11 ನೇ ವರ್ಷವೂ 100% ರಿಸಲ್ಟ್‌ ಪಡೆದ ತೀರ್ಥಹಳ್ಳಿಯ ಐಸಿಎಸ್‌ಇ  ಸ್ಕೂಲ್‌

Sahyadri ICSE School, Tirthahalli, got 100% result in 11th year too.

11 ನೇ ವರ್ಷವೂ 100% ರಿಸಲ್ಟ್‌ ಪಡೆದ ತೀರ್ಥಹಳ್ಳಿಯ ಐಸಿಎಸ್‌ಇ  ಸ್ಕೂಲ್‌
Sahyadri ICSE School, Tirthahalli,

SHIVAMOGGA | MALENADUTODAY NEWS | May 7, 2024  

ಐಸಿಎಸ್‌ಇ  ( Indian Certificate of Secondary Education)ಸಿಲಬಸ್‌ನ 10 ನೇ ತರಗತಿಯ ಬೋರ್ಡ್‌ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಬೆಟ್ಟಮಕ್ಕಿಯಲ್ಲಿರುವ ಸಹ್ಯಾದ್ರಿ ಐಸಿಎಸ್‌ಇ ಶಾಲೆಯ 100 ಪರ್ಸೆಂಟ್‌ ರಿಸಲ್ಟ್‌ ಸಾಧನೆ ಮಾಡಿದೆ. 

ಕಳೆದ 10 ವರ್ಷಗಳಿಂದ ಶೇಕಡಾ ನೂರರಷ್ಟು ಫಲಿತಾಂಶ ಪಡೆಯುತ್ತಿರುವ ಶಾಲೆಯು ಇದೀಗ 11 ನೇ ವರ್ಷವೂ 100 ರಷ್ಟು ರಿಸಲ್ಟ್‌ ಪಡೆದಿದೆ. ಶಾಲೆಯಲ್ಲಿ ಕಲಿಯುತ್ತಿರುವ  10 ತರಗತಿಯ ಐವತ್ತು ವಿದ್ಯಾರ್ಥಿಗಳ ಪೈಕಿ 22 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ , 25 ಫಸ್ಟ್‌ಕ್ಲಾಸ್‌ , ಮೂವರು ಸೆಕೆಂಡ್‌ ಕ್ಲಾಸ್‌ನಲ್ಲಿ ಪಾಸಾಗಿದ್ದಾರೆ. ಇನ್ನೂ ವಿದ್ಯಾರ್ಥಿನಿ ಸಾನ್ವಿ ಸುಧೀರ್‌ ಶೇಕಡಾ 96 ರಷ್ಟು ಅಂಕ ಪಡೆದು ರ್ಯಾಂಕ್‌ ಬಂದಿದ್ದಾರೆ, ಇನ್ನು ಓಂ ಶ್ರೀರಾಜ್‌ ಜಿಟಿ 95.80 ರಷ್ಟು ಅಂಕ ಪಡೆದಿದ್ದಾರೆ.