ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ ಫೈನಲ್! ಶೀಘ್ರದಲ್ಲಿಯೇ ಬಿಡುಗಡೆ !

List of BJP district presidents finalised Released soon!

ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ ಫೈನಲ್! ಶೀಘ್ರದಲ್ಲಿಯೇ ಬಿಡುಗಡೆ !
List of BJP district presidents,ಬಿಜೆಪಿ ಜಿಲ್ಲಾಧ್ಯಕ್ಷರ ಪಟ್ಟಿ,

SHIVAMOGGA |  Jan 4, 2024  |   ಬಿಜೆಪಿ ಜಿಲ್ಲಾಧ್ಯಕ್ಷ ರ ಪಟ್ಟಿ ಇಂದು ಅಂತಿಮಗೊಂಡಿದ್ದು ಶೀಘ್ರದಲ್ಲಿಯೇ ಬಿಡುಗಡೆಯಾಗುವ ಸಾಧ್ಯತೆ ಇದೆ.  

ಬಹುನಿರೀಕ್ಷಿತ ಬಿಜೆಪಿ ಜಿಲ್ಲಾಧ್ಯಕ್ಷರು ಹಾಗೂ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಪೂರ್ಣಗೊಂಡಿದೆ. ಇವತ್ತು ಅಥವಾ ನಾಳೆ ಅಂದರೆ  ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿದೆ. 

READ : ಸಾಗರ ಹೆದ್ದಾರಿಯಲ್ಲಿ ರಸ್ತೆಬದಿಗಿಳಿದು ಅಪಘಾತಕ್ಕೀಡಾದ ಖಾಸಗಿ ಬಸ್!

ಬಿಜೆಪಿಯಲ್ಲಿ ಸಂಘಟನೆಗೆ ಹೆಚ್ಚು ಪ್ರಾತಿನಿಧ್ಯತೆ ಇರುವ ಸಲುವಾಗಿ ಜಿಲ್ಲಾಧ್ಯಕ್ಷ ಸ್ಥಾನಕ್ಕಾಗಿ ಲಾಬಿ ನಡೆಯುತ್ತಿದೆ. ಹಾಲಿ ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳಿಗೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡುವುದು ಸೂಕ್ತ ಎಂದು ಕೆಲ ನಾಯಕರು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಲವು ಪರಿಷ್ಕರಣೆ ನಡೆದಿದೆ.  

ಬಿಜೆಪಿಯ ನಾಲ್ವರು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಹಿರಿಯರ ಜತೆ ಸಮಾಲೋಚನೆ ನಡೆಸಿದ ಬಳಿಕ ಪಟ್ಟಿ ಅಂತಿಮಗೊಳಿಸಲಾಗಿದೆ. ವರಿಷ್ಠರಿಗೂ ಪಟ್ಟಿಯನ್ನು ಕಳುಹಿಸಲಾಗಿದ್ದು, ಬಹುತೇಕ ಶುಕ್ರವಾರ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