BREAKING NEWS : ಗೃಹಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರ ಹಲ್ಲೆ! ಚುಚ್ಚುತ್ತೇವೆ ಎಂದು ವಾರ್ನಿಂಗ್​ ! ಸುರಬಿ ಹೋಟೆಲ್​ನಲ್ಲಿ ನಡೆದಿದ್ದೇನು?

BREAKING NEWS: Bjp workers attack Congress worker in Thirthahalli, home minister's constituency

BREAKING NEWS :  ಗೃಹಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರ ಹಲ್ಲೆ!  ಚುಚ್ಚುತ್ತೇವೆ ಎಂದು ವಾರ್ನಿಂಗ್​ ! ಸುರಬಿ ಹೋಟೆಲ್​ನಲ್ಲಿ ನಡೆದಿದ್ದೇನು?
BREAKING NEWS : ಗೃಹಸಚಿವರ ಕ್ಷೇತ್ರ ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರ ಹಲ್ಲೆ! ಚುಚ್ಚುತ್ತೇವೆ ಎಂದು ವಾರ್ನಿಂಗ್​ ! ಸುರಬಿ ಹೋಟೆಲ್​ನಲ್ಲಿ ನಡೆದಿದ್ದೇನು?

BREAKING NEWS: : ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ (Thirthahalli) ಕಾನೂನು ಬಿಜೆಪಿ ಪರವಾಗಿ ನಿಂತಿದೆ ಅಂತಾ ಕಾಂಗ್ರೆಸ್ ಆರೋಪಿಸುತ್ತಲೇ ಬಂದಿದೆ. ಇದರ ನಡುವೆ ತೀರ್ಥಹಳ್ಳಿಯ ಸುರಬಿ ಹೋಟೆಲ್​ನಲ್ಲಿ ನಿನ್ನೆ ರಾತ್ರಿ ಗಲಾಟೆಯೊಂದು ನಡೆದಿದೆ. ಈ ಗಲಾಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತ ಹಾಗೂ ಆಟೋ ಚಾಲಕ ಹರೀಶ್​ ಮೇಲೆ ರಾಡ್​ನಿಂದ ಬಿಜೆಪಿ ಕಾರ್ಯಕರ್ತರು ಎನ್ನಲಾದವರು ಹಲ್ಲೆ ನಡೆಸಿದ್ದಾರೆ  ಸದ್ಯ ಹರೀಶ್​ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಅಡ್ಮಿಟ್ ಆಗಿದ್ಧಾರೆ. 

*Bhadravathi Old Town police station : ಮನೆ ಮುಂದೆ ನಿಲ್ಲಿಸಿದ್ದ ಬುಲೆಟ್ ಬೆಳಗ್ಗೆ ಮಾಯ! ಮಾಲೀಕನಿಗೆ ಶಾಕ್*​

ಸುರಬಿ ಹೋಟೆಲ್​ನಲ್ಲಿ ಊಟ ಮುಗಿಸಿ ಬರುವಾಗ ಅಲ್ಲಿಯೇ ಕುಡಿಯುತ್ತಿದ್ದ ವಿಶು, ಚೇತು, ಕಾರ್ತಿಕ್ ಸೇರಿದಂತೆ ಆರಕ್ಕೂ ಹೆಚ್ಚು ಜನರು ಹರೀಶ್​ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನೂ ಘಟನೆಗೆ ಕಾರಣವಾಗಿದ್ದು,  ಲೋಟಗಳನ್ನ ಏಕೆ ಎಸೆಯುತ್ತೀರಿ ಅಂತಾ ಪ್ರಶ್ನಿಸಿದ್ದು ಎಂದು ಹೇಳಲಾಗುತ್ತಿದೆ.  ಹರೀಶ್​ಗೆ ಹಿಂದಿನಿಂದ ಬಂದು ರಾಡ್​ನಿಂದ ಹೊಡೆದು ಹಲ್ಲೆ ಮಾಡಿದ ಗುಂಪು ಆನಂತರ ಬೇಕಾಬಿಟ್ಟಿ ಥಳಿಸಿದೆ. ಬಳಿಕ ಅಲ್ಲಿದ್ದವರು ಜಗಳ ಬಿಡಿಸಿ, ಆಸ್ಪತ್ರೆಗೆ ಹರೀಶ್​ರನ್ನು ದಾಖಲಿಸಿದ್ದಾರೆ ಎಂದು ಹರೀಶ್​ನ ಆಪ್ತರು ಹಾಗೂ ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ.

ಇನ್ನೂ ಹರೀಶ್​ನನ್ನು ಆಸ್ಪತ್ರೆಗೆ ದಾಖಲಿಸಿದ ಬೆನ್ನಲ್ಲೆ ಕಾಂಗ್ರೆಸ್​ ಕಾರ್ಯಕರ್ತರು,  ಹಲ್ಲೆ ನಡೆಸಿದ್ದರ ಬಗ್ಗೆ ಬಿಜೆಪಿ ಕಾರ್ಯಕರ್ತರನ್ನು ವಿಚಾರಿಸಿದ್ದಾರೆ. ಆದರೆ ಈ ವೇಳೆ ನಿಮಗೂ ಚುಚ್ಚಿ ತೀರ್ಥಹಳ್ಳಿಯಲ್ಲಿ ಆರಾಮಾಗಿ ಓಡಾಡುತ್ತೇವೆ ನೋಡಿ ಎಂದು ಸವಾಲು ಹಾಕಿದ್ದಾರೆ ಅಂತಾ ದೂರಿದ್ಧಾರೆ.

ಗೃಹಸಚಿವರ ಊರಲ್ಲಿ (home minister's constituency  ) ಕಾನೂನು ಭಂಗ!?

ತೀರ್ಥಹಳ್ಳಿಯಲ್ಲಿ ಕಾನೂನು ಸುವ್ಯವಸ್ಥೆಯ ಬಗ್ಗೆ ಈಗಾಗಲೇ ಸಾಕಷ್ಟು ಪ್ರಶ್ನೆಗಳು ಎದ್ದಿರುವ ಬೆನ್ನಲ್ಲೆ ನಿನ್ನೆ ರಾತ್ರಿ ನಡೆದ ಘಟನೆ ಇನ್ನಷ್ಟು ಸಂಶಯಕ್ಕೆ ಕಾರಣವಾಗಿದೆ. ಗೃಹಸಚಿವರ ಬೆಂಬಲ ಇದೆ ಎಂದೇ ಈ  ರೀತಿ ಹಲ್ಲೆ ನಡೆಸ್ತಿದ್ದಾರೆ ಎಂಬ ಆರೋಪಗಳು ಕಾಂಗ್ರೆಸ್​ ಕಾರ್ಯಕರ್ತರದ್ಧಾಗಿದೆ. ಆದಾಗ್ಯು ಗೃಹಸಚಿವರು ಇಂತಹ ಘಟನೆಗಳಿಂದ ಅಂತರ ಕಾಯ್ದುಕೊಂಡು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಬೇಕಿದೆ. 

ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Facebook ನಲ್ಲಿ ನಮ್ಮ ಪೇಜ್​ ನೋಡಿ : Malenadutoday.com

Twitter ನಲ್ಲಿ ನಾವಿದ್ದೇವೆಫಾಲೋ ಮಾಡಿ : Malenadutoday.com

Instagram ನಲ್ಲಿ ಕ್ಲಿಕ್​ ಮಾಡಿ : Malenadutoday.com

Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com