ತೀರ್ಥಹಳ್ಳಿ ರೋಡ್​ ಅಟ್ಯಾಕ್ ಕೇಸ್! ಐವರು ಆರೋಪಿಗಳು ಅರೆಸ್ಟ್!

Malenadu Today

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS 

ತೀರ್ಥಹಳ್ಳಿ ಆಗುಂಬೆ ಸರ್ಕಲ್​ನಲ್ಲಿ ಹೊಡೆದಾಟ ನಡೆಸಿ ಮಾರಕಾಸ್ತ್ರದಿಂದ ಅಟ್ಟಾಡಿಸಿದ ಘಟನೆ ಸಂಬಂಧ ತೀರ್ಥಹಳ್ಳಿ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಘಟನೆ ಸಂಬಂಧ ಕೇಸ್ ದಾಖಲಿಸಿದ್ದ ಪೊಲೀಸರು ಐವರು ಆರೋಪಿಗಳನ್ನ ಬಂಧಿಸಿದ್ಧಾರೆ. ನಡೆದ ಘಟನೆ ಸಂಬಂಧ  ಮಲೆನಾಡು ಟುಡೆಯ ವರದಿ ಇಲ್ಲಿದೆ ಕ್ಲಿಕ್​ ಮಾಡಿ  ತೀರ್ಥಹಳ್ಳಿ ಪಟ್ಟಣಕ್ಕೆ ಏನಾಗಿದೆ!? ನಿನ್ನೆ ಆಗುಂಬೆ ಸರ್ಕಲ್​ನಲ್ಲಿ ಆಗಿದ್ದೇನು? ತಾಗಿದ್ಯಾರು? ಪೊಲೀಸರ ಖಾಯಂ ಅತಿಥಿ ಕಿರಿಕ್​ನ ಕಂಪ್ಲೀಟ್ ರಿಪೋರ್ಟ್!?

ದೀವಿತ್, ಅಪ್ರೋಜ್, ಸಾದಿಕ್ ಮತ್ತು ರಾಘವೇಂದ್ರ ಎಂಬವರ ಜೊತೆಗೆ ಕಿರಿಕ್​ ತೆಗೆದಿದ್ದ ಚೋರ್ ಸಮೀರ್ ಎಂಬಾತ ಮತ್ತು ಆತನ ಗ್ಯಾಂಗ್ ರಸ್ತೆಯಲ್ಲಿಯೇ ಹೊಡೆದಾಡಿಕೊಂಡಿತ್ತು. ಆನಂತರ ಚೋರ್ ಸಮೀರ್​ ಮಚ್ಚು ಹಿಡಿದು ಅಲ್ಲಿದ್ದವರನ್ನ ಅಟ್ಟಾಡಿಸಿದ್ದ. ಈ ಘಟನೆ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೇ ವಿಚಾರವಾಗಿ ತೀರ್ಥಹಳ್ಳಿ ಪೊಲೀಸರು, IPC 1860 (U/s-143,144,147,148,341,323,324,307,504,149) ಅಡಿಯಲ್ಲಿ ಕೇಸ್ ದಾಖಲಿಸಿದ್ದರು. ಸದ್ಯ ಘಟನೆ ಸಂಬಂಸ ಎ2 ಸಫಾನ್ ಸೇರಿ ಒಟ್ಟು ಐವರನ್ನ ಬಂಧಿಸಿದೆ. ಆದರೆ ಚೋರ್ ಸಮೀರ್ ಇನ್ನೂ ಮಾತ್ರ ಪೊಲೀಸರಿಗೆ ಪತ್ತೆಯಾಗಿಲ್ಲ! 


ಶಿವಮೊಗ್ಗ ನಾಗರಿಕರ ಗಮನಕ್ಕೆ ! ಶಾಸಕರ ಕಚೇರಿಯಿಂದ ಬಂತು ವಾಟ್ಸ್ಯಾಪ್​ HELPLINE ! ಏನಿದು ? ಹೇಗೆ ಕೆಲಸ ಮಾಡುತ್ತೆ?

ಶಿವಮೊಗ್ಗ ನಗರ ಶಾಸಕ ಎಸ್​ಎನ್​ ಚನ್ನಬಸಪ್ಪರವರ ಕಚೇರಿ ಕೂಡ ಸ್ಮಾರ್ಟ್ ಆಗಿದೆ. ಇದಕ್ಕೆ ಸಾಕ್ಷಿಯಾಗಿ ನಗರ ಶಾಸಕರ ಕಚೇರಿಯಿಂದ ಸಾರ್ವಜನಿಕರ ಅಹವಾಲು ಪಡೆಯಲು ವಾಟ್ಸ್ಯಾಪ್​  ಹೆಲ್ಪ್​ ಲೈನ್ ಆರಂಭಿಸಲಾಗಿದೆ. ಈ ಬಗ್ಗೆ ಶಾಸಕರ ಕಚೇರಿಯಿಂದಲೇ ಮಾಹಿತಿ ನೀಡಲಾಗಿದೆ. 

ಶಾಸಕರ ಕಚೇರಿಯ ಮಾಹಿತಿಯಲ್ಲಿ ಏನಿದೆ?

ಶಿವಮೊಗ್ಗದ ನಾಗರಿಕರು ತಮ್ಮ ಸಮಸ್ಯೆ ಹಾಗೂ ಸಲಹೆಗಳನ್ನು ಹಂಚಿಕೊಳ್ಳಲು ವ್ಯವಸ್ಥಿತ ವೇದಿಕೆಯೊಂದನ್ನು ಪ್ರಸ್ತುತಪಡಿಸುತ್ತಿದ್ದೇವೆ. ವಿಜ್ಞಾನವು ಅತ್ಯಂತ  ವೇಗವಾಗಿ ಮುಂದುವರೆಯುತ್ತಿರುವ ಈ ಕಾಲದಲ್ಲಿ, ತಂತ್ರಜ್ಞಾನದ ಸಮರ್ಥ ಬಳಕೆಯೊಂದಿಗೆ ಎಂತಹ ಕ್ಲಿಷ್ಟ ಸಮಸ್ಯೆಗಳನ್ನಾದರೂ ಪರಿಹರಿಸಬಹುದೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ.

ಸನ್ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಮೇ 11 ರಂದು ನಡೆದ ರಾಷ್ಟ್ರೀಯ ತಂತ್ರಜ್ಞಾನ ದಿನಾಚರಣೆಯ ಭಾಷಣದಲ್ಲಿ  ಹೇಳಿರುವಂತೆ “ತಂತ್ರಜ್ಞಾನವು ದೇಶದ ಅಭಿವೃದ್ಧಿ ಹೆಚ್ಚಿಸಲು ಇರುವ ಒಂದು ಪ್ರಮುಖ ಉಪಕರಣ”.  ಇದೇ ಕಲ್ಪನೆಯೊಂದಿಗೆ ಸಿದ್ಧವಾಗಿರುವುದು ‘ಸ್ಮಾರ್ಟ್ ಶಿವಮೊಗ್ಗ’. ಇದರ ಭಾಗವಾಗಿ ವಾಟ್ಸಾಪ್ ಹೆಲ್ಪ್ ಲೈನ್ ನಂಬರ್ ಲೋಕಾರ್ಪಣೆಗೊಂಡಿದೆ. ಇದು ಜನರ ಹಾಗೂ ಜನಪ್ರತಿನಿಧಿಯ ನಡುವೆ ಸಂಪರ್ಕ ಸಾಧನೆಗೆ ಅನುವಾಗುವ ಒಂದು ಪ್ರಮುಖ ಪರಿಕರವಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಲು ‘ಕರ್ತವ್ಯಪಡೆ’ಯನ್ನು  ಸಜ್ಜುಗೊಳಿಸಲಾಗಿದೆ ಎಂದು ತಿಳಿಸಲಾಗಿದೆ. 

