ಸಾಗರ ತಾಲ್ಲೂಕಿನ ಐಗಿನಬೈಲ್​ನಲ್ಲಿ ಅಪಘಾತಕ್ಕೀಡಾಡ ಖಾಸಗಿ ಬಸ್​! ಅನುಮಾನಕ್ಕೂ ಕಾರಣವಾಯ್ತು ಮಾಂಸದ ಮೂಟೆ!

ಸಾಗರ ತಾಲ್ಲೂಕಿನ ಬೆಂಗಳೂರು-ಹೊನ್ನಾವರ ಮುಖ್ಯ ರಸ್ತೆಯಲ್ಲಿ ಖಾಸಗಿ ಬಸ್​ ಎರಡು ಕಾರುಗಳಿಗೆ ಡಿಕ್ಕಿ ಹೊಡೆದಿದೆ. Private bus meets with an accident at Aiginabail in Sagar taluk A sack of meat has led to suspicion!

ಸಾಗರ ತಾಲ್ಲೂಕಿನ  ಐಗಿನಬೈಲ್​ನಲ್ಲಿ  ಅಪಘಾತಕ್ಕೀಡಾಡ ಖಾಸಗಿ ಬಸ್​! ಅನುಮಾನಕ್ಕೂ ಕಾರಣವಾಯ್ತು ಮಾಂಸದ ಮೂಟೆ!

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS

ಸಾಗರ/ ತಾಲ್ಲೂಕಿನ ಐಗಿನ ಬೈಲ್​ ಬಳಿಯಲ್ಲಿ ಖಾಸಗಿ ಬಸ್​ವೊಂದು ಅಪಘಾತಕ್ಕೀಡಾಗಿದ್ದು, ಎರಡು ಕಾರುಗಳಿಗೆ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. 

ಏನಿದು ಘಟನೆ?

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಹಾದುಹೋಗುವ ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ ಸಾಗರದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಜಿಆರ್​ಬಿ ಬಸ್​ ಚಾಲಕನ ನಿಯಂತ್ರಣ ತಪ್ಪಿ ಶಿವಮೊಗ್ಗದಿಂದ ಬರುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಈ ಪೈಕಿ ಒಂದು ಕಾರಿನಲ್ಲಿ  ನ್ಯಾಯಾದೀಶರೊಬ್ಬರು  ಶಿವಮೊಗ್ಗದಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನ (siganduru chowdeshwari temple)  ಕ್ಕೆ ಹೋಗುತ್ತಿದ್ದರು. ಇನ್ನೊಂದು ಕಾರು ಶಿವಮೊಗ್ಗದಿಂದ ಸಾಗರಕ್ಕೆ ಬರುತ್ತಿತ್ತು ಎಂದು ಹೇಳಲಾಗಿದ್ದು, ಕಾರಿನಲ್ಲಿ ಮಾಂಸದ ಮೂಟೆಯು ಸಿಕ್ಕಿದ್ದು, ಅಲ್ಲಿದ್ದವರು, ದನದ ಮಾಂಸವನ್ನು ಕಾರಿನಲ್ಲಿ ಸಾಗಿಸುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. 

ಐಗಿನಬೈಲಿನ ಬಳಿಯ ತಿರುವಿನಲ್ಲಿ ಘಟನೆ ನಡೆದಿದ್ದು ಚಾಲಕನ ನಿಯಂತ್ರಣ ತಪ್ಪಿದ ಬಸ್ ಎರಡು ಕಾರಿಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ವಿಷಯ ಗೊತ್ತಾಗುತ್ತಲೇ ಸ್ಥಳಕ್ಕೆ ಬಂದ ಆನಂದಪುರಂ ಪೊಲೀಸ್ ಸ್ಟೇಷನ್​ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.  


ಅಧಿಕಾರಿಗಳ ಆಟ, ಜನಪ್ರತಿನಿಧಿಗಳಿಗೆ ಜೀವ ಸಂಕಟ! ಹೊಸನಗರದಲ್ಲಿ ಇದೆಂಥಾ ಅವಸ್ಥೆ ಮಾರಾಯ್ರೆ!

ಹೊಸನಗರ/  ಮಳೆ ಬಂದರೂ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಭರಾಜಿಗಾಗಿ ಬಿಲ್​ ಮಂಜೂರು ಮಾಡದ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಸಂಬಂಧ   ಟ್ಯಾಂಕರ್​ಗಳಲ್ಲಿ ಹಳ್ಳಿಹಳ್ಳಿಗೆ ನೀರಿ ಸೌಕರ್ಯಗಳನ್ನ ಒದಗಿಸಿದ್ದಕ್ಕೆ ನೀಡಬೇಕಿದ್ದ ಹಣ ಕೊಟ್ಟಿಲ್ಲ ಎಂದು ಈ ಹಿಂದೆ,  ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಾಕರ್ ಶೆಟ್ಟಿ   ಹೊಸನಗರ ತಾಲ್ಲೂಕು ಪಂಚಾಯಿತಿ ಎದುರು ಸಗಣಿ ನೀರನ್ನ ಮೈಮೇಲೆ ಎರಚಿಕೊಂಡು ಪ್ರತಿಭಟನೆ ನಡೆಸಿದ್ದರು. 

ಇದೀಗ ಅದೇ ವಿಚಾರವಾಗಿ ನಗರದಿಂದ ಕಾಲ್ನಡಿಗೆಯಲ್ಲಿ ಹೊಸನಗರಕ್ಕೆ ಪಾದಯಾತ್ರೆ ನಡೆಸಿದ್ದಾರೆ. ಆರ್​ಡಿಪಿಆರ್, ಜಿಲ್ಲಾಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ದಿಕ್ಕಾರ ಎಂಬ ಬೋರ್ಡ್​ ಹಾಕಿಕೊಂಡು ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು ಹೊಸ ಸರ್ಕಾರ ಬಂದರೂ ಕೂಡ ಬಿಲ್ ಮಂಜೂರಾತಿ ಆಗದಿದ್ದಕ್ಕೆ ಆಕ್ರೋಶ ಹೊರಹಾಕಿದ್ಧಾರೆ. 

ಬೇಸಿಗೆಯಲ್ಲಿ ಅಧಿಕಾರಿಗಳ ಮಾತು ಕಟ್ಟಿಕೊಂಡು ಜನಪ್ರತಿನಿಧಿಗಳು ದುಡ್ಡುಹಾಕಿ  ಮನೆ ಮನೆಗೆ ನೀರನ್ನ ಟ್ಯಾಂಕರ್ ಮೂಲಕ ಒದಗಿಸಿದ್ದರು. ಆದರೆ ಅದರ ಬಿಲ್ ಮಂಜೂರು ಮಾಡದ ಅಧಿಕಾರಿಗಳು ಪ್ರತಿಸಲವೂ ಸಬೂಬು ಹೇಳುತ್ತಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪ, ಅಲ್ಲದೆ ನಿನ್ನೆ ನಡೆದ ಪ್ರತಿಭಟನೆ ವೇಳೆಯಲ್ಲಿಯು ಅಧಿಕಾರಿಗಳು ಧರಣಿ ನಿರತರನ್ನ ಸಾಗು ಹಾಕುವ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಜನಪ್ರತಿನಿಧಿಗಳು, ಜನರು ತಮ್ಮನ್ನು ಆಯ್ಕೆ ಮಾಡಿದ್ದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡಲಿಕ್ಕಲ್ಲ. ಜನರ ಕೆಲಸ ಮಾಡಿದ್ದರ ಹಣವೇ ಪಾವತಿಯಾಗದಿದ್ದರೇ, ಹೇಗೆ ಕೆಲಸ ಮಾಡಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ. 

 


ಶಿವಮೊಗ್ಗಕ್ಕೂ ಬಂದ ಕೃತಕ ಸುಂದರಿ! ವಿದ್ಯಾರ್ಥಿಗಳ ಪ್ರಯತ್ನದಲ್ಲಿ ಸೃಷ್ಟಿಯಾದ ಗೀತಾ? ಯಾರಿವಳು ಸಹ್ಯಾದ್ರಿ ನ್ಯೂಸ್ ಆ್ಯಂಕರ್​ ಗೊತ್ತಾ?

ಕಳೆದೊಂದು ವಾರದಿಂದ ಆರ್ಟಿಫಿಶಲ್ ಇಂಟೆಲೆನ್ಸಿಯ ನ್ಯೂಸ್ ಆ್ಯಂಕರ್​ಗಳ ಸುದ್ದಿ ಜೋರಾಗಿ ಸದ್ದು ಮಾಡುತ್ತಿದೆ. ಏಐ ಸಾಫ್ಟವೇರ್​ಗಳು ಇಂತಹದ್ದೊಂದು ಕೃತಕ ನ್ಯೂಸ್ ಆ್ಯಂಕರ್​ಗಳನ್ನು ಸೃಷ್ಟಿ ಮಾಡುತ್ತಿದ್ದು, ಸದ್ಯ ಇಂಗ್ಲೀಷ್​ ಭಾಷೆಯಲ್ಲಿ ತಂತ್ರಜ್ಞಾನದ ಮಾಯಾಂಗನೆಯರ ಪ್ರತಿಭೆ ಅತ್ಯತ್ತಮವಾಗಿ ಹೊರಕ್ಕೆ ಬರುತ್ತಿದೆ. ಆದರೆ ಭಾರತದ ಸ್ಥಳೀಯ ಭಾಷೆಗಳು ಈ ಕೃತಕ ಸುಂದರಿಯರಿಗೆ ಕಷ್ಟವಾಗುತ್ತಿದೆ. 

ಆದಾಗ್ಯು ಒಡಿಯಾ ಚಾನಲ್​ ವೊಂದು ಮೊದಲು ಈ ಸಾಫ್ಟ್​ವೇರ್ ಸೃಷ್ಟಿತ ಆ್ಯಂಕರ್​ನ್ನ ಮೊದಲು ಸ್ಕ್ರೀನ್ ಮೇಲೆ ತಂದಿದೆ. ಆನಂತರ ಕನ್ನಡ ನ್ಯೂಸ್ ಫಸ್ಟ್ ಮತ್ತು ಪವರ್ ಟಿವಿ ಏಇ ನಿರೂಪಕಿಯನ್ನು ತಮ್ಮ ಟಿವಿ ಪರದೇ ಮೇಲೆ ಬಿತ್ತರಿಸಿದ್ದವು. ಇದೀಗ  ವಿಷಯ ಏನೆಂದರೆ ಶಿವಮೊಗ್ಗದಲ್ಲಿಯು ಈ ಡೂಪ್ಲಿಕೇಟ್​ ನಿರೂಪಕಿಯ ಆಗಮನವಾಗಿದೆ. 

ಹೌದು, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ವಿಭಾಗದಲ್ಲಿ ಕೃತಕ ಸುಂದರಿಯನ್ನ ಸೃಷ್ಟಿಸಲಾಗಿದೆ. ಇಲ್ಲಿನ ವಿದ್ಯಾರ್ಥಿಗಳೇ ಕೂಡಿಕೊಂಡು ನಡೆಸುವ ಸಹ್ಯಾದ್ರಿ ಟಿವಿಯಲ್ಲಿ ನಿನ್ನೆ ಮೊದಲ ಭಾರಿಗೆ ಗೀತಾ ಎಂಬ ಹೆಸರಿನ ಎಐ ನಿರೂಪಕಿಯ ಮೂಲಕ ನ್ಯೂಸ್​ ಓದಿಸಲಾಗಿದೆ. ಶಿವಮೊಗ್ಗದ ಮಟ್ಟಿಗೆ ಇದು ಮೊದಲ ಪ್ರಯತ್ನವಾಗಿದ್ದು, ಅಲ್ಲಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯ ಪ್ರಯತ್ನಕ್ಕೆ ಹಲವರ ಶಹಬ್ಬಾಸ್ ಎಂದಿದ್ಧಾರೆ. ಮಲೆನಾಡಿನ ಅಪ್ಪಟ ಭಾಷೆಯೊಂದಿಗೆ ಸುದ್ದಿ ಓದಿದ ಕೃತಕ ಆ್ಯಂಕರ್ ಗೀತಾಳ ಕಾರ್ಯನಿರ್ವಹಣೆ ಕೂಡ ಮೆಚ್ಚುಗೆಗೆ ಪಾತ್ರವಾಗಿದೆ.