ಶಿವಮೊಗ್ಗದ ಲಷ್ಕರ್‌ ಮೊಹಲ್ಲಾದಲ್ಲಿ ಜೋಡಿ ಕೊಲೆ | ಫಿಶ್‌ ಮಾರ್ಕೆಟ್‌ ಬಳಿ ಮಾರಕಾಸ್ತ್ರ, ಕಲ್ಲು ಎತ್ತಿಹಾಕಿ ಹತ್ಯೆ

Two people were k...n Lashkar Mohalla of Shimoga Killed by handgun and stone pelting near fish market

ಶಿವಮೊಗ್ಗದ ಲಷ್ಕರ್‌ ಮೊಹಲ್ಲಾದಲ್ಲಿ ಜೋಡಿ ಕೊಲೆ | ಫಿಶ್‌ ಮಾರ್ಕೆಟ್‌ ಬಳಿ ಮಾರಕಾಸ್ತ್ರ, ಕಲ್ಲು ಎತ್ತಿಹಾಕಿ ಹತ್ಯೆ
fish market,Lashkar Mohalla of Shimoga

SHIVAMOGGA | MALENADUTODAY NEWS | May 8, 2024  

 

ಲೋಕಸಭಾ ಚುನಾವಣೆಯ ಬೆನ್ನಲ್ಲೆ ಹಳೆಯ ಶಿವಮೊಗ್ಗದಲ್ಲಿ ಮಾರಕಾಸ್ತ್ರಗಳು ಝಳಪಿಸಿವೆ, ಇವತ್ತು ಸಂಜೆ ಹೊತ್ತಿಗೆ ಹಳೆಯ ಶಿವಮೊಗ್ಗದ ಲಷ್ಕರ್‌ ಮೊಹಲ್ಲಾದ ಬಳಿಯಲ್ಲಿರುವ ಮೀನು ಮಾರುಕಟ್ಟೆಯ ಬಳಿಯಲ್ಲಿ ಇಬ್ಬರನ್ನ ಕೊಲೆ ಮಾಡಲಾಗಿದೆ. ಗುಂಪೊಂದು ಇಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದು, ಸ್ಥಳಕ್ಕೆ ಶಿವಮೊಗ್ಗ ಪೊಲೀಸರು ದೌಡಾಯಿಸಿದ್ದಾರೆ. 

 

ಇಂದು ಸಂಜೆ ಸುಮಾರು ಆರು ಗಂಟೆ ಸುಮಾರಿಗೆ ಗುಂಪೊಂದು ಮಾರಕಾಸ್ತ್ರ ಹಿಡಿದು ಇಬ್ಬರ ಮೇಲೆ ದಾಳಿ ನಡೆಸಿದ್ದಲ್ಲದೇ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಡಿವೈಎಸ್‌ಪಿ ಆಗಮಿಸಿದ್ದು, ಪರಿಶೀಲನೆ ನಡೆಸ್ತಿದ್ದಾರೆ. ಮೃತರು ಯಾರು ಎಂಬುದು ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ಮಾಹಿತಿ ಕಲೆಹಾಕುತ್ತಿದ್ಧಾರೆ.