ತೀರ್ಥಹಳ್ಳಿ ಪಟ್ಟಣಕ್ಕೆ ಏನಾಗಿದೆ!? ನಿನ್ನೆ ಆಗುಂಬೆ ಸರ್ಕಲ್​ನಲ್ಲಿ ಆಗಿದ್ದೇನು? ತಾಗಿದ್ಯಾರು? ಪೊಲೀಸರ ಖಾಯಂ ಅತಿಥಿ ಕಿರಿಕ್​ನ ಕಂಪ್ಲೀಟ್ ರಿಪೋರ್ಟ್!?

Malenadu Today

KARNATAKA NEWS/ ONLINE / Malenadu today/ Jul 12, 2023 SHIVAMOGGA NEWS 

ತೀರ್ಥಹಳ್ಳಿ / ಪಟ್ಟಣಕ್ಕೆ ಏನಾಗಿದೆ? ಹೀಗೊಂದು ಪ್ರಶ್ನೆ ಕೇಳುತ್ತಿರೋದು ತೀರ್ಥಹಳ್ಳಿಯವರೇ! ಇದಕ್ಕೆ ಕಾರಣ ಕಳೆದ ಒಂದೆರಡು ತಿಂಗಳಿನಲ್ಲಿ ಪೇಟೆಯಲ್ಲಿ ನಡೆಯುತ್ತಿರುವ ಘಟನೆಗಳು. 

ಅಶ್ಲೀಲ ವಿಡಿಯೋಗಳು, ವೇಶ್ಯಾವಾಟಿಕೆ ದಂಧೆ, ಹನಿಟ್ರ್ಯಾಪ್​ ಹೀಗೆ ಸಾಲು ಸಾಲು ಕ್ರೈಂಗಳಿಂದ ತೀರ್ಥಹಳ್ಳಿ ಸುದ್ದಿಯಾಗುತ್ತಿದೆ. ರಾಜ್ಯಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ತೀರ್ಥಹಳ್ಳಿ ಹೆಸರು ಚರ್ಚೆಯಾಗುತ್ತಿದೆ. ಇದರ ಸಾಲಿನಲ್ಲಿ ನಿನ್ನೆ ಮಧ್ಯಾಹ್ನದಿಂದ ಆರಂಭಗೊಂಡು, ಸಂಜೆಹೊತ್ತಿಗೆ ಟುವೇ ಹೈವೆನಲ್ಲಿ ಅಟ್ಟಾಡಿಸಿಕೊಂಡು ಮಚ್ಚು ಬೀಸುವುದರೊಂದಿಗೆ ಅಂತ್ಯಗೊಂಡ ಘಟನೆಯೊಂದು ಸೇರಿಕೊಂಡಿದೆ. 

Malenadu Today

ನಡೆದಿದ್ಧೇನು?

ತೀರ್ಥಹಳ್ಳಿಯಲ್ಲಿ ನಿನ್ನೆ ನಡೆದಿದ್ದು ಅವರರವರ ನಡುವಿನ ಗಲಾಟೆ. ಕುಡಿದು ಜಾಸ್ತಿಯಾಗಿ, ಧರ್ಮಕ್ಕೆ ಹೊಡೆದಿದ್ದಾರೆ. ಆದರೆ ಸಾಮಾಜಿಕ ಸ್ವಾಸ್ಥ್ಯವನ್ನು ಹಾಳು ಮಾಡಿರುವುದು ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಒಂದೆ ಬಾರಿನಲ್ಲಿ ಚೆನ್ನಾಗಿ ಕುಡಿದು, ನಡುವೆ ಮಾತಿಗೆ ಮಾತು ಬೆಳೆದು ಹೊಡಿತೀನಿ…ಹೊಡಿತೀನಿ ಎಂದು ಹೊಡೆದಾಡಿಕೊಂಡಿದ್ಧಾರೆ. ಆನಂತರ ರಾಜಿ ಪಂಚಾಯ್ತಿ ಹೆಸರಿನಲ್ಲಿ ನಡುರೋಡಿನಲ್ಲಿ ಕಿತ್ತಾಡಿಕೊಂಡಿದ್ಧಾರೆ. ಕಾರಿನಲ್ಲಿದ್ದ ಮಚ್ಚು ತಂದು ಅಲ್ಲಿದ್ದವರ ಮೇಲೆ ಬೀಸಿದ್ಧಾರೆ. ಇದೆಲ್ಲವೂ ನಡೆದಿದ್ದು ಛೋರ್​ ಸಮೀರ್​ ಎಂಬಾತ ಇದಕ್ಕೆಲ್ಲಾ ಕಾರಣ ಎನ್ನಲಾಗುತ್ತಿದೆ. ಮೂಲಗಳಲ್ಲಿ ನೋಡಿದ್ರೆ ಈತ ತೀರ್ಥಹಳ್ಳಿ ಪೊಲೀಸರ ಖಾಯಂ ಅತಿಥಿ..! 

