ರಾಜಕಾರಣ ಅಗ್ಗದ ಬಾಯಿಮಾತುಗಳಿಗೆ ಸಾಕ್ಷಿಯಾಗ್ತಿದ್ದರೇ, ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಕ್ಷೇತ್ರ ಮಾತ್ರ, ಪೊಲೀಸ್ ರಾಜಕಾರಣಕ್ಕೆ ಸಾಕ್ಷಿಯಾಗ್ತಿದೆ. ಗೃಹಸಚಿವರ ಕ್ಷೇತ್ರದಲ್ಲಿ ಪೊಲೀಸರು ರಾಜಕಾರಣ ಮಾಡ್ತಿದ್ದಾರೆ ಎಂಬುದು ಕಾಂಗ್ರೆಸ್ ಆರೋಪ. ಎಲ್ಲೆಡೆ ಆರೋಪಿಗಳ ವಿರುದ್ಧ ಕೇಸ್ ಆದರೆ, ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ನವನು ಅಂತಾ ಗೊತ್ತಾದರೆ ಕೇಸ್ ಆಗುತ್ತದೆಯಂತೆ. ಕೈ ಪಾರ್ಟಿ ಅಂದರೆ, ಕೈಗೆ ಕೋಳ ತೊಡಿಸ್ತಿದ್ದಾರೆ ಎಂದು ಸ್ಥಳೀಯ ಮುಖಂಡರು ದೂರುತ್ತಿದ್ದಾರೆ.ಇದಕ್ಕೆ ನಿನ್ನೆ ತೀರ್ಥಹಳ್ಳಿಯ ಡಿವೈಎಸ್ಪಿ ಕಚೇರಿ ಸಾಕ್ಷಿಯಾಗಿತ್ತು.
ಮೊನ್ನೆ ನಡೆದ ಹರೀಶ್ ಮೇಲಿನ ಹಲ್ಲೆ ಕೇಸ್ನಲ್ಲಿ ಪೊಲೀಸರು ಘಟನಾ ಸ್ಥಳದಲ್ಲಿ ಇಲ್ಲದವರ ಮೇಲೂ ಕೇಸ್ ಹಾಕಿದ್ದಾರಂತೆ. ಹೀಗಂತ ಆರೋಪಿಸಿದ ಕಿಮ್ಮನೆ ರತ್ನಾಕರ್ ನೇರವಾಗಿ ಬಂದು ಡಿವೈಎಸ್ಪಿ ಕಚೇರಿ ಎದುರು ಧರಣಿ ಕೂತರು, ಅಲ್ಲಿಯೇ ಜಮಖಾನ ತರಿಸಿ ಮಲಗಿ ಪ್ರತಿಭಟನೆ ಆರಂಭಿಸಿದರು. ನಾನು ರಾಜಕೀಯವನ್ನು ಪವರ್, ದುಡಿಮೆ, ದುಡ್ಡಿಗಾಗಿ ಆಯ್ಕೆ ಮಾಡಿಕೊಂಡಿಲ್ಲ. ಎಫ್ಐಆರ್ ನಲ್ಲಿ ದಾಖಲಾದ ಮೂವರು ಕಾಂಗ್ರೆಸ್ ಕಾರ್ಯಕರ್ತರು ಸ್ಪಾಟ್ ನಲ್ಲಿ ಇದ್ದರೆ ನಾನು ಮುಂದಿನ ಚುನಾವಣೆಗೆ ಕಂಟೆಸ್ಟ್ ಮಾಡಲ್ಲ. ದುರುದ್ದೇಶ ಪೂರಕವಾಗಿ ಪ್ರಕರಣದಲ್ಲಿ ಭಾಗಿಯಾಗದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣ ದಾಖಲಾಗಿದೆ. ಸಿಸಿಟಿವಿ ಪ್ಯೂಟೇಜ್ ಚೆಕ್ ಮಾಡಿ ಹೇಳಿ. ತನಿಖೆ ಮಾಡದೆ ನಿರಪರಾಧಿಗಳ ಮೇಲೆ ಪ್ರಕರಣ ದಾಖಲಿಸುವ ಉದ್ದೇಶ ಏನಿತ್ತು. ಒಬ್ಬರು ಶುಕ್ರವಾರ ವಿದೇಶಕ್ಕೆ ದುಡಿಮೆಗಾಗಿ ತೆರಳುತ್ತಿದ್ದು ಪ್ರಕರಣ ರಾಜಿ ಮಾಡಿಸುವ ಸಲುವಾಗಿ ತಿರುಚಲಾಗಿದೆ. ‘ಬಿ’ ರಿಪೋರ್ಟ್ ಹಾಕುವವರೆಗೆ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಗೋಗರೆದ ಡಿವೈಎಸ್ಪಿ
