಾಡಿಯು ದುಡ್ಡು ಕದೀತಾರೆ! ಪೆಟ್ರೋಲ್​ ಹಾಕಿಸದೇ ಎಸ್ಕೇಪ್​ ಆದವರು ಗೋವು ಕಳ್ಳರಾ? , ಶಿಕಾರಿಪುರ ಬಂದ್ ಆಗಿದ್ದೇಕೆ? TODAY@NEWS

A brief report on shivamogga, chikkamagaluru and davanagere districts TODAY@NEWS

ಸಿಮ್​ ಬ್ಲ್ಯಾಕ್​ ಮಾಡಿಯು  ದುಡ್ಡು ಕದೀತಾರೆ! ಪೆಟ್ರೋಲ್​ ಹಾಕಿಸದೇ ಎಸ್ಕೇಪ್​ ಆದವರು ಗೋವು ಕಳ್ಳರಾ? , ಶಿಕಾರಿಪುರ ಬಂದ್ ಆಗಿದ್ದೇಕೆ? TODAY@NEWS

KARNATAKA NEWS/ ONLINE / Malenadu today/ Jul 10, 2023 SHIVAMOGGA NEWS

ಶಿಕಾರಿಪುರ ಬಂದ್ !

ಶಿವಮೊಗ್ಗ ಜಿಲ್ಲೆ  ಶಿಕಾರಿಪುರದಲ್ಲಿ (shikaripura bundh)ಗೋವುಗಳ ಅಕ್ರಮ ಸಾಗಾಣಿಕೆ, ಹತ್ಯೆ ಮತ್ತು ಹಿ೦ದೂಗಳ ಭಾವನೆಗೆ ಧಕ್ಕೆ ಉಂಟುಮಾಡಲಾಗ್ತಿದೆ ಎಂದು ಆರೋಪಿಸಿ ಜಾಗೃತಿಕ ನಾಗರಿಕ ವೇದಿಕೆ ವತಿಯಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗಿದೆ. ಅಲ್ಲದೆ ಈ ಸಂದರ್ಭದಲ್ಲಿ ಸ್ವಯಂಪ್ರೇರಿತ ಬಂದ್ ಕೂಡ ನಡೆಸಲಾಗಿದೆ. ಬಂದ್ ವೇಳೆ  ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು  ಬಂದ್ ಮಾಡಲಾಗಿತ್ತು.

ಕಳೆದ ಜು.2ರ ವೇಳೆ ಹುಣೀದನಹಳ್ಳಿ ಮುತ್ತು ಕೊಟ್ನಳ್ಳಿ ಬಳಿ ಪತ್ತೆಯಾದ ಗೋಮಾಂಸ ಮತ್ತು ಚರ್ಮದ ವಿಷಯದ ಕುರಿತು ಪೊಲೀಸ್ ಸ್ಠೇಷನ್​ಗಳಲ್ಲಿ ಈಗಾಗಲೇ ಪ್ರಕರಣಗಳು ದಾಖಲಾಗಿವೆ. ಇದೇ ವಿಚಾರವಾಗಿ ಇವತ್ತು ಪ್ರತಿಭಟನೆ ನಡೆದಿದೆ. ಇನ್ನೂ ಈ ಘಟನೆಯಲ್ಲಿ  ಸಂಘ ಪರಿವಾರದ ಕಾರ್ಯಕರ್ತ ಹರೀಶ್ ಮೇಲೆ ನಡೆದ ಹಲ್ಲೆ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ.  


ಡೂಪ್ಲಿಕೇಟ್ ಸಿಮ್​ ತಗೊಂಡು 2 ಲಕ್ಷ ಕದ್ದ ಕಳ್ಳರು

ಜೆರಾಕ್ಸ್ ಅಂಗಡಿಯೊಂದರ ಮಾಲೀಕರ ಸಿಮ್‌ ಕಾರ್ಡ್‌ ಸ್ಥಗಿತ (ಬ್ಲಾಕ್‌) ಮಾಡಿಸಿದ್ದ ಸೈಬರ್‌ ವಂಚಕರು, ಬಳಿಕ ಡೂಪ್ಲಿಕೇಟ್ ಸಿಮ್ ಮೂಲಕ ಓಟಿಪಿ ಪಡೆದು, ವ್ಯಕ್ತಿಯೊಬ್ಬರ ಅಕೌಂಟ್​ನಲ್ಲಿ  ₹ 2 ಲಕ್ಷ ಡ್ರಾ ಮಾಡಿಕೊಂಡಿದ್ದಾರೆ. ವ್ಯಕ್ತಿಯ ವಿವಿಧ ಮಾಹಿತಿಗಳನ್ನು ಕದ್ದಿರುವ ವ್ಯಕ್ತಿಗಳೇ ಈ ಕೃತ್ಯವೆಸಗಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಂಬಂದ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

