ಬಸ್ಸನ್ನ ಓವರ್‌ ಟೇಕ್‌ ಮಾಡುವಾಗ ಅವಗಢ | ಕಾರು- ಬೈಕ್‌ ಡಿಕ್ಕಿ | ಮೂವರು ಗಂಭೀರ

car and a bike collided near Yadehalli, Holehonnur in Shivamogga district, injuring three people

ಬಸ್ಸನ್ನ ಓವರ್‌ ಟೇಕ್‌ ಮಾಡುವಾಗ ಅವಗಢ | ಕಾರು- ಬೈಕ್‌ ಡಿಕ್ಕಿ | ಮೂವರು ಗಂಭೀರ
adehalli, Holehonnur , Shivamogga district,

SHIVAMOGGA | MALENADUTODAY NEWS | Jun 13, 2024  ಮಲೆನಾಡು ಟುಡೆ

ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪ ಯಡೇಹಳ್ಳಿ ಬಳಿಯಲ್ಲಿ ಅಪಘಾತವಾಗಿದ್ದು, ಕಾರು ಮತ್ತು ಬೈಕ್‌ ನಡುವೆ ಡಿಕ್ಕಿಯಾಗಿ ಮೂವರು ಗಾಯಗೊಂಡಿದ್ದಾರೆ.  ಬಸ್‌ವೊಂದನ್ನ ಓವರ್‌ ಟೇಕ್‌ ಮಾಡುವಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.  ಯಡೇಹಳ್ಳಿ ಕಡೆಯಿಂದ  ಹೊಳೆಹೊನ್ನೂರು ಕಡೆಗೆ ಹೊರಟಿದ್ದ ಬೈಕ್‌ವೊಂದು ಮುಂದೆ ಹೋಗುತ್ತಿದ್ದ ಬಸ್‌ನ್ನ ಓವರ್‌ ಟೇಕ್‌ ಮಾಡಲು ಮುಂದಾಗಿದೆ. ಈ ವೇಳೆ ಎದುರುಗಡೆಯಿಂದ ಕಾರೊಂದು ಬಂದಿದೆ. ಘಟನೆಯಲ್ಲಿ ಮೂವರಿಗೆ ಗಾಯವಾಗಿದೆ.ಗಾಯಗೊಂಡವರನ್ನು ಹೊಳೆ ಬೈರನಹಳ್ಳಿಯ ಯುವಕರು ಎನ್ನಲಾಗಿದೆ. ಅವರನ್ನ ಸದ್ಯ ಶಿವಮೊಗ್ಗದ ಆಸ್ಪತ್ರೆಗೆ ಅಡ್ಮಿಟ್‌ ಮಾಡಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಹಾಗೂ ಖಚಿತತೆ ಲಭ್ಯವಾಗಬೇಕಿದೆ. 

A car and a bike collided near Yadehalli, Holehonnur in Shivamogga district, injuring three people. The accident reportedly occurred while a bike, heading from Yadehalli towards Holehonnur, tried to overtake a bus and collided with an oncoming car. More information about the incident is awaited.