ಈ ವಾಟ್ಸ್ಯಾಪ್​ ಹೆಲ್ಪ್​ಲೈನ್​ನಲ್ಲಿ ಸಾರ್ವಜನಿಕರು ತಮ್ಮ ಅಹವಾಲುಗಳನ್ನ ಹೇಳಿಕೊಳ್ಳಬಹುದಾಗಿದೆ ಗೂಗಲ್ ಲೆನ್ಸ್​ ಅಥವಾ ಸ್ಕ್ಯಾನ್​ ಕೋಡ್ ಆ್ಯಪ್​ ಅಥವಾ ವಾಟ್ಸ್ಯಾಪ್​ ಸ್ಕ್ಯಾನರ್ ಮೂಲಕವೇ ಸ್ಕ್ಯಾನ್​ ಮಾಡಿದರೆ, ಶಾಸಕರ ವಾಟ್ಸ್ಯಾಪ್​ಗೆ ಸಂಪರ್ಕಗೊಳ್ಳುತ್ತದೆ. ಆನಂತರ ಅಲ್ಲಿರುವ ನಂಬರ್​ಗೆ ಮೆಸೇಜ್ ಮಾಡಿದರೆ, ತಕ್ಷಣವೇ, ಶಿವಮೊಗ್ಗ  ನಗರ ಶಾಸಕರ ವಾಟ್ಸಾಪ್ ಸಹಾಯವಾಣಿಗೆ ಸಂಪರ್ಕಿಸಿದ್ದಕ್ಕೆ ಧನ್ಯವಾದಗಳು, ಎಂದು ತಿಳಿಸಿ ಕೆಲವೊಂದು ವಿವರಗಳನ್ನು ಭರ್ತಿ ಮಾಡಿ ಎಂಬ ಸಂದೇಶ ಬರುತ್ತದೆ. . ಅದರಂತೆ ವಿವರ ನೀಡಿದರೆ, ಶಾಸಕರ ಕಚೇರಿಗೆ ಸಲ್ಲಿಸಬೇಕಾದ ಅಹವಾಲು ಸಲ್ಲಿಕೆಯಾಗುತ್ತದೆ. 

ಶಾಸಕರ ವಾಟ್ಸ್ಯಾಪ್​ ಹೆಲ್ಪ್​ಲೈನ್​ನಲ್ಲಿ ಭರ್ತಿ ಮಾಡಬೇಕಾದ ವಿವರ 

ಹೆಸರು/Name:

ಜನ್ಮ ದಿನಾಂಕ/DOB :

ಫೋನ್ ನಂಬರ್/Phone No. :

ವಾರ್ಡ್ ನಂಬರ್/ Ward No. :

ವಿಳಾಸ/Address:

ಸಮಸ್ಯೆ /Problem:

ಸಲಹೆ/Suggestions:

ಶಿವಮೊಗ್ಗ ಸಿಟಿಯಲ್ಲಿ ವೀಲಿಂಗ್! ಕಾಲೇಜುಗಳ ಬಳಿಯಲ್ಲಿ ಬೈಕ್​ ಸ್ಟಂಟ್ ಮಾಡ್ತಿದ್ದ ಯುವಕರಿಗೆ ಪೊಲೀಸರು ನೀಡಿದ್ರು ಶಾಕ್

ಸಾಗರ ತಾಲ್ಲೂಕಿನ ಐಗಿನಬೈಲ್​ನಲ್ಲಿ ಅಪಘಾತಕ್ಕೀಡಾಡ ಖಾಸಗಿ ಬಸ್​! ಅನುಮಾನಕ್ಕೂ ಕಾರಣವಾಯ್ತು ಮಾಂಸದ ಮೂಟೆ!

ಅಧಿಕಾರಿಗಳ ಆಟ, ಜನಪ್ರತಿನಿಧಿಗಳಿಗೆ ಜೀವ ಸಂಕಟ! ಹೊಸನಗರದಲ್ಲಿ ಇದೆಂಥಾ ಅವಸ್ಥೆ ಮಾರಾಯ್ರೆ

!ಶಿವಮೊಗ್ಗಕ್ಕೂ ಬಂದ ಕೃತಕ ಸುಂದರಿ! ವಿದ್ಯಾರ್ಥಿಗಳ ಪ್ರಯತ್ನದಲ್ಲಿ ಸೃಷ್ಟಿಯಾದ ಗೀತಾ? ಯಾರಿವಳು ಸಹ್ಯಾದ್ರಿ ನ್ಯೂಸ್ ಆ್ಯಂಕರ್​ ಗೊತ್ತಾ?

 

 

Share This Article