ನಿಮ್ಮ ಮೊಬೈಲ್​ಗೂ ಬಂದಿರುತ್ತೆ ಈ ಮೆಸೇಜ್​! ನಂಬಿದ್ರೆ ನಾಮ ಗ್ಯಾರಂಟಿ! ಇಲ್ಲಿದೆ ಸಾಕ್ಷಿ ಓದಿ!

This message will also come to your mobile! If you believe it, you are guaranteed to be deceived! Read the proof here!

ನಿಮ್ಮ ಮೊಬೈಲ್​ಗೂ ಬಂದಿರುತ್ತೆ ಈ ಮೆಸೇಜ್​! ನಂಬಿದ್ರೆ ನಾಮ ಗ್ಯಾರಂಟಿ! ಇಲ್ಲಿದೆ ಸಾಕ್ಷಿ ಓದಿ!

KARNATAKA NEWS/ ONLINE / Malenadu today/ Jul 11, 2023 SHIVAMOGGA NEWS   

ಶಿವಮೊಗ್ಗ/ ಎಷ್ಟೆ ಬುದ್ದಿವಂತರಿದ್ದರೂ, ಟೆಕ್ನಾಲಿಜಿಯ ಸವಲತ್ತು ಹಾಗೂ ಉತ್ಪನ್ನಗಳಲ್ಲಿ ಯಾವಾಗ ಬೇಕಾದರೂ ಮೋಸವಾಗಬಹುದು.  ನಿಮ್ಮ ಮೊಬೈಲ್​ಗೆ ಬರುವ ಒಂದೇ ಒಂದು ಮೆಸೇಜ್​, ಆಸೆ ತೋರಿಸಿ ನಿಮ್ಮ ಅಕೌಂಟ್​ನ್ನೆ ಖಾಲಿ ಮಾಡಬಹುದು. ಇದಕ್ಕೆ ಪೂರಕವೆಂಬಂತಹ ಘಟನೆಯೊಂದು ಶಿವಮೊಗ್ಗದ ಪೊಲೀಸ್​ ಸ್ಟೇಷನೊಂದರ ವ್ಯಾಪ್ತಿಯಲ್ಲಿ ನಡೆದಿದೆ. 

ಏನಿದು ಪ್ರಕರಣ?

ಶಿವಮೊಗ್ಗದ ವಿನೋಬನಗರ ಪೊಲೀಸ್ ಸ್ಟೇಷನ್​ನಲ್ಲಿ ದಾಖಲಾದ ಕೇಸ್​ನಲ್ಲಿ ಬೊಮ್ಮನ ಕಟ್ಟೆಯ ನಿವಾಸಿಯೊಬ್ಬರು ವರ್ಕ್​ ಫ್ರಾಂ ಹೋಂ ಕೆಲಸವನ್ನು ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಟೆಲಿಗ್ರಾಂ ಆ್ಯಪ್​ನಲ್ಲಿ ವಿಕ್ಕಿ ಎಂಬ ಹೆಸರಿನಲ್ಲಿ ಮೆಸೇಜ್​ ಬಂದಿದ್ದು, ಟಾಸ್ಕ್​ ಓರಿಯೆಂಟೆಡ್​ ಜಾಬ್​ನ ಪರಿಚಯ ಮಾಡಿದ್ದಾನೆ.  ಮೇಸೆಜ್​ನ್ನ ನಂಬಿದ ಮಹಿಳೆಯು, ಅದರಲ್ಲಿ ತಿಳಿಸಲಾದ  ಟಾಸ್ಕ್​ ಪೂರೈಸಿದ್ದಾರೆ. ತಕ್ಷಣವೇ ದೂರುದಾರರ ಅಕೌಂಟ್​ಗೆ 1500 ರೂಪಾಯಿ ಬಂದಿದೆ. ಹೀಗಾಗಿ ಪೂರ್ತಿಯಾಗಿ ನಂಬಿದ ಮಹಿಳೆಯು ಇನ್ನಷ್ಟು ಟಾಸ್ಕ್​ ನಲ್ಲಿ ಪಾಲ್ಗೊಂಡಿದ್ದಾರೆ. ಅದರಂತೆ ವಸ್ತುಗಳನ್ನು ಟೆಲಿಗ್ರಾಂನಲ್ಲಿ ಹೇಳಿದ ಹಾಗೆ ಬೈ ಮಾಡಿ ಟಾಸ್ಕ್​ ಕಂಪ್ಲೀಟ್ ಮಾಡಿದ್ದಾರೆ. 

ಇದಕ್ಕಾಗಿ ಟೆಲಿಗ್ರಾಂನಲ್ಲಿ ತೋರಿಸಿದ ಅಕೌಂಟ್​ಗೆ ಹಲವು ಸಲ ಒಟ್ಟು 89500/- ರೂ ಗಳನ್ನು ಹಾಕಿದ್ಧರು. ಆದರೆ ಈ ಸಲ ದೂರುದಾರ ಮಹಿಳೆಯ ಅಕೌಂಟ್​ಗೆ ಹಣ ಬಂದಿರಲಿಲ್ಲ. ಹೀಗಾಗಿ ಅನುಮಾನಗೊಂಡು ಪ್ರಶ್ನಿಸಿದ್ದಾರೆ. ಇದಕ್ಕೆ ಮತ್ತಷ್ಟು ಹಣ ಹಾಕುವಂತೆ ಸಂದೇಶ ಬಂದಿದೆ.  ಇದರಿಂದ ಆತಂಕಗೊಂಡ ಮಹಿಳೆ ತಮ್ಮ ಕುಟುಂಬಸ್ಥರ ಜೊತೆ ಚರ್ಚಿಸಿ ಪೊಲೀಸರಿಗೆ ದೂರು ನೀಡಿದ್ಧಾರೆ. ಸದ್ಯ ಈ ಸಂಬಂಧ IPC 1860 (U/s-420) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. 


