ಚೋರಡಿಯಲ್ಲಿ ಭೀಕರ ಅಪಘಾತ ಮೂವರ ಸಾವು 50ಕ್ಕೂ ಹೆಚ್ಚು ಮಂದಿಗೆ ಗಂಭೀರವಾಗಿ ಗಾಯ

ಚೋರಡಿಯಲ್ಲಿ ಭೀಕರ ಅಪಘಾತ ಮೂವರ ಸಾವು 50ಕ್ಕೂ ಹೆಚ್ಚು ಮಂದಿಗೆ ಗಂಭೀರವಾಗಿ ಗಾಯ

KARNATAKA NEWS/ ONLINE / Malenadu today/ May 11, 2023 GOOGLE NEWS 

ಶಿವಮೊಗ್ಗ ಜಿಲ್ಲೆಯ ಚೋರಡಿಯ ಬಳಿ ಭೀಕರ ಸಂಭವಿಸಿದೆ ಎರಡು ಬಸ್ಸುಗಳ ನಡುವೆ ಪರಸ್ಪರ ಡಿಕ್ಕಿಯಾಗಿ 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ 

ಘಟನೆಯಲ್ಲಿ ಇದುವರೆಗೂ ಐವರು ಸಾವನ್ನಪ್ಪಿರುವ ಸಾಧ್ಯತೆ ಇದ್ದು ಸಾವಿನ ಸಂಖ್ಯೆ ಇನ್ನಷ್ಟು ಜಾಸ್ತಿ ಆಗುವ ಸಂಭವವಿದೆ.

ಘಟನೆಯಲ್ಲಿ ಹಲವರು ಇನ್ನೂ ಬಸ್ಸಿನಲ್ಲಿಯೇ ಸಿಲುಕಿದ್ದು ಅವರನ್ನ ರಕ್ಷಿಸುವ ಕಾರ್ಯಚರಣೆ ಮುಂದುವರೆದಿದೆ ಸ್ಥಳಕ್ಕೆ ಅಂಬುಲೆನ್ಸ್ ಗಳು ದೌಡಾಯಿಸಿವೆ. ಗಾಯಾಳುಗಳನ್ನ ಶಿವಮೊಗ್ಗದ ವಿವಿಧ ಆಸ್ಪತ್ರೆಗೆ ರವಾನಿಸಲಾಗುತ್ತಿದೆ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬಿಡು ಬಿಟ್ಟಿದ್ದು ರಕ್ಷಣಾ ಕಾರ್ಯಕರ್ತರಲ್ಲಿ ತೊಡಗಿದ್ದಾರೆ ಘಟನೆಯಲ್ಲಿ ಮುಖಮುಖ ಡಿಕ್ಕಿಯಾಗಿರುವ ಬಸ್ ಗಳನ್ನು ಬೇರ್ಪಡಿಸಲು ಜೆಸಿಬಿಯನ್ನ ಬಳಸಿಕೊಳ್ಳಲಾಗುತ್ತಿದೆ 

ಕುಂಸಿ ಠಾಣೆಯ ಪೊಲೀಸರು ಸ್ಥಳದಲ್ಲಿದ್ದು ಸ್ಥಳೀಯರ ಸಹಾಯದೊಂದಿಗೆ ಗಾಯಾಳುಗಳನ್ನ ಆಸ್ಪತ್ರೆಗೆ ರವಾನಿಸುತ್ತಿದ್ದಾರೆ ಘಟನೆಯಿಂದಾಗಿ ಸಾಗರ ಹೆದ್ದಾರಿ ಸಂಪೂರ್ಣ ಬಂದಾಗಿದೆ ಎರಡು ಬಸುಗಳು ಶಿಕಾರಿಪುರ ಶಿವಮೊಗ್ಗದ ನಡುವೆ ಸಂಚರಿಸುವ ಬಸ್ಗಳಾಗಿದ್ದು ಒಂದು ಬಸ್ಸಿನ ಚಾಲಕ ಕೂಡ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ

ಕುಮದ್ವತಿ ಸೇತುವೆ ಬಳಿಯಲ್ಲಿ ತಿರುವಿನಲ್ಲಿ ಬಸ್ ಡಿಕ್ಕಿಯಾಗಿವೆ ಡಿಕ್ಕಿಯಾದ ರಭಸಕ್ಕೆ ಒಂದು ಬಸ್  ಇನ್ನೊಂದು ಬಸ್ ನಲ್ಲಿ ಸಿಲುಕಿದೆ..

Read/ Bhadravati/  ಸಂಜೆ ಹೊತ್ತಿನಲ್ಲಿ ಮನೆಗೆ ನುಗ್ಗಿ ದರೋಡೆ! ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ರಾ ಪೊಲೀಸ್ 

Read/ Kichcha Sudeepa/  ನಟ ಸುದೀಪ್​ಗೆ ಬೆದಕಿಗೆ ಹಾಕಿದ್ದ ಆಪ್ತ ಡೈರಕ್ಟರ್​ ಬಂಧನ! ಸಿಕ್ಕಿಬಿದ್ದಿದ್ದು ಹೇಗೆ ಗೊತ್ತಾ? 

Malenadutoday.com Social media