Malenadu Today

ನಿನ್ನೆ ಆಗಿದ್ದೇನು?

ತೀರ್ಥಹಳ್ಳಿಯಲ್ಲಿ ಬಾರ್​ವೊಂದರಲ್ಲಿ ಮಧ್ಯಾಹ್ನದಿಂದಲೇ ತೀರ್ಥಸೇವನೆಯ ಜೊತೆಯಲ್ಲಿ ಕಿರಿಕ್ ಕೂಡ ತಣ್ಣಗೆ ಆರಂಭವಾಗಿತ್ತು. ಕಮ್ಮರಡಿ ಹಾಗೂ ತೀರ್ಥಹಳ್ಳಿಯವರು ಪರಸ್ಪರ ತಗ್ಲಾಕ್ಕಿಕೊಂಡಿದ್ದರು. ಯಾರ ಮಾತಿಗೆ ಯಾರು ಅಡ್ಡಬಂದರೋ ಗೊತ್ತಿಲ್ಲ, ಆದರೆ ಇದೇ ಕಾರಣಕ್ಕೆ ಜಗಳವಾಯ್ತು ಎಂದು ಹೇಳುವುದು ಕಷ್ಟ. ಸಂಜೆಯವರೆಗೂ ಎಳೆದುಕೊಂಡು ಬಂದ ಜಗಳ, ಕೊನೆಗೆ ರಸ್ತೆಗೆ ಬಂದು ನಿಂತಿತ್ತು. ಎರಡು ಗುಂಪಿನವರು ಕೈ ಕೈ ಮಿಲಾಯಿಸಿ ಕಲ್ಲುಗಳಿಂದ ಹೊಡೆದಾಡ್ತಿದ್ದರು. ಆನಂತರ ನಡೆದಿದ್ದು ಮಚ್ಚು ಬೀಸಿದ ಪ್ರಹಸನ.ಚೋರ್​​ ಸಮೀರ್ ಎಂಬಾತ, ಕಾರಿನಲ್ಲಿದ್ದ ಮಚ್ಚು ತಂದು ಅಲ್ಲಿದ್ದವರನ್ನ ಅಟ್ಟಾರಿಸಿದ್ದಾನೆ. ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ. 

Malenadu Today

ಸಿಸಿಟಿವಿಯಲ್ಲಿ ಕಂಡಿದ್ದೇನು?

ನಿನ್ನೆ ಸಂಜೆ ಹೊತ್ತಿಗೆ ನಡೆದ ಕಿರಿಕ್​ನ ಪೂರ್ತಿ ದೃಶ್ಯ ಸ್ಥಳೀಯರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಸಿಟಿವಿಯಲ್ಲಿ ಕಂಡಹಾಗೆ, ಮೂವರು ಯುವಕರ ಮೇಲೆ ಉಳಿದ ಮೂವರು ಅಟ್ಯಾಕ್ ಮಾಡಲು ಆರಂಭಿಸುತ್ತಾರೆ. ಅಷ್ಟೊತ್ತಿಗೆ ಒಬ್ಬ ರಸ್ತೆ ದಾಟಿ , ಕಲ್ಲು ಹೆಕ್ಕಿಕೊಂಡು ವಾಪಸ್​ ಹೊರಡುತ್ತಾನೆ. ಆದರೆ ಆ ಕಡೆಯ ರಸ್ತೆ ಬದಿಯಲ್ಲಿ ಚೋರ್ ಸಮೀರ್ ಮಚ್ಚು ತಂದು ಒಬ್ಬನ ಮೇಲೆ ಬೀಸುತ್ತಿರುತ್ತಾನೆ. ಅದೆ ಹೊತ್ತಿಗೆ ಕಲ್ಲು ಹಿಡಿದು ಬರುತ್ತಿದ್ದವನನ್ನು ಕಂಡು ಆತನನ್ನು ಸಹ ಅಟ್ಟಾಡಿಸುತ್ತಾನೆ. ಇದಿಷ್ಟು ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. 

ಗಾಯಾಳು ಹೇಳಿದ್ದೇನು?

ಇನ್ನೂ ಘಟನೆ ಬಗ್ಗೆ ಮಾತನಾಡಿರುವ ಗಾಯಾಳು ಅಪ್ರೋಜ್​ ನನಗಾಗಲೀ, ನಮ್ಮವರಿಗಾಗಲಿ ಸಮೀರ್ ಜೊತೆಗೆ ಯಾವುದೇ ದ್ವೇಷವಿಲ್ಲ. ನಾವಿದ್ದ ಜಾಗಕ್ಕೆ ಬಂದು ನಿಂತುಕೊಂಡು ಏನ್ರೋ ಎದೇ ನಿಗಿರುಸಿಕೊಂಡು ಮಾತನಾಡ್ತೀರಾ ಅಂತಾ ಪ್ರಶ್ನೆ ಮಾಡಿದ್ದಷ್ಟೆ ಅಲ್ಲದೆ ನನಗೆ ತಾಗಿದ..ಆತ ನನಗೆ ರಕ್ತ ತೋರಿಸಿದ್ದಾನೆ. ನಾನು ಆತನಿಗೆ ರಕ್ತ ತೋರಿಸ್ತಿನಿ.. ತೀರ್ಥಹಳ್ಳಿಯಲ್ಲಿ ಏನ್ ಮಾಡ್ಕೊಳ್ತೀಯಾ ಎಂದು ಕೇಳಿದ್ಧಾನೆ. ಹಾಗಾದರೇ ತೀರ್ಥಹಳ್ಳಿಯಲ್ಲಿ ಬೇರೆಯವರಿಗೆ ಜಾಗವಿಲ್ಲವೇ ಎಂದಿರುವ ಅಪ್ರೋಜ್​. ದ್ವೇಷವಿಲ್ಲದೇ ಹೊಡೆದಿದ್ದಾನೆ. ಆತನಿಗೆ ನಾನು ಸಹ ಹೊಡೆಯುತ್ತೇನೆ ಎಂದಿದ್ಧಾನೆ. ನಾಲ್ವರ ಮೇಲೆ ಹಲ್ಲೆಯಾಗಿದ್ದು , ಮೂರು ಜನರಿಗೆ ಬಿಗಿಯಾಗಿ ಪೆಟ್ಟಾಗಿದೆ ಎಂದಿದ್ದಾನೆ. 