ಹುತಾತ್ಮ ವೀರ ಶಿವಮೂರ್ತಿ ಸರ್ಕಲ್​ ನಲ್ಲಿ ನಡೆದಿದ್ದಾರು ಏನು? ಕಾಣೆಯಾದ ಬೋರ್ಡ್​ ಬದಲಿಗೆ ಬಂತು ಮತ್ತೊಂದು ನಾಮಫಲಕ!

ಶಿವಮೊಗ್ಗ/ ನಗರದಲ್ಲಿ ಸ್ಮಾರ್ಟ್​ ಸಿಟಿ ಕಾಮಗಾರಿಯ ನಡುವೆ ಪ್ರಮುಖ ಸರ್ಕಲ್​ಗಳಲ್ಲಿ ಹಲವು ಯಡವಟ್ಟುಗಳು ನಡೆದಿದ್ದರ ಬಗ್ಗೆ  ಮಲೆನಾಡು ಟುಡೆ ವರದಿ ಮಾಡಿತ್ತು. ಹೊಸದನ್ನೇನೋ ಮಾಡುವ ಸಲುವಾಗಿ, ಹಿಂದಿನಿಂದಲೂ ಇದ್ದ ಬೋರ್ಡ್​ಗಳನ್ನು ತೆಗೆದುಹಾಕುವ ಕೆಲಸವಾಗುತ್ತಿತ್ತು. ಇದಕ್ಕೆ ಪೂರಕವಾಗಿ ಕಳೆದ ಒಂಬತ್ತನೇ ತಾರೀಖು ಹುತಾತ್ಮ ವೀರ ಶಿವಮೂರ್ತಿ ಹೆಸರಿನ ಬೋರ್ಡ್​ ಶಿವಮೂರ್ತಿ ಸರ್ಕಲ್​ನಿಂದ ಕಾಣೆಯಾಗಿರುವ ಬಗ್ಗೆ ಟುಡೆ ತಂಡ ವರದಿ ಮಾಡಿತ್ತು. ಅಲ್ಲದೆ ಈ ಸಂಬಂಧ ಮೇಯರ್ ಹಾಗೂ ಶಾಸಕರನ್ನು ಮಾತನಾಡಿಸಿತ್ತು. ಮೇಯರ್ ನನಗೆ ಈ ಬಗ್ಗೆ ಮಾಹಿತಿಯಿಲ್ಲ ಎಂದಿದ್ದರು. ಶಾಸಕರು ಸರ್ಕಲ್​ನಲ್ಲಿ ಶಿಲೆಯಿಂದ ಕೆತ್ತಿದ ನಾಮಫಲಕ ಬರುತ್ತದೆ ಎಂದಿದ್ದರುಇತ್ತ ಸ್ಮಾರ್ಟ್ ಸಿಟಿ ಕಾಮಗಾರಿ ಬೇರೆ ಬೇರೆ ಕಾರಣಕ್ಕೆ ವಿಳಂಬವಾಗುತ್ತಿದೆ ಎಂಬ ಆರೋಪದ ನಡುವೆ ಸರ್ಕಲ್​ನಲ್ಲಿದ್ದ ಶಿವಮೂರ್ತಿಯವರ ನಾಮಫಲಕ ನಾಪತ್ತೆಯಾಗಿ ಎರಡು ತಿಂಗಳೇ ಕಳೇದಿದೆ ಎನ್ನುವ ಆರೋಪವನ್ನು ಸ್ಥಳೀಯರು ಮಾಡಿದ್ದರು. ಅಲ್ಲದೆ ಬೋರ್ಡ್​ನ್ನ ಮತ್ತೆ ಹಾಕುತ್ತಾರಾ ಇಲ್ಲವೋ ಎಂದು ಅನುಮಾನಿಸಿದ್ದರು. ಇದೀಗ ಶಿವಮೂರ್ತಿ ಸರ್ಕಲ್​ನಲ್ಲಿ ವೀರ ಶಿವಮೂರ್ತಿಯವರ ನಾಮಫಲಕವನ್ನು ಮತ್ತೆ ಸ್ಥಾಪಿಸಲಾಗಿದೆ. ಶಿಲೆಯಲ್ಲಿ ಕೆತ್ತಿದ ನಾಮಫಲಕ ಇದಲ್ಲವಾದರೂ, ಹಳೆಯ ಸ್ಥಳದಲ್ಲಿಯೇ ಮತ್ತೆ ನಾಮಫಲಕವನ್ನು ನಿಲ್ಲಿಸಿರುವುದು ಸ್ಥಳೀಯರಿಗೆ ಸಮಾಧಾನ ತಂದಿದೆ. 

ಶಿವಮೂರ್ತಿಯವರ ನಾಮಫಲಕದ ಹಿನ್ನೆಲೆ ಏನು? ವಿಶೇಷತೆ ಏನು ಎಂಬುದರ ಬಗೆಗಿನ ಸುದ್ದಿ ಇಲ್ಲಿದೆ ಓದಿ : ಕಾಣೆಯಾದ ಹುತಾತ್ಮ ವೀರ ಶಿವಮೂರ್ತಿಯವರ ನಾಮಫಲಕ? 2 ತಿಂಗಳಿಂದ ಸರ್ಕಲ್​​ನಲ್ಲಿಲ್ಲ 7 ದಶಕದ ಬೋರ್ಡ್​? ಶಾಸಕರು-ಮೇಯರ್​ ಹೇಳಿದ್ದೇನು?