ಪರ್ಯಾಯ ಬೆಳೆ ಪದ್ದತಿ ರಸಾಯನಿಕ ಸಿಂಪರಣೆ ಮೂಲಕ ಸೈನಿಕ ಹುಳುಗಳ ನಿಯಂತ್ರಣ ಸಾಧ್ಯ -  ಡಾ. ಶರಣ ಬಸಪ್ಪ ಎಸ್ ದೇಶಮುಖ್

ಪರ್ಯಾಯ ಬೆಳೆ ಪದ್ದತಿ ರಸಾಯನಿಕ ಸಿಂಪರಣೆ ಮೂಲಕ ಸೈನಿಕ ಹುಳುಗಳ ನಿಯಂತ್ರಣ ಸಾಧ್ಯ -  ಡಾ. ಶರಣ ಬಸಪ್ಪ ಎಸ್

ಪರ್ಯಾಯ ಬೆಳೆ ಪದ್ದತಿ ರಸಾಯನಿಕ ಸಿಂಪರಣೆ ಮೂಲಕ ಸೈನಿಕ ಹುಳುಗಳ ನಿಯಂತ್ರಣ ಸಾಧ್ಯ -  ಡಾ. ಶರಣ ಬಸಪ್ಪ ಎಸ್ ದೇಶಮುಖ್
ಪರ್ಯಾಯ ಬೆಳೆ ಪದ್ದತಿ ರಸಾಯನಿಕ ಸಿಂಪರಣೆ ಮೂಲಕ ಸೈನಿಕ ಹುಳುಗಳ ನಿಯಂತ್ರಣ ಸಾಧ್ಯ -  ಡಾ. ಶರಣ ಬಸಪ್ಪ ಎಸ್ ದೇಶಮುಖ್