Malenadu Today

ಎಲ್ಲಿಂದ ಬಂತು ಮಚ್ಚು, ತಲ್ವಾರ್ ಅಥವಾ ಕತ್ತಿ 

ಪೊಲೀಸ್  ಮೂಲಗಳ ಪ್ರಕಾರ, ಸಮೀರ್ ಬಳಿಸಿರುವುದು ಹರಿತವಾದ ಆಯುಧ. ಆದರೆ ಅದು ಮಚ್ಚು , ತಲ್ವಾರ್ ಮತ್ತೆ ಕೆಲವರು ಕತ್ತಿ ಎನ್ನುತ್ತಿದ್ದಾರೆ. ಎನೋ ಒಂದನ್ನ ಆತ ಬಳಸಿ ತೀರ್ಥಹಳ್ಳಿ ಪೇಟೆಯಲ್ಲಿ ಭಯ ಸೃಷ್ಟಿಸಿದ್ದಾನೆ. ಆತನ ವಿರುದ್ಧ ಕಠಿಣ ಕ್ರಮವಾಗಬೇಕಿದೆ. ಆದಾಗ್ಯು ಆತನ ಬಳಿಯಲ್ಲಿ ಸಿದ್ದ ಆಯುಧ ಎಲ್ಲಿಂದ ಬಂತು. ಹಾಗಾದರೇ ತೀರ್ಥಹಳ್ಳಿಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವುದು ಇಷ್ಟೊಂದು ಸಲೀಸಾ? ಎಂಬ ಪ್ರಶ್ನೆ ಮೂಡುತ್ತಿದೆ. ಅಲ್ಲದೆ ಆರೋಪಿಗಳು ಯಾವುದೋ ಅಪರಾಧ ಕೃತ್ಯಕ್ಕೆ ಮೊದಲೇ ಸಿದ್ದರಾಗಿದ್ರಾ? ಅಥವಾ ಜಾನುವಾರು ಕಳ್ಳತನ! ದರೋಡೆ ಇತ್ಯಾದಿ ಕ್ರೈಂಗೆ ಸ್ಕೆಚ್​ ರೂಪಿಸಿದ್ದಾರಾ? ಹೀಗೆಲ್ಲಾ ಅನುಮಾನ ತೀರ್ಥಹಳ್ಳಿಯಲ್ಲಿ ಮೂಡುತ್ತಿದೆ. 

Malenadu Today

ತೀರ್ಥಹಳ್ಳಿ ಪಟ್ಟಣಕ್ಕೆ ಏನಾಗಿದೆ?

 ಹಿಂದೆ ಗೃಹಸಚಿವರಾಗಿದ್ದು,ಸದ್ಯ ಮಾಜಿ ಸಚಿವರು ಹಾಲಿ ಶಾಸಕರು ಆಗಿರುವ ಆರಗ ಜ್ಞಾನೇಂದ್ರರವರ ಕ್ಷೇತ್ರದಲ್ಲಿ ಈ ರೀತಿಯ ಘಟನೆಗಳು ನಡೆಯುತ್ತಿರುವುದು ಅವರ ವಿರುದ್ಧದ ಟೀಕೆಗೆ ವಿಪಕ್ಷಗಳಿಗೆ ವೇದಿಕೆ ಕೊಟ್ಟಂತಾಗುತ್ತಿದೆ. ಮಧ್ಯಾಹ್ನದಿಂದ ನಡೆಯುತ್ತಿದ್ದ ಕಿರಿಕ್​ನ್ನ ಸಂಜೆಯವರೆಗೂ ಎಳೆದಾಡಲು ಸಾಧ್ಯವಾಗದಂತೆ ಪೊಲೀಸರು ತಡೆಯಬಹುದಿತ್ತು ಎನ್ನುತ್ತಿದ್ದಾರೆ ಸ್ಥಳೀಯರು. ಇನ್ನೂ ಮುಖ್ಯ ಆರೋಪಿ ಸಮೀರ್​ ತೀರ್ಥಹಳ್ಳಿ, ಪೊಲೀಸರ ಎಲ್ಲಾ ಕಾಲದ ಅತಿಥಿ. ಆಗಾಗ ಕೇಸ್​ ಹಾಕಿಸಿಕೊಳ್ಳುವ ಸಮೀರ್​, ಇದೀಗ ಪೇಟೆಯ ಆಗುಂಬೆ ಸರ್ಕಲ್​ನಲ್ಲಿ ಆಟಾಟೋಪ ಮರೆದಿದ್ಧಾನೆ. ಇದು ತೀರ್ಥಹಳ್ಳಿಗರ ತಾಳ್ಮೆಯನ್ನು ಕೆಡಿಸಿದೆ. ಮುಂದಿನ ಕ್ರಮಕ್ಕಾಗಿ ಪೊಲೀಸ್ ಇಲಾಖೆಯನ್ನು ಎದುರುನೋಡುತ್ತಿದ್ಧಾರೆ. 

ನಿಮ್ಮ ಮೊಬೈಲ್​ಗೂ ಬಂದಿರುತ್ತೆ ಈ ಮೆಸೇಜ್​! ನಂಬಿದ್ರೆ ನಾಮ ಗ್ಯಾರಂಟಿ! ಇಲ್ಲಿದೆ ಸಾಕ್ಷಿ ಓದಿ

 

 

Share This Article