ತೀರ್ಥಹಳ್ಳಿ 38 ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ! ಎಲ್ಲೆಲ್ಲಿ ಯಾರ್ಯಾರು? ವಿವರ ಇಲ್ಲಿದೆ

Thirthahalli 38 panchayats to get president and vice-president reservation announced Who is there? Here's the details

ತೀರ್ಥಹಳ್ಳಿ 38 ಪಂಚಾಯಿತಿಗಳ ಅಧ್ಯಕ್ಷ ಉಪಾಧ್ಯಕ್ಷ ಮೀಸಲಾತಿ ಪ್ರಕಟ! ಎಲ್ಲೆಲ್ಲಿ ಯಾರ್ಯಾರು? ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Jun 21, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ 38 ಗ್ರಾಮ ಪಂಚಾಯಿತಿಗೆ ಸಂಬಂಧಿಸಿದಂತೆ 2 ನೇ ಅವಧಿಯ  ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿಯನ್ನು ಪ್ರಕಟಿಸಲಾಗಿದೆ. ಸೊಪ್ಪುಗುಡ್ಡೆಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಆರ್‌. ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಮೀಸಲಾತಿ ಆಯ್ಕೆ ಪ್ರಕ್ರಿಯೆ ನಡೆದಿದ್ದು , ಉಳಿದ 30 ತಿಂಗಳಿಗೆ ಮೀಸಲಾತಿ ಪ್ರಕಟಮಾಡಲಾಗಿದೆ. ಒಟ್ಟು 38 ಗ್ರಾಮ ಪಂಚಾಯಿತಿಗಳ ಪೈಕಿ  2 ಪರಿಶಿಷ್ಟ ಜಾತಿ (ಎಸ್‌ಸಿ),  10 ಬಿಸಿಎಂ- ‘ಎ’ 3 ಬಿಸಿಎಂ- ‘ಬಿ’ 23 ಸಾಮಾನ್ಯ ಮೀಸಲಾತಿ ಎಂದು ವರ್ಗೀಕರಿಸಲಾಗಿದೆ. ಇದು 19 ಮಹಿಳಾ ಮೀಸಲಾತಿಯು ಒಳಗೊಂಡಿದೆ

ಅರಳಸುರಳಿ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಅರೇಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 

ಆಗುಂಬೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಆರಗ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಕನ್ನಂಗಿ:  ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ), ಕುಡುಮಲ್ಲಿಗೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), 

ಕೋಣಂದೂರು ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಗುಡ್ಡೇಕೊಪ್ಪ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ), 

ರಾಮಕೃಷ್ಣಪುರ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ತ್ರಿಯಂಬಕಪುರ: ಅಧ್ಯಕ್ಷ  (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ತೂದೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಬಿ’), 

ದೇಮ್ಲಾಪುರ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ). ದೇವಂಗಿ:  ಅಧ್ಯಕ್ಷ  (ಎಸ್‌ಸಿ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ನಾಲೂರು ಕೊಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ ಮಹಿಳೆ), 

ನೆರಟೂರು: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ನೊಣಬೂರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಬಸವಾನಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ-ಎ), ಬಿದರಗೋಡು: ಅಧ್ಯಕ್ಷ (ಬಿಸಿಎಂ-ಎ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 

ಬೆಜ್ಜವಳ್ಳಿ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಬಿ’), ಬಾಂಡ್ಯಕುಕ್ಕೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ-‘ಎ’ ಮಹಿಳೆ), 

ಮಂಡಗದ್ದೆ: ಅಧ್ಯಕ್ಷ  (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಎಸ್‌ಸಿ), ಮೇಲಿನ ಕುರುವಳ್ಳಿ: ಅಧ್ಯಕ್ಷ (ಬಿಸಿಎಂ- ‘ಬಿ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಮುಳುಬಾಗಿಲು ಅಧ್ಯಕ್ಷ (ಬಿಸಿಎಂ- ‘ಬಿ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಮೇಗರವಳ್ಳಿ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಮೇಳಿಗೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲ್ಗಡಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಸಾಲೂರು: ಅಧ್ಯಕ್ಷ (ಎಸ್‌ಸಿ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’)

ಶಿಂಗನಬಿದರೆ: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಶೇಡ್ಗಾರು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಹಣಗೆರೆ: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹಾದಿಗಲ್ಲು: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), 

ಹಾರೋಗೊಳಿಗೆ: ಅಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ), ಹುಂಚದಕಟ್ಟೆ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’), 

ಹೆಗ್ಗೋಡು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಬಿಸಿಎಂ- ‘ಎ’ ಮಹಿಳೆ), ಹೆದ್ದೂರು: ಅಧ್ಯಕ್ಷ (ಬಿಸಿಎಂ- ‘ಎ’) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), ಹೊದಲಾ 

ಅರಳಾಪುರ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಬಿಸಿಎಂ- ‘ಎ’), ಹೊನ್ನೆತಾಳು: ಅಧ್ಯಕ್ಷ (ಸಾಮಾನ್ಯ) ಉಪಾಧ್ಯಕ್ಷ (ಸಾಮಾನ್ಯ ಮಹಿಳೆ), 

ಹೊಸಹಳ್ಳಿ: ಅಧ್ಯಕ್ಷ (ಸಾಮಾನ್ಯ ಮಹಿಳೆ) ಉಪಾಧ್ಯಕ್ಷ (ಸಾಮಾನ್ಯ) ಮೀಸಲಾತಿ ಪ್ರಕ್ರೀಯೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಎಸ್.‌ ಬಿರಾದರ್‌, ಪ್ರೋಬೇಷನರಿ ಐಎಎಸ್‌ ಅಧಿಕಾರಿ ದಲ್ಜಿತ್‌ ಕುಮಾರ್, ತಹಶೀಲ್ದಾರ್‌ ಅಮೃತ್‌ ಅತ್ರೇಶ್‌, ಇಒ ಶೈಲಾ ಎನ್‌. ಇದ್ದರು.