ಇನ್ನೂ ಇತ್ತ ಡಿವೈಎಸ್ಪಿಯವರು ಪ್ಲೀಸ್ ಸಾರ್ ಆಫೀಸ್ ಗೆ ಬನ್ನಿ. ನೀವು ಮೊದಲ ಭಾರಿ ಇಲ್ಲಿಗೆ ಬಂದಿದ್ದೀರಾ. ನನ್ನ ಕಚೇರಿಗೆ ಬಂದಿಲ್ಲ. ಪರ್ಸನಲ್ ಇಂಟ್ರಸ್ಟ್ ತೆಗೆದುಕೊಂಡು ಪ್ರಕರಣ ಇತ್ಯರ್ಥ ಮಾಡುತ್ತೇನೆ. ಆರೋಪಿಗಳು ಅಲ್ಲದವರಿಗೆ ಬಿ ಫಾರ್ಮ್ ನೀಡುತ್ತೇನೆ ಎಂದು ಪುಸಲಾಯಿಸಿ ಗೋಗರೆದರು. ಇದನ್ನ ಅಲ್ಲಗಳೆದ ಕಿಮ್ಮನೆ ರತ್ನಾಕರ್ ನೀವು ಮಾಡಿದೆಲ್ಲ ಸಾಕು. ಪರವಾಗಿಲ್ಲ ನೀವು ರೆಸ್ಟ್ ತೆಗೆದುಕೊಳ್ಳಿ ನಾನು ಬಿ ಫಾರ್ಮ್ ನೀಡುವ ವರೆಗೆ ಮನೆಗೆ ಹೋಗಲ್ಲ ಎಂದು ಪಟ್ಟು ಹಿಡಿದರು. ತೀರ್ಥಹಳ್ಳಿ ಕ್ಷೇತ್ರದಲ್ಲಿ ಒಬ್ಬ ಅದೃಷ್ಟವಂತ ರಾಜಕಾರಣಿ ಇದ್ದರೆ ಅದು ಆರಗ ಜ್ಞಾನೇಂದ್ರ ಮಾತ್ರ. ಕೂದೊಡ್ಡಿಗೆ ಜಾನುವಾರು ರೀತಿ ಅವರು ಏನು ಮಾಡುವುದು ಬೇಡ. ಊರೆಲ್ಲ ಅಲೆದಾಡಿ ಮೆಂದು, ಮೈಯಾಳು ಮಾಡಿ ಬಂದರೆ ಸಾಕು. ಬಿಜೆಪಿ ಪಕ್ಷ ಕಾರು, ಜೀಪು, ಮನೆ, ಆಸ್ತಿ ಕೊಟ್ಟು ಸಂತೈಸುತ್ತೆ ಎಂದು ವ್ಯಂಗ್ಯವಾಡಿದ್ರು.
ನಡೆದಿದ್ದೇನು?
ವಿಚಾರ ಅಂದರೆ, ಕಳೇದ ಮಂಗಳವಾರ ರಾತ್ರಿ ಸುರಬೀ ಹೋಟೆಲ್ನಲ್ಲಿ ನಡೆದ ಗಲಾಟೆಯಲ್ಲಿ ಹರೀಶ್ ಎಂಬಾತನ ಮೇಲೆ ಹಲ್ಲೆಯಾಗಿದೆ. ಆತನನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಚಾರದಲ್ಲಿ ತೀರ್ಥಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಜೊತೆಯಲ್ಲಿಯೇ ಪ್ರತಿದೂರು ಸಹ ದಾಖಲಿಸಿಕೊಂಡಿದ್ದಾರೆ. ಒಟ್ಟು ಮೂವರು ಬಿಜೆಪಿ ಹಾಗೂ ಐವರು ಕಾಂಗ್ರೆಸ್ನವರ ಮೇಲೇ ಕೇಸ್ ದಾಖಲಾಗಿದೆ. ಈ ಪೈಕಿ ಘಟನಾ ಸ್ತಳದಲ್ಲಿ ಇಲ್ಲದವರ ಮೇಲೆ ಟಾರ್ಗೆಟ್ ಮಾಡಿ ಏಕೆ ಕೇಸ್ ಹಾಕಿದ್ದೀರಿ ಎಂಬುದು ಕಾಂಗ್ರೆಸ್ನ ಪ್ರಶ್ನೆ! ಅಲ್ಲದೆ ವಿದೇಶದಿಂದ ಬಂದವನೊಬ್ನರ ವಿರುದ್ಧ ಕೇಸ್ ಹಾಕಿದ್ದು, ಅವರ ಕೆಲಸವನ್ನು ಕಳೆಯುವ ದುರುದ್ದೇಶವಿದೆ ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆರೋಪವಾಗಿದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com