ಸಿಗಂದೂರು ಬೆನ್ನಲ್ಲೆ ಹಸಿರುಮಕ್ಕಿಯಲ್ಲಿಯು ಸಿಕ್ತು ಸಾರ್ವಜನಿಕರಿಗೆ ಒಳ್ಳೆ ಸುದ್ದಿ!

Malenadu Today

KARNATAKA NEWS/ ONLINE / Malenadu today/ Jul 10, 2023 SHIVAMOGGA NEWS 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ಹಸಿರುಮಕ್ಕಿಯಲ್ಲಿ,  ಲಾಂಚ್ ಓಡಾಟ (Hasirumakki launch)  ಮತ್ತೆ  ಆರಂಭವಾಗಿದೆ.  ಮಳೆಯಿಲ್ಲದೆ, ಹಿನ್ನೀರಿನ ಪ್ರಮಾಣ ತಗ್ಗಿತ್ತು. ಈ ಹಿನ್ನೆಲೆಯಲ್ಲಿ ಲಾಂಚ್ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು. ಇದೀಗ ಮತ್ತೆ ಶರಾವತಿಯಲ್ಲಿ ಹಿನ್ನೀರು ಮೇಲಕ್ಕೆ ಬಂದಿದೆ. ಹೀಗಾಗಿ ಲಾಂಚ್ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. 

ಕಳೆದ ಶುಕ್ರವಾರ ಸಿಗಂದೂರನ್ನು ಸಂಪರ್ಕಿಸುವ ಲಾಂಚ್ ಸಂಚಾರದಲ್ಲಿ ವಾಹನ ಸಾಗಾಟಕ್ಕೆ ಮತ್ತೆ ಅವಕಾಶ ಕಲ್ಪಿಸಲಾಗಿತ್ತು. ಇದೀಗ ಇವತ್ತಿನಿಂದಲೇ ಹಸಿರುಮಕ್ಕಿ ಲಾಂಚ್ ಓಡಾಟ ಆರಂಭಿಸಲಿದೆ. 

 

 

 

Share This Article