ಪರ್ಯಾಯ ಬೆಳೆ ಪದ್ದತಿ ರಸಾಯನಿಕ ಸಿಂಪರಣೆ ಮೂಲಕ ಸೈನಿಕ ಹುಳುಗಳ ನಿಯಂತ್ರಣ ಸಾಧ್ಯ
-  ಡಾ. ಶರಣ ಬಸಪ್ಪ ಎಸ್ ದೇಶಮುಖ್
  ಮಾಗಿ ಉಳುಮೆ, ಬೇಗ ಬಿತ್ತನೆ, ಪರ್ಯಾಯ ಬೆಳೆ ಪದ್ದತಿ ಹಾಗು ರಸಾಯನಿಕ ಸಿಂಪರಣೆ ಮೂಲಕ ಸೈನಿಕ ಹುಳುಗಳನ್ನು ನಿಯಂತ್ರಣ ಮಾಡಬಹುದು ಎಂದು ಕೃಷಿ ವಿಶ್ವವಿದ್ಯಾನಿಲಯದಿಂಧ ಕೀಟಶಾಸ್ತ್ರ ವಿಜ್ಞಾನಿಗಳಾದ ಡಾ||.ಶ್ರೀ ಶರಣಬಸಪ್ಪ.ಎಸ್. ದೇಶಮುಖ್ ಅವರು ತಿಳಿಸಿದರು. ನಗರದ ಕೃಷಿ ಇಲಾಖೆ ಶಿವಮೊಗ್ಗ ಹಾಗೂ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯ ಶಿವಮೊಗ್ಗ ಹಾಗೂ ಇ-ಆಡಳಿತ ಕರ್ನಾಟಕ ಸರ್ಕಾರ ಇವರ ಸಹಯೋಗದಲ್ಲಿ ಗುರುವಾರ ತಾಲ್ಲೂಕಿನ ಸುಮಾರು 8 ಸಾವಿರ  ರೈತರಿಗೆ ದೂರವಾಣಿ ಕರೆ ಮೂಲಕ ಮುಸುಕಿನ ಜೋಳದಲ್ಲಿ ಸೈನಿಕ ಹುಳು ಹಾಗೂ ಮುಳ್ಳು ಸಜ್ಜೆ ಕಳೆ ನಿರ್ವಹಣೆ ಕುರಿತು ಮತ್ತು ಬೆಳೆ ವಿಮೆ ಯೋಜನೆ ಕುರಿತು ಕಾರ್ಯಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು 2018 ರಿಂದ ಈಚೆಗೆ ಮುಸುಕಿನಜೋಳ ಬೆಳೆಯಲ್ಲಿ ಪಾಲ್ ಸೈನಿಕ ಹುಳುವಿನ ಬಾದೆ ಹೆಚ್ಚಾಗಿದೆ.
 ಈ ಹುಳುವು 20-25 ದಿನಗಳ ಜೀವನ ಚಕ್ರ ಹೊಂದಿದ್ದು, ಏಕ ಬೆಳೆಯಲ್ಲೇ ಇದರ ಮೂರು ಹಂತಗಳು (ಮೊಟ್ಟೆ/ಮರಿಹಳು/ಪ್ರೌಡ ಚಿಟ್ಟೆ) ಕಾಣಿಸಿಕೊಂಡು ಎಲೆಗಳನ್ನು, ಸುಳಿಗಳನ್ನು ತಿಂದು ರಂಧ್ರಗಳನ್ನು ಮಾಡಿ ಇಕ್ಕೆಗಳನ್ನು ಎಲೆಯ ಮೇಲೆಯ ಬಿಡುತ್ತದೆ. ಬೆಳೆಯ 45 ದಿನಗಳವರೆಗೆ ಈ ಹುಳು ಕಾಣಿಸಿಕೊಂಡು  ಶೇ.70-80 ರ ವರೆಗೆ ಇಳುವರಿ ನಷ್ಟಕ್ಕೆ ಕಾರಣವಾಗುತ್ತದೆ. ರೈತರು ಪರ್ಯಾಯ ಬೆಳೆ ಪದ್ಧತಿ ರಸಾಯನಿಕ ಸಿಂಪರಣೆ ಮೂಲಕ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು.
   ಬೇಸಾಯ ಶಾಸ್ತ್ರಜ್ಞರಾದ ಹೊನ್ನಪ್ಪ ಅವರು ಮಾತನಾಡಿ ಮುಸುಕಿನ ಜೋಳ ಬೆಳೆಯಲ್ಲಿ ಮುಳ್ಳು ಸಜ್ಜೆ ಕಳೆ ನಿರ್ವಹಣೆ ಬಹಳ ಮುಖ್ಯ ಬಿತ್ತನೆಯಾದ 3 ದಿನಗಳೊಳಗೆ ಅಟ್ರಜಿನ್ 50 WP ಯನ್ನು 1.5 ಕೆ.ಜಿ/ಒಂದು ಎಕರೆಗೆ  ಅಥವಾ ಪೆಂಡಿಮಕಾಲೀನ್ 400 ಎಂ.ಎಲ್/ ಒಂದು ಎಕರೆಗೆ ನೀರಿನಲ್ಲಿ ಮಿಶ್ರಣ ಮಾಡಿ ಸಿಂಪರಣೆ ಮಾಡವುದು ಹಾಗೆಯೇ 25 ದಿನಗಳ ನಂತರ ಅಂತರ ಬೇಸಾಯ ಮಾಡಿ ಕಳೆ ನಿರ್ವಹಣೆ ಮಾಡಬಹುದು ಎಂಬ ಮಾಹಿತಿಯನ್ನು ನೀಡಿದರು.
    ಸುಮಾರು 1 ಗಂಟೆಯವರೆಗೆ ನಡೆದ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ತಾಲ್ಲೂಕಿನ 8 ಸಾವಿರ ಜನ ರೈತರು ತಾಂತ್ರಿಕ ಮಾಹಿತಿಯನ್ನು ಆಲಿಸಿ ಕೊನೆಯಲ್ಲಿ ವಿಜ್ಞಾನಿಗಳಿಗೆ ಪ್ರಶ್ನೆಗಳನ್ನು ಕೇಳಿ ಸಮಗ್ರ ಮಾಹಿತಿ ಪಡೆದು ಕೊಂಡರು. ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಶಿವಮೊಗ್ಗ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ರಮೇಶ್.ಎಸ್.ಟಿ ರವರು ಮುಸುಕಿನ ಜೋಳಕ್ಕೆ ಶಿಫಾರಸ್ಸು ಮಾಡಲಾಗಿರುವ ರಸಗೊಬ್ಬರಗಳ ಕುರಿತು ಹಾಗೇಯೇ ಬೆಳೆ ವಿಮೆ ಕುರಿತು ಮಾಹಿತಿ ನೀಡಿದರು.