ಹಳಿದಾಟುತ್ತಿದ್ದ ಅಜ್ಜ ಜಸ್ಟ್ ಬಚಾವ್

ಹಳಿ ದಾಟುತ್ತಿದ್ದ ವೃದ್ಧರೊಬ್ಬರು ಟ್ರೈನ್ ಬರುವುದನ್ನ ಗಮನಿಸಿದೇ ಗಾಬರಿಗೊಂಡಿದ್ದ ಸಂದರ್ಭದಲ್ಲಿ ರೈಲ್ವೆ ಪೊಲೀಸ್​ ಸಿಬ್ಬಂದಿ ಅವರ ಜೀವ ಉಳಿಸಿದ್ಧಾರೆ. ದಾವಣಗೆರೆಯ  ಶಕ್ತಿನಗರದ ನಿವಾಸಿ 80 ವರ್ಷದ ರಂಗಪ್ಪ ಅರಸಿಕೆರೆಗೆ ಹೊರಟ್ಟಿದ್ದರು.   ಮತ್ತೊಂದು ಪ್ಲಾಟ್‌ ಫಾರ್ಮ್ ಗೆ ತೆರಳಲು ರೈಲು ಬರುತ್ತಿರುವುದನ್ನು ಗಮನಿಸದೇ ಹಳಿ‌ಗೆ ಇಳಿದಿದ್ದಾರೆ. ಅಷ್ಟೊತ್ತಿಗೆ ರೈಲು ಬಂದಿದೆ. ತಕ್ಷಣ ಗಾಬರಿಯಾಗಿದ್ಧಾರೆ. ಆಗ ಅಲ್ಲೆ ಇದ್ದ  ಶಿವಾನಂದರವರು ರಂಗಪ್ಪರವರನ್ನು ಹಳಿಯಿಂದ ಇನ್ನೊಂದೆಡೆಗೆ ಎಳೆದು ರಕ್ಷಣೆ ಮಾಡಿದ್ಧಾರೆ.  



ಅಮರನಾತ ಯಾತ್ರೆಗೆ ಹೋದವರು ಸುರಕ್ಷಿತ

ಜಮ್ಮು ಮತ್ತು ಕಾಶ್ಮೀರದಲ್ಲಿ (Jammu and Kashmir) ಅಮರನಾಥ ಯಾತ್ರೆ(Amarnath )ಗೆ ತೆರಳಿದ್ದ ಚಿಕ್ಕಮಗಳೂರು ನಿವಾಸಿಗಳು ಸೇರಿದಂತೆ  80 ಮಂದಿ ಕನ್ನಡಿಗರು (Kannadigas) ಸದ್ಯ ಸುರಕ್ಷಿತವಾಗಿದ್ದಾರೆ. ಅವರನ್ನು ರಾಜ್ಯ ಸರ್ಕಾರ ಕರೆತರುವ ಪ್ರಯತ್ನ ಮಾಡುತ್ತಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಅಲ್ಲದೇ ರಾಜ್ಯದ ಯಾತ್ರಿಗಳ ನೆರವಿಗಾಗಿ ಕಂದಾಯ ಇಲಾಖೆಯ ಐಎಎಸ್ ಅಧಿಕಾರಿ ರಶ್ಮಿ ನಿಯೋಜನೆ ಮಾಡಲಾಗಿದೆ. ಈ ಮಧ್ಯೆ ಅಮರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮತ್ತು ಗದಗ ಯಾತ್ರಿಗಳನ್ನು ರಕ್ಷಿಸಿದ್ದಾರೆ. 

ಪೆಟ್ರೋಲ್ ಹಾಕಿಸಿಕೊಂಡು ಎಸ್ಕೇಪ್​

3000 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ದುಡ್ಡು ಕೊಡೆದೆ ಎಸ್ಕೇಪ್ ಆದ ಘಟನೆ ಇದೀಗ ಕಾಫಿನಾಡಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.  ಶೃಂಗೇರಿ ಪಟ್ಟಣದ ಹೊರವಲಯದ ಹೆಚ್.ಪಿ. ಪೆಟ್ರೋಲ್ ಬಂಕ್ ನಲ್ಲಿ ಈ ಘಟನೆ ನಡೆದಿದ್ದು, ರಿಜಿಸ್ಟ್ರೇಷನ್ ನಂಬರ್ ಇಲ್ಲದ ಸ್ವಿಫ್ಟ್ ಕಾರಿನಲ್ಲಿ ಬಂದಿದ್ದ ಗ್ಯಾಂಗ್ ವೊಂದು ಪೆಟ್ರೋಲ್ ಹಾಕಿಸಿಕೊಂಡು ಅಲ್ಲಿಂದ ಕಾಲ್ಕಿತ್ತಿದೆ. ಅಲ್ಲದೆ, ಇದೇ ಗ್ಯಾಂಗ್ ಗೋವುಗಳನ್ನ ಕಳ್ಳತನ ಮಾಡ್ತಿದೆ ಅಂತಾ ಕೆಲವರು ಆರೋಪಿಸಿದ್ದಾರೆ. 

ಸಿಗಂದೂರು ಬೆನ್ನಲ್ಲೆ ಹಸಿರುಮಕ್ಕಿಯಲ್ಲಿಯು ಸಿಕ್ತು ಸಾರ್ವಜನಿಕರಿಗೆ ಒಳ್ಳೆ ಸುದ್ದಿ!

 

 

 shivamogga news,shivamogga news paper, news paper today shivamogga,shivamogga news kannada,shivamogga news paper today,shivamogga smart city news, shivamogga crime story news,namma shivamogga news paper,shivamogga news,shivamogga,shimoga news,shivamogga karnataka,shimoga news kannada,shimoga live news, shimoga local newspaper,shimoga news live,shimoga news today,shimoga one,shimoga airport recruitment,shimoga airport jobs,shivamogga airport jobs,shimoga rowdies,shimoga train timings,tv9 kannada headlines,esi hospital shimoga,jobs in bhadravati city,bangalore to shikaripura,shimoga news today,shimoga kannada news,shimoga bangalore train,bangalore to shimoga train.shimoga local newspaper,shimoga to bangalore train,adike rate today shimoga,shimoga news tv9,shimoga news channel,country club shimoga,shimoga news today,shimoga kannada news,shimoga bangalore train,bangalore to shimoga train...,shimoga local newspaper,shimoga to bangalore train,adike rate today shimoga,shimoga news tv9,shimoga news channel,