ಟ್ರ್ಯಾಕ್ಟರ್​ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ 20 ಕ್ಕೂ ಹೆಚ್ಚು ಮಂದಿಗೆ ಗಾಯ

Over 20 injured as KSRTC bus collides with tractor

ಟ್ರ್ಯಾಕ್ಟರ್​ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ 20 ಕ್ಕೂ ಹೆಚ್ಚು ಮಂದಿಗೆ ಗಾಯ
KSRTC bus collides with tractor

Shivamogga | Feb 3, 2024 |  ಮದುವೆ ಸಮಾರಂಭ ಮುಗಿಸಿಕೊಂಡು ವಾಪಾಸ್ ಹೋಗುವ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ನಿಯಂತ್ರಣ ತಪ್ಪಿ ಟ್ಯಾಕ್ಟರ್‌ ಡಿಕ್ಕಿ ಹೊಡೆದು ರಸ್ತೆ ಬದಿ ಕಂದಕಕ್ಕೆ ಬಿದ್ದ ಘಟನೆ ಚಳ್ಳಕೆರೆ ಸಮೀಪ ನಡೆದಿದೆ. 

ಘಟನೆಯ ಪರಿಣಾಮ ಬಸ್‌ ನಲ್ಲಿದ್ದ ಸುಮಾರು 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಗಾಯಾಳುಗಳು ಮಾಗಡಿ ಮೂಲದವರು. ಒಟ್ಟು 30ಕ್ಕೂ ಹೆಚ್ಚು ಜನರು  ಮದುವೆ ಒಪ್ಪಂದ ಮೇರೆಗೆ  ಕೆಎಸ್‌ಆರ್‌ಟಿಸಿ ಬಸ್ ಕಲಬುರಗಿಯಿಂದ ಗುರುವಾರ ಸಂಜೆ ಹೊರಟು ಬಳ್ಳಾರಿ, ಚಳ್ಳಕೆರೆ, ತುಮಕೂರು ಮೂಲಕ ಮಾಗಡಿಗೆ ತಲುಪಬೇಕಿತ್ತು.

 

ನಿನ್ನೆ ಶುಕ್ರವಾರ ಬೆಳಗಿನ ಜಾವ ಈ ಅವಘಡ ಸಂಭವಿಸಿದೆ. ಡಿಕ್ಕಿ ರಭಸಕ್ಕೆ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ಇಟ್ಟಿಗೆಗಳು ರಸ್ತೆ ತುಂಬೆಲ್ಲ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಸುದ್ದಿ ತಿಳಿದ ಕೂಡಲೇ ತಳಕು ಪೊಲೀಸರು ಸ್ಥಳಕ್ಕೆ ಧಾವಿಸಿ ಹೈವೆ ಅಂಬ್ಯುಲೆನ್ಸ್ ಮೂಲಕ ಗಾಯಾಳುಗಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ.