KARNATAKA NEWS/ ONLINE / Malenadu today/ Jul 15, 2023 SHIVAMOGGA NEWS
ಶಿವಮೊಗ್ಗ ನಗರದ ಪ್ರಮುಖ ಕಾಲೇಜುಗಳ ಬಳಿಯಲ್ಲಿ ವೀಲಿಂಗ್ ಮಾಡ್ತಿದ್ದ ಇಬ್ಬರು ಯುವಕರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ವೀಲಿಂಗ್ ಮಾಡಿದ ವಿಡಿಯೋಗಳು ವೈರಲ್ ಆಗಿದ್ದಷ್ಟೆ ಅಲ್ಲದೆ ಈ ಸಂಬಂಧ ಸಾರ್ವಜನಿಕರು ದೂರು ನೀಡಿದ ಬೆನ್ನಲ್ಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಏನಿದು ಘಟನೆ
ಶಿವಮೊಗ್ಗ ನಗರದ ಪ್ರಮುಖ ಕಾಲೇಜುಗಳ ಬಳಿಯಲ್ಲಿ ಇಬ್ಬರು ಯುವಕರು ವೀಲಿಂಗ್ ಮಾಡುತ್ತಾ ಸ್ಟಂಟ್ ಮಾಡುತ್ತಿದ್ದರು. ಇಬ್ಬರು ಯುವಕರು ಸ್ಟಂಟ್ ಮಾಡುತ್ತಿದ್ದರೇ, ಇನ್ನೊಂದು ಬೈಕ್ನಲ್ಲಿ ಅದನ್ನ ಮತ್ತೊಬ್ಬ ಯುವಕ ಶೂಟ್ ಮಾಡಿದ್ದ. ಎರಡು ಕೂಡ ಅಪಾಯಕಾರಿ ಕೆಲಸವಷ್ಟೆ ಅಲ್ಲದೆ ಪಬ್ಲಿಕ್ ನ್ಯೂಸೆನ್ಸ್ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಸಂಬಂಧ ಪೊಲೀಸರಿಗೆ ಸಾರ್ವಜನಿಕರು ನಿರಂತರ ದೂರು ಹಾಗೂ ಫೋಟೋ ವಿಡಿಯೋ ಸಾಕ್ಷಿಗಳನ್ನು ನೀಡಿದ ಬಳಿಕ ಶಿವಮೊಗ್ಗ ಟ್ರಾಫಿಕ್ ಪೊಲೀಸರು ಇಬ್ಬರು ಯುವಕರನ್ನ ಸ್ಠೇಷನ್ ಕರೆದುಕೊಂಡು ಬಂದು ದಂಡ ವಿಧಿಸಿದ್ದಾರೆ.
ವೀಲಿಂಗ್ ಹಾವಳಿ ಶಿವಮೊಗ್ಗದಲ್ಲಿಯು ಕಮ್ಮಿಯೇನಿಲ್ಲ. ಪ್ರಮುಖ ರಸ್ತೆಗಳಲ್ಲಿಯೇ ಮುಂದಿನ ವೀಲ್ಹ್ ಎತ್ತಿಕೊಂಡು, ಬೈಕ್ನಲ್ಲಿ ಸ್ಟಂಟ್ ಮಾಡುವ ಹುಡುಗರು, ಕೆಟ್ಟದಾಗಿ ಸೌಂಡ್ ಮಾಡುವಂತೆ ಸೈಲ್ಸೆನ್ಸರ್ ಆಲ್ಟರ್ ಮಾಡಿಕೊಂಡು ಶಿವಮೊಗ್ಗ ನಗರದ ಒಳ ರಸ್ತೆಗಳಲ್ಲಿ ಓಡಾಡುತ್ತಲೇ ಇರುತ್ತಾರೆ. ಸದ್ಯ ಈ ಪ್ರಕರಣ ಅಂತಹವರಿಗೆ ಎಚ್ಚರಿಕೆಯಾಗಬೇಕಿದೆ.
ಸಾಗರ ತಾಲ್ಲೂಕಿನ ಐಗಿನಬೈಲ್ನಲ್ಲಿ ಅಪಘಾತಕ್ಕೀಡಾಡ ಖಾಸಗಿ ಬಸ್! ಅನುಮಾನಕ್ಕೂ ಕಾರಣವಾಯ್ತು ಮಾಂಸದ ಮೂಟೆ!
ಸಾಗರ/ ತಾಲ್ಲೂಕಿನ ಐಗಿನ ಬೈಲ್ ಬಳಿಯಲ್ಲಿ ಖಾಸಗಿ ಬಸ್ವೊಂದು ಅಪಘಾತಕ್ಕೀಡಾಗಿದ್ದು, ಎರಡು ಕಾರುಗಳಿಗೆ ಬಸ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ.
ಏನಿದು ಘಟನೆ?
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಹಾದುಹೋಗುವ ಬೆಂಗಳೂರು ಹೊನ್ನಾವರ ರಸ್ತೆಯಲ್ಲಿ ಸಾಗರದಿಂದ ಧರ್ಮಸ್ಥಳಕ್ಕೆ ಹೊರಟಿದ್ದ ಜಿಆರ್ಬಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಶಿವಮೊಗ್ಗದಿಂದ ಬರುತ್ತಿದ್ದ ಎರಡು ಕಾರುಗಳಿಗೆ ಡಿಕ್ಕಿಯಾಗಿದೆ. ಈ ಪೈಕಿ ಒಂದು ಕಾರಿನಲ್ಲಿ ನ್ಯಾಯಾದೀಶರೊಬ್ಬರು ಶಿವಮೊಗ್ಗದಿಂದ ಸಿಗಂದೂರು ಚೌಡೇಶ್ವರಿ ದೇವಸ್ಥಾನ (siganduru chowdeshwari temple) ಕ್ಕೆ ಹೋಗುತ್ತಿದ್ದರು. ಇನ್ನೊಂದು ಕಾರು ಶಿವಮೊಗ್ಗದಿಂದ ಸಾಗರಕ್ಕೆ ಬರುತ್ತಿತ್ತು ಎಂದು ಹೇಳಲಾಗಿದ್ದು, ಕಾರಿನಲ್ಲಿ ಮಾಂಸದ ಮೂಟೆಯು ಸಿಕ್ಕಿದ್ದು, ಅಲ್ಲಿದ್ದವರು, ದನದ ಮಾಂಸವನ್ನು ಕಾರಿನಲ್ಲಿ ಸಾಗಿಸುತ್ತಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಐಗಿನಬೈಲಿನ ಬಳಿಯ ತಿರುವಿನಲ್ಲಿ ಘಟನೆ ನಡೆದಿದ್ದು ಚಾಲಕನ ನಿಯಂತ್ರಣ ತಪ್ಪಿದ ಬಸ್ ಎರಡು ಕಾರಿಗಳಿಗೆ ಡಿಕ್ಕಿ ಹೊಡೆದು ನಿಂತಿದೆ. ವಿಷಯ ಗೊತ್ತಾಗುತ್ತಲೇ ಸ್ಥಳಕ್ಕೆ ಬಂದ ಆನಂದಪುರಂ ಪೊಲೀಸ್ ಸ್ಟೇಷನ್ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.
ಅಧಿಕಾರಿಗಳ ಆಟ, ಜನಪ್ರತಿನಿಧಿಗಳಿಗೆ ಜೀವ ಸಂಕಟ! ಹೊಸನಗರದಲ್ಲಿ ಇದೆಂಥಾ ಅವಸ್ಥೆ ಮಾರಾಯ್ರೆ!
