ಸಾಗರ ಹೆದ್ದಾರಿಯಲ್ಲಿ ರಸ್ತೆಬದಿಗಿಳಿದು ಅಪಘಾತಕ್ಕೀಡಾದ ಖಾಸಗಿ ಬಸ್!
Private bus falls on the roadside on sagar highway
SHIVAMOGGA | Jan 4, 2024 | ಶಿವಮೊಗ್ಗ ಜಿಲ್ಲೆ ಚೋರಡಿ ಸಮೀಪ ಪ್ರಯಾಣಿಕರಿದ್ದ ಬಸ್ವೊಂದು ಎದುರಿಗೆ ಬರುತ್ತಿದ್ದ ವಾಹನವೊಂದನ್ನ ಅವೈಡ್ ಮಾಡುವ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಹೆದ್ಧಾರಿ ಬದಿಗೆ ಹೋಗಿ ಅಪಘಾತವಾದ ಘಟನೆ ಸಂಭವಿಸಿದೆ.
ಇಲ್ಲಿನ ಕೋಣೆಹೊಸೂರು ಹಾಗೂ ತುಪ್ಪೂರು ನಡುವೆ ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದೆ. ಮೂಲಗಳ ಪ್ರಕಾರ ಖಾಸಗಿ ಬಸ್ ರಸ್ತೆಬದಿಯಲ್ಲಿದ್ದ ಗುಂಡಿಗೆ ಇಳಿದು ಒಂದು ಬದಿ ವಾಲಿಕೊಂಡು ನಿಂತಿದೆ. ಘಟನೆಯಲ್ಲಿ ಚಾಲಕನಿಗೆ ಪೆಟ್ಟಾಗಿದ್ದು ಅವರನ್ನ ಆಸ್ಪತ್ರೆಗೆ ಸೇರಿಸಲಾಗುತ್ತಿದೆ.
ವಾಹನವೊಂದು ಅಡ್ಡಬಂದ ಹಿನ್ನೆಲೆಯಲ್ಲಿ ಅದಕ್ಕೆ ಡಿಕ್ಕಿಯಾಗುವುದನ್ನ ತಪ್ಪಿಸುವ ಕಾರಣ ಚಾಲಕ ಬಸ್ನ್ನ ರಸ್ತೆ ಬದಿಗೆ ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆಯಿಂದ ಇಳಿದು ಅಲ್ಲಿದ್ದ ಗಿಡಗಂಟಿಗೆ ಡಿಕ್ಕಿಯಾಗಿ ನಿಂತಿದೆ. ಇನ್ನೂ ಸ್ಥಳಕ್ಕೆ ಕುಂಸಿ ಪೊಲೀಸ್ ಸ್ಟೇಷನ್ ಪೊಲೀಸರು ತೆರಳಿದ್ದು ಪರಿಶೀಲನೆ ನಡೆಸ್ತಿದ್ದಾರೆ.