ಶಿವಮೊಗ್ಗ ಸಿಟಿಗೆ ಹೊಸ ಕಳೆ ನೀಡ್ತಿದೆ ಈ ರೈಲ್ವೇ ಮೇಲ್ಸೇತುವೆ! ಅಂತಿಮ ಹಂತ ತಲುಪಿದ ಕಾಮಗಾರಿ! ಹೇಗಿದೆ ನೋಡಿ!

ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕಡದಕಟ್ಟೆ ಬಳಿಯ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 34 ಹಾಗೂ ಶಿವಮೊಗ್ಗ ಸವಳಂಗ ರಸ್ತೆಯ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 49 ಹಾಗೂ ಕಾಶೀಪುರದ ರೈಲ್ವೆ ಲೆವೆಲ್‌ ಕ್ರಾಸಿಂಗ್‌ ಗೇಟ್‌ ಸಂಖ್ಯೆ 54 ಬಳಿ ಹಾಗೂ ಶಿವಮೊಗ್ಗ ವಿದ್ಯಾನಗರದ ಬಳಿ ಎಲ್.ಸಿ. 46ಕ್ಕೆ ವೃತ್ತಾಕಾರದ ರೈಲ್ವೆ ಮೇಲ್ಸೇತುವೆ ಕಾಮಗಾರಿಗಳು ಇನ್ನೇನು ಅಂತಿಮ ಹಂತಕ್ಕೆ ಬಂದಿದೆ. ಇದೇ ಡಿಸೆಂಬರ್​ನೊಳಗೆ ಅಂತಿಮವಾಗಿ ಎಲ್ಲಾ ಕಾಮಗಾರಿಗಳು ಉದ್ಘಾಟನೆ ಕಾಣಲಿವೆ. 

ಈ ಮಧ್ಯೆ ಅಂದಾಜು 30 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ  ಕಾಶಿಪುರ ರೈಲ್ವೆ ಕ್ರಾಸಿಂಗ್‌ ಬಳಿ ಕಾಮಗಾರಿ ಕೊನೆ ಹಂತಕ್ಕೆ ಬಂದಿದೆ. ಮುಖ್ಯವಾಗಿ ರೈಲ್ವೆ ಮೇಲ್ಸೇತುವೆ ಗೆ  680 ಟನ್​ ತೂಕದ ಸ್ಟೀಲ್​ ಬೌಸ್ಟ್ರಿಂಗ್ ಗ್ರೀಡ್​(​ steel bowstring girder) ನ್ನ ಅಳವಡಿಸಲಾಗಿದೆ. ಇದು ಆಕರ್ಷಕವಾಗಿ ಕಾಣುತ್ತಿದೆಯಷ್ಟೆ ಕಾಮಗಾರಿ ಪೂರ್ಣವಾಗಿದ್ದರ ಸುಳಿವು ನೀಡುತ್ತಿದೆ. 

ಶಿವಮೊಗ್ಗದ ಕಾಶಿಪುರ ರೈಲ್ವೆ ಗೇಟ್ ನ ಲೆವೆಲ್ ಕ್ರಾಸಿಂಗ್ ನಂ.52ರಲ್ಲಿ ಅಳವಡಿಸಲಾಗಿರುವ  ಸ್ಟೀಲ್​ ಬೌಸ್ಟ್ರಿಂಗ್ ಗ್ರೀಡ್​  680 ಟನ್ ತೂಕವಿದ್ದು 60 ಮೀಟರ್​ ಉದ್ದ ಹೊಂದಿದೆ. ತೀರ್ಥಹಳ್ಳಿಯಲ್ಲಿರುವ ತೂಗುಸೇತುವೆಯಂತೆ ಕಾಣುತ್ತಿರುವ ಮಾದರಿ ಎಲ್ಲೆಡೆ ಗಮನಸೆಳೆಯುತ್ತಿದೆ. ಇನ್ನೂ 60.76 ಕೋಟಿ  ವೆಚ್ಚದಲ್ಲಿ ಸವಳಂಗ ರಸ್ತೆಯಲ್ಲಿ ರೈಲ್ವೆ ಮೇಲ್ಸೇತುವೆ ಮತ್ತು ಕೆಳಸೇತುವೆಗಳ ನಿರ್ಮಾಣ,  49ಕೋಟಿ  ವೆಚ್ಚದಲ್ಲಿ ಭದ್ರಾವತಿಯಲ್ಲಿಯು ರೈಲ್ವೇ ಮೇಲ್ಸೇತುವೆ ಕಾಮಗಾರಿ ನಡೆಯುತ್ತಿದೆ.