politics in shivamogga : 06-06-2025  ಪೊಲೀಸರ ಅಮಾನತನ್ನು ವಿರೋಧಿಸಿ ನಗರ ಬಿಜೆಪಿ ಪ್ರತಿಭಟನೆ 

prathapa thirthahalli
Prathapa thirthahalli - content producer

politics in shivamogga : 06-06-2025  ಪೊಲೀಸರ ಅಮಾನತನ್ನು ವಿರೋಧಿಸಿ ನಗರ ಬಿಜೆಪಿ ಪ್ರತಿಭಟನೆ 

politics in shivamogga : ಆರ್​ಸಿಬಿ ತಂಡದ ವಿಜಯೋತ್ಸವದ ವೇಳೆ ಸಂಭವಿಸಿದ ಅವಘಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್​ ಸರ್ಕಾರ ಬೆಂಗಳೂರು ನಗರ ಪೊಲೀಸ್​  ಆಯುಕ್ತ ದಯಾನಂದ್​ ಸೇರಿದಂತೆ 06 ಮಂದಿ ಪೊಲೀಸರನ್ನು ಅಮಾನತುಗೊಳಿಸಿದೆ. ಈ ಹಿನ್ನೆಲೆ ಕಾಂಗ್ರೆಸ್​ ಸರ್ಕಾರದ ಈ ಕ್ರಮಕ್ಕೆ ವಿರೋದಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಅದರಂತೆ ಇಂದು ಶಿವಮೊಗ್ಗದ ನಗರ ಬಿಜೆಪಿ ಕಾಂಗ್ರೆಸ್​ ಸರ್ಕಾರದ ಅಮಾನತು ಕ್ರಮವನ್ನು ವಿರೋಧಿಸಿ ಸೀನಪ್ಪ ಶೆಟ್ಟಿ ವೃತ್ತದಲ್ಲಿ ಪ್ರತಿಭಟನೆಯನ್ನು ಕೈಗೊಂಡಿತು. ಈ ವೇಳೆ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್​ ಸರ್ಕಾರದ ವಿರುದ್ದ ಘೋಷಣೆ ಕೂಗಿ ಪ್ರತಿಭಟಿಸಿದರು. ಅಮಾಯಕ ಜೀವಗಳ ಮಾರಣಹೋಮಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಹಾಗಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್​ ಕೂಡಲೇ ರಾಜಿನಾಮೆ ನೀಡಬೇಕೆಂದು ಆಗ್ರಹಿಸಿದರು. 

Share This Article