ಶಿವಮೊಗ್ಗದಲ್ಲಿ ಡೆಂಗ್ಯೂ ಆತಂಕ | ಸಾಗರ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿ ಸಾವು

patient from Sagar taluk, Nagaraj, died of dengue in a private hospital in Shivamogga.

ಶಿವಮೊಗ್ಗದಲ್ಲಿ ಡೆಂಗ್ಯೂ ಆತಂಕ | ಸಾಗರ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿ ಸಾವು
private hospital in Shivamogga, Sagar taluk, Sagar Sub-Divisional Hospital

SHIVAMOGGA | MALENADUTODAY NEWS | Jun 13, 2024  ಮಲೆನಾಡು ಟುಡೆ

ಶಿವಮೊಗ್ಗದಲ್ಲಿ ಡೆಂಗ್ಯೂ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಡೆಂಗ್ಯೂ ನಿಂದ ಬಳಲುತ್ತಿದ್ದ ಸಾಗರ ತಾಲೂಕು ಉಪವಿಭಾಗೀಯ ಆಸ್ಪತ್ರೆಯ ಡಯಾಲಿಸಿಸ್ ವಿಭಾಗದ ನಾಗರಾಜ್ (34) ರವರು ಸಾವನ್ನಪ್ಪಿದ್ದಾರೆ. ಇವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.  ಜ್ವರದಿಂದ ಬಳಲುತ್ತಿದ್ದ ನಾಗರಾಜ್‌ರವರಿಗೆ  ಡೆಂಗ್ಯೂ ಸೋಂಕು ಇರುವುದು ಸಾಗರ ಆಸ್ಪತ್ರೆಯಲ್ಲಿ ದೃಢಪಟ್ಟಿತ್ತು. ಆನಂತರ ಎರಡು ದಿನಗಳ ಬಳಿಕ ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿತ್ತು.   

ಇನ್ನೂ ವಿಚಾರದ ಬಗ್ಗೆ ಮಾಹಿತಿ ನೀಡಿರುವ  ಸಾಗರ ಉಪವಿಭಾಗೀಯ ಆಸ್ಪತ್ರೆಯ ಡಾ.ಪರಪ್ಪ  ನಾಗರಾಜ್ ಹೊರ ಗುತ್ತಿಗೆ ನೌಕರರಾಗಿದ್ದು ಜ್ವರದಿಂದ ಬಳಲುತ್ತಿದ್ದರು. ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಅವರಿಗೆ ಮೊದಲಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಲ್ಲಿ ಚಿಕಿತ್ಸೆಗೆ ಸ್ಪಂದಿಸದ ಕಾರಣ ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. 

A 34-year-old dialysis patient from Sagar taluk, Nagaraj, died of dengue in a private hospital in Shivamogga. He was initially treated at Sagar Sub-Divisional Hospital but was later shifted to Shivamogga due to his worsening condition. Dr. Parappa from Sagar Sub-Divisional Hospital confirmed that Nagaraj