KARNATAKA NEWS/ ONLINE / Malenadu today/ Jul 15, 2023 SHIVAMOGGA NEWS
ಹೊಸನಗರ/ ಮಳೆ ಬಂದರೂ, ಬೇಸಿಗೆಯಲ್ಲಿ ಕುಡಿಯುವ ನೀರಿನ ಸರಭರಾಜಿಗಾಗಿ ಬಿಲ್ ಮಂಜೂರು ಮಾಡದ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಈ ಸಂಬಂಧ ಟ್ಯಾಂಕರ್ಗಳಲ್ಲಿ ಹಳ್ಳಿಹಳ್ಳಿಗೆ ನೀರಿ ಸೌಕರ್ಯಗಳನ್ನ ಒದಗಿಸಿದ್ದಕ್ಕೆ ನೀಡಬೇಕಿದ್ದ ಹಣ ಕೊಟ್ಟಿಲ್ಲ ಎಂದು ಈ ಹಿಂದೆ, ನಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಾಕರ್ ಶೆಟ್ಟಿ ಹೊಸನಗರ ತಾಲ್ಲೂಕು ಪಂಚಾಯಿತಿ ಎದುರು ಸಗಣಿ ನೀರನ್ನ ಮೈಮೇಲೆ ಎರಚಿಕೊಂಡು ಪ್ರತಿಭಟನೆ ನಡೆಸಿದ್ದರು.
ಇದೀಗ ಅದೇ ವಿಚಾರವಾಗಿ ನಗರದಿಂದ ಕಾಲ್ನಡಿಗೆಯಲ್ಲಿ ಹೊಸನಗರಕ್ಕೆ ಪಾದಯಾತ್ರೆ ನಡೆಸಿದ್ದಾರೆ. ಆರ್ಡಿಪಿಆರ್, ಜಿಲ್ಲಾಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ದಿಕ್ಕಾರ ಎಂಬ ಬೋರ್ಡ್ ಹಾಕಿಕೊಂಡು ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು ಹೊಸ ಸರ್ಕಾರ ಬಂದರೂ ಕೂಡ ಬಿಲ್ ಮಂಜೂರಾತಿ ಆಗದಿದ್ದಕ್ಕೆ ಆಕ್ರೋಶ ಹೊರಹಾಕಿದ್ಧಾರೆ.
ಬೇಸಿಗೆಯಲ್ಲಿ ಅಧಿಕಾರಿಗಳ ಮಾತು ಕಟ್ಟಿಕೊಂಡು ಜನಪ್ರತಿನಿಧಿಗಳು ದುಡ್ಡುಹಾಕಿ ಮನೆ ಮನೆಗೆ ನೀರನ್ನ ಟ್ಯಾಂಕರ್ ಮೂಲಕ ಒದಗಿಸಿದ್ದರು. ಆದರೆ ಅದರ ಬಿಲ್ ಮಂಜೂರು ಮಾಡದ ಅಧಿಕಾರಿಗಳು ಪ್ರತಿಸಲವೂ ಸಬೂಬು ಹೇಳುತ್ತಿದ್ದಾರೆ ಎಂಬುದು ಪ್ರತಿಭಟನಾಕಾರರ ಆರೋಪ, ಅಲ್ಲದೆ ನಿನ್ನೆ ನಡೆದ ಪ್ರತಿಭಟನೆ ವೇಳೆಯಲ್ಲಿಯು ಅಧಿಕಾರಿಗಳು ಧರಣಿ ನಿರತರನ್ನ ಸಾಗು ಹಾಕುವ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಜನಪ್ರತಿನಿಧಿಗಳು, ಜನರು ತಮ್ಮನ್ನು ಆಯ್ಕೆ ಮಾಡಿದ್ದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಓಡಾಡಲಿಕ್ಕಲ್ಲ. ಜನರ ಕೆಲಸ ಮಾಡಿದ್ದರ ಹಣವೇ ಪಾವತಿಯಾಗದಿದ್ದರೇ, ಹೇಗೆ ಕೆಲಸ ಮಾಡಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ನರೇಗಾ ಯೋಜನೆ ಬಾವಿಗಳಿಗೆ ಕ್ರಿಯಾಯೋಜನೆ ಆಗದೆ ಇರುವುದು ಮತ್ತು ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಯನ್ನು ಹಾಗೂ ದ್ವಿತೀಯ ದರ್ಜೆ ಲೆಕ್ಕ ಪರಿಶೋಧಕ ಮತ್ತು ನೀರು ಗಂಟೆಯನ್ನು ನೇಮಿಸಿದೆ ಇರುವುದನ್ನು ಖಂಡಿಸಿದರು
ಕುಡಿಯುವ ನೀರು ಸರಭರಾಜು ಮಾಡಿದ್ದರ ಬಿಲ್ ಮಂಜೂರಾತಿ ಮಾಡಿಲ್ಲವೆಂದು ಕುತ್ತಿಗೆಗೆ ಬೋರ್ಡ್ ಹಾಕಿಕೊಂಡು ಪ್ರತಿಭಟಿಸಿದ ಜನಪ್ರತಿನಿಧಿಗಳು! #shivamogga #hosanagara pic.twitter.com/jIoS9owG8i
— malenadutoday.com (@CMalenadutoday) July 15, 2023
