ಮಾದಕವಸ್ತು ಮಾರಾಟ! ಶಿವಮೊಗ್ಗ ಪೊಲೀಸರಿಂದ ಯುವತಿ ಸೇರಿ ಇಬ್ಬರ ಬಂಧನ

KARNATAKA NEWS/ ONLINE / Malenadu today/ Jun 24, 2023 SHIVAMOGGA NEWS

ಮಹತ್ವದ ಬೆಳವಣಿಗೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸರು, ಮಾದಕ ವಸ್ತುಗಳ ಮಾರಾಟದ ಆರೋಪ ಸಂಬಂಧ ಓರ್ವ ಯುವತಿ ಸೇರಿದಂತೆ ಇಬ್ಬರನ್ನ ಬಂಧಿಸಿದ್ದಾರೆ. 

ಹಳೆಗುರುಪುರದ ವಾಸನದ ಮನೆಯೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ. ಅಲ್ಲದೆ ಅವರಿಂದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು, ಈ ಸಂಬಂಧ ಪ್ರಕಟಣೆಯಲ್ಲಿ ವಿವರ ನೀಡಿದ್ದಾರೆ. 

ಬಂಧಿತರು

1) ಅಬ್ದುಲ್ ಖಯ್ಯುಂ, 25 ವರ್ಷ, ಕೀರ್ತಿ ನಗರ, ಬಿಜಾಫುರ   

2) ಅರ್ಪಿತಾ, 23 ವರ್ಷ, ಕೊಟ್ಟೂರು ಟೌನ್, ಬಳ್ಳಾರಿ

ಆರೋಪಿತರಿಂದ ಅಂದಾಜು ಮೌಲ್ಯ 20,000/-  ರೂ ಗಳ ಒಟ್ಟು 466 ಗ್ರಾಂ ತೂಕದ  ಒಣ ಗಾಂಜಾ ಮತ್ತು  60 ML ನ TOKER GRO, TOKER MICRO ಮತ್ತು TOKER BLOOM ಹೆಸರಿನ ತಲಾ ಒಂದೊಂದು ಬಾಟಲ್ ಗಳು, TOKER CALMAG  ಹೆಸರಿನ  20 ಎಂ ಎಲ್ ನ ಒಂದು ಬಾಟಲಿ, 6) AQUALENS  ಹೆಸರಿನ  120 ಎಂ ಎಲ್  ಇರುವ  ಒಂದು  ಬಾಟಲಿ, ಎರಡು  ಹುಕ್ಕಾ ಕೊಳವೆಗಳು ಮತ್ತು ರೂ 900/-  ನಗದು ಹಣವನ್ನು  ಅಮಾನತ್ತು ಪಡಿಸಿಕೊಂಡು  NDPS ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 


ದೊಡ್ಡಪೇಟೆ ಪೊಲೀಸರ ಕಾರ್ಯಾಚರಣೆ!ಕಳವು ಪ್ರಕರಣದಲ್ಲಿ ಟೈಗರ್​ ಅರೆಸ್ಟ್!

ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ಫೆಬ್ರವರಿ ನಡೆದಿದ್ದ ಕಳ್ಳತನದ ಪ್ರಕರಣವನ್ನು ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಅಶೊಕ ನಗರದ ವಾಸಿ 57 ವರ್ಷದ ಮಹಿಳೆಯೊಬ್ಬರ ವಾಸದ ಮನೆಯೊಂದರ ಬಾಗಿಲನ್ನು  ಮುರಿದು ಯಾರೋ ಕಳ್ಳರು ಗಾಡ್ರೇಜ್ ಬೀರುವಿನಲ್ಲಿದ್ದ  ನಗದು ಹಣ, ಬಂಗಾರದ ಆಭರಣಗಳು ಮತ್ತು ಮೊಬೈಲ್ ಫೋನ್ ಅನ್ನು ಕಳ್ಳತನ ಮಾಡಿದ್ದರು.  ಈ ಸಂಬಂಧ  ಐಪಿಸಿ 454, 457, 380 ಅಡಿಯಲ್ಲಿ ಕೇಸ್ ದಾಖಲಾಗಿತ್ತು. ಇದೀಗ ತನಿಖಾ ತಂಡ 23-06-2023 ರಂದು ಆರೋಪಿ ತೌಸೀಫ್ @ ತೌಸೀಫ್ ವುಲ್ಲಾ @ ಟೈಗರ್ @ ಗೀರ್ಪಡೆ ಎಂಬ ಹೆಸರಿನ   ಸೂಳೇಬೈಲು ನಿವಾಸಿಯನ್ನು ಬಂಧಿಸಿದ್ದಾರೆ. ಅಲ್ಲದೆ ಈತನಿಂದ 1,48,000/- ರೂ ಗಳ ಒಟ್ಟು 33 ಗ್ರಾಂ 850 ಮಿಲಿ ತೂಕದ ಬಂಗಾರದ ಆಭರಣಗಳು ಮತ್ತು ಒಂದು ಮೊಬೈಲ್ ಫೋನ್ ಅನ್ನು ಜಪ್ತು ಮಾಡಲಾಗಿದೆ.  

Leave a Comment